Top 6 AI Tools for Students learning | ವಿದ್ಯಾರ್ಥಿಗಳು ತಪ್ಪದೇ ತಿಳಿಯಬೇಕಾದ 6 ಎಐ ಟೂಲ್ಸ್‌ಗಳು

Top 6 AI Tools for Students (ವಿದ್ಯಾರ್ಥಿಗಳಿಗೆ ಅತ್ಯಗತ್ಯವಾದ 6 ಎಐ ಟೂಲ್ಸ್‌ಗಳು): ನಿಮ್ಮ ವಿದ್ಯಾಭ್ಯಾಸವನ್ನು ನೆಕ್ಸ್ಟ್ ಲೆವೆಲ್‌ಗೆ ಕೊಂಡೊಯ್ಯುವ ಸಂಪೂರ್ಣ ಮಾರ್ಗದರ್ಶಿ

AI Tools for Students

Quotes Daily Facebook Post 20260702 182125 0000
ವಿದ್ಯಾರ್ಥಿಗಳು AI ನಿಂದ ವಿದ್ಯಾಬ್ಯಾಸ ಮಾಡುತ್ತಿರುವುದು.

ನಮಸ್ತೆ ಗೆಳೆಯರೇ ಎಲ್ಲರೂ ಹೇಗಿದ್ದೀರಾ ಕಾಮೆಂಟ ಮಾಡಿ ಕೆಳಗಡೆ ಇದೆ.

ನಮಸ್ತೆ ಗೆಳೆಯ ನಾನು ಇಂದಿನ ವಿಷಯದಲ್ಲಿ ಏನು ಹೇಳಲು ಬಯಸುತ್ತೇನೆ ಎಂದರೆ, ಇಂದು ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳು ಮನೆಯಲ್ಲಿ ಸ್ಮಾರ್ಟ್ ಆಗಿ ಹೇಗೆ ಓದುವುದು? ಮೊಬೈಲ್ ಫೋನ್ ನಲ್ಲಿ ಇರುವ ಸ್ಮಾರ್ಟ್ ಫೀಚರ್ಸ್ ಬಗ್ಗೆ ನಾನು ಹೇಳಲು ಹೊರಟಿದ್ದೇನೆ.ನೀವು ವಿದ್ಯಾರ್ಥಿಯಾಗಿದ್ದರೆ ನೀವು ಓದುವ ಸಮಯದಲ್ಲಿ ಮೊಬೈಲ್ ಯಾವ ರೀತಿಯಾಗಿ ನಿಮಗೆ ಉಪಯೋಗಕ್ಕೆ ಬರುತ್ತದೆ ಎಂದು ತಿಳಿಸಿದ್ದೇನೆ ಸಂಪೂರ್ಣವಾಗಿ ಓದಿ. ನಂತರ ನೀವು ಯಾವ ಯಾವ ರೀತಿಯಲ್ಲಿ ಮೊಬೈಲ್ ನಿಂದಾ ಓದಬಹುದು ಅಂತ ಇದೆಯಾ ಬರುತ್ತದೆ.

ನಾನು ಮೊದಲೇ ಹೇಳಿದಂತೆ ಈ ತಂತ್ರಜ್ಞಾನವು ತುಂಬಾನೇ ಬೆಳೆದಿದೆ. ಆದ್ರೆ ಇನ್ನು ಅನೇಕ ವಿದ್ಯಾರ್ಥಿಗಳು ಕೇವಲ ಪುಸ್ತಕ ಹಿಡಿದು ಓದುತ್ತಾರೆ. ಆದ್ರೆ ಪುಸ್ತಕ ಹಿಡಿದು ಓದುವುದು ಒಳ್ಳೆಯದು. ಅದರ ಜೊತೆಗೆ ಮನೆಯಲ್ಲಿ ಒಂದು ಸ್ಮಾರ್ಟ್ ಫೋನ್ ಇದ್ದರೆ ಅದನ್ನು ಸಹ ಉಪಯೋಗಿಸಿಕೊಂಡು ಒಬ್ಬ ಒಳ್ಳೆಯ ಲರ್ನರ್ ಆಗಬಹುದು.

ಆರ್ಟಿಫಿಷಿಯಲ್ ಇಂಟಲಿಜೆಂಟ್ (AI) ಇಂದು ಒಂದು ಸರ್ಚ್ ಇಂಜಿನ್ ಆಗದೆ, ಒಂದು ದೊಡ್ಡ ನಮ್ಮ ಪಾಲಿಗೆ ಸಹಾಯ ಮಾಡುವ ಒಬ್ಬ ಸ್ನೇಹಿತನಂತೆ ಬದಲಾಗಿದೆ. ಇದರಲ್ಲಿ ನಮಗೆ ಗೊತ್ತಿಲ್ಲದ ವಿಷಯವೆನ್ನು ಕೇಳಿದಾಗ ಅದು ಕೇವಲ ಕೆಲವೇ ಸೇಕಿಂಡಿನಲ್ಲಿ ನಮಗೆ ಉತ್ತರ ನೀಡುತ್ತದೆ. ಅದೇ ರೀತಿ ಇದನ್ನು ಉಪಯೋಗಿಸಿಕೊಂಡು ವಿದ್ಯಾರ್ಥಿಗಳು ವಿದ್ಯಾಬ್ಸa ಮಾಡಬಹುದು ಅಂದ್ರೆ ನಂಬುತ್ತೀರಾ? ಹೌದು ನಂಬಲೇ ಬೇಕು.

ಇದನ್ನು ಓದಿ:- Best Upcoming 5G Smartphones in July 2026: ಜುಲೈನಲ್ಲಿ ಬಿಡುಗಡೆಯಾಗುತ್ತಿರುವ ಟಾಪ್ 5 ಸ್ಮಾರ್ಟ್‌ಫೋನ್‌ಗಳು!”

1. Study Timetable Planner (ಸ್ಟಡಿ ಟೈಮ್‌ಟೇಬಲ್ ಪ್ಲಾನರ್): ChatGPT ಬಳಸಿ ಕರಾರುವಕ್ಕಾದ ವೇಳಾಪಟ್ಟಿ ಸಿದ್ಧಪಡಿಸಿ.

ಹೌದು ಯಾವುದೇ ವಿದ್ಯಾರ್ಥಿಗಳು ಆಗಲಿ ಮೊದಲು ಓದುವುದಕ್ಕೆ ನಿರ್ಧರಿಸಿದಾಗ, ಈ ಸಮಯಕ್ಕೆ ಇಷ್ಟು ಓದಬೇಕು, ಈ ಸಮಯಕ್ಕೆ ಈ ಒಂದು subject ನ ಓದಬೇಕು ಎಂದು ನಿರ್ಧರಿಸಬೇಕು. ಇಂತಹ ವಿಶಯಗಳನ್ನು ಮೊಬೈಲ್ ನಲ್ಲಿ ಯಾವ ಫೀಚರ್ ಹೆಲ್ಪ್ ಮಾಡುತ್ತದೆ ಎಂದರೆ,

ಅನೇಕ ವಿದ್ಯಾರ್ಥಿಗಳು ದಿನಕ್ಕೆ 10 ಗಂಟೆ ಕುಳಿತು ಓದಿದರು exam result ಬಂದಮೇಲೆ ಉತ್ತಮವಾದ ಮಾರಕ್ಸ್ ತೆಗೆದುಕೊಳ್ಳುವಲ್ಲಿ ವಿಫಲರಾಗುತ್ತಾರೆ. ಇದಕ್ಕೆ ಮುಕ್ಯ ಕಾರಣ ಅಂದ್ರ ಅದು ನೀವು ಓದಲು ಸಿದ್ಧಪಡಿಸಿಕೊಂಡು ಇರುವ ಟೈಮ್ ಟೇಬಲ್. ವಿದ್ಯಾರ್ಥಿಗಳಿಗೆ ಟೈಮ್ ಟೇಬಲ್ ನ ChatGPT ಅಂತಹ AI ಸಾಧನವು ಕೆಲವು ಸೇಕಿಂಡಿನಲ್ಲಿ ನಿಮಗೆ ಟೈಮ್ ಟೇಬಲ್ ಸಿದ್ಧಪಡಿಸಿ ನಿಮಗೆ ನೀಡುತ್ತದೆ. ನಂತರ ನೀವು ಆಯಾ ಸಮಯಕ್ಕೆ ತಕ್ಕಂತೆ ವಿದ್ಯಾಬ್ಯಾಸ ಮಾಡಬಹುದು.

ಇದನ್ನು ಮಾಡುವುದು ಹೇಗೆ?

  • ನೀವು ಮಾಡಬೇಕಾದ ಕೆಲಸ ಇಷ್ಟೇ: ಮೊದಲಿಗೆ ನಿಮ್ಮ ಬಳಿ Chat GPT app ಇದ್ದರೆ ಓಪನ್ ಮಾಡಿ ಇಲ್ಲದಿದ್ದರೆ ಗೂಗಲ್ ನ ಬಳಿ ಹೋಗಿ chat GPT endu search ಮಾಡಿ. ನಂತರ ಓಪನ್ ಮಾಡಿ.
  • ನಂತರ ಅಲ್ಲಿ ನಿಮ್ಮ ಪರೀಕ್ಷೆಯ ದಿನಾಂಕ ಮತ್ತು ನಿಮಗೆ ಪ್ರತಿದಿನ ಲಭ್ಯವಿರುವ ಗಂಟೆಗಳ ಬಗ್ಗೆ AI ಗೆ ಸ್ಪಷ್ಟವಾದ ಮಾಹಿತಿ ನೀಡಿ. ಉದಾಹರಣೆಗೆ: “ನನಗೆ ಇನ್ನೂ 30 ದಿನಗಳು ಇವೆ, ದಿನಕ್ಕೆ 4 ಗಂಟೆ ಸಮಯವಿದೆ, ನಾನು ವಿಜ್ಞಾನ ಮತ್ತು ಗಣಿತವನ್ನು ಕವರ್ ಮಾಡಬೇಕು, ನನಗೆ ಪೋಮೊಡೋರೋ ತಂತ್ರದೊಂದಿಗೆ ಸ್ಟಡಿ ಪ್ಲಾನ್ ಮಾಡಿಕೊಡು” ಎಂದು ಕೇಳಿ
  • ಆಗ ಅದು ನಿಮಗೆ ರಿವಿಷನ್ ಗೆ ಪ್ರತ್ಯೇಕ ದಿನಗಳನ್ನು ಇಟ್ಟು, ಉಳಿದ ದಿನಗಳಲ್ಲಿ ಹೇಗೆ ಅಭ್ಯಾಸ ಮಾಡುವುದು ಎಂದು ಸಂಕ್ಷಿಪ್ತವಾಗಿ ಹೇಳಿಕೊಡುತ್ತದೆ. ಹೀಗೇ ನೀವು Chat GPT AI ನ ಬಳಸಿಕೊಂಡು ನಿಮ್ಮ ವಿದ್ಯಾಭ್ಯಾಸದ time ಟೇಬಲ್ ಅನ್ನು ಪಡೆಯಬಹುದು.

2. Personal AI Tutor (ವೈಯಕ್ತಿಕ ಎಐ ಟ್ಯೂಟರ್): ಕಷ್ಟದ ವಿಷಯಗಳ ಸರಳೀಕರಣ

ಈ AI ನ ಕೆಲಸ ಏನೆಂದರೆ ನಿಮಗೆ ತುಂಬಾ ಕಷ್ಟ ಅನ್ನಿಸುವ ವಿಷಯಗಳನ್ನು ಇದು ಸರಳವಾಗಿ ನಿಮಗೆ ಅರ್ಥ ಸಿಗುವಂತೆ ಮಾಡುತ್ತದೆ. ಉದಾಹರಣೆಗೆ: ಭೌತಶಾಸ್ತ್ರದ ನ್ಯೂಟನ್ ನಿಯಮಗಳು ಅಥವಾ ಅರ್ಥಶಾಸ್ತ್ರದ ಸಂಕೀರ್ಣ ಸಿದ್ಧಾಂತಗಳನ್ನು ಅರ್ಥಮಾಡಿಕೊಳ್ಳಲು ಕೆಲವೊಮ್ಮೆ ಶಿಕ್ಷಕರ ನೆರವು ತಕ್ಷಣಕ್ಕೆ ಸಿಗುವುದಿಲ್ಲ. ಅಂತಹ ಸಮಯದಲ್ಲಿ ಈ AI ಅನ್ನು ನಿಮ್ಮ ಪರ್ಸನಲ್ ಟ್ಯೂಟರ್ ಆಗಿ ಬಳಸಿ.

ಇದನ್ನು ಬಳಸುವುದು ಹೆಗೆ?

  • ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ gooole ಓಪನ್ ಮಾಡಿ. ನಂತರ ಅಲ್ಲಿ ಈ ರೀತಿ Personal AI Tutor ಅಂತ search ಮಾಡಿ. ಇದಕ್ಕೆ ಸಂಭಂದಿಸಿದಂತೆ ಅಲ್ಲಿ ಬರುವ website ಅನ್ನು ಓಪನ್ ಮಾಡಿ. ಅದರೊಳಗೆ ನಿಮಗೆ ಯಾವ ವಿಷಯ ಕಷ್ಟ ಅನ್ನಿಸುತ್ತದೆಯೋ ಆ ವಿಷಯವನ್ನು ಕೇಳಿ.
  • ತಂತ್ರ: ಎಐಗೆ ಸುಮ್ಮನೆ “ಇದನ್ನು ವಿವರಿಸಿ” ಎಂದು ಕೇಳುವ ಬದಲು, “ನನಗೆ ಈ ಟಾಪಿಕ್ ಅನ್ನು ದೈನಂದಿನ ಜೀವನದ ಉದಾಹರಣೆಗಳೊಂದಿಗೆ, ಒಂದು ಕಥೆಯ ರೂಪದಲ್ಲಿ ಸರಳ ಇಂಗ್ಲಿಷ್ ಅಥವಾ ಕನ್ನಡದಲ್ಲಿ ವಿವರಿಸು” ಎಂದು ಪ್ರಾಂಪ್ಟ್ ನೀಡಿ.
  • ಈಗ ನಿಮ್ಮ text book ನಲ್ಲಿ ತುಂಬಾ ದೊಡ್ಡ paragraaph ಇರುತ್ತೆ. ಆದ್ರೆ ಅದೆಲ್ಲವನ್ನೂ ಓದುವ ಬದಲು ಅದರಲ್ಲಿ ಮುಕ್ಯವಾದ ಪಾಯಿಂಟ್ ಮಾಡಿ ಕೊಡಿ ಎಂದು ಕೇಳಿ ಆಗ ಇದರಲ್ಲಿ ನಿಮಗೆ ಮುಕ್ಯವಾದ ಪಾಯಿಂಟ್ ಗಳು ಮಾತ್ರ ಬರುತ್ತವೆ. ಆಗ ನೀವು ಅವುಗಳನ್ನು ಓದಿಕೊಂಡು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.

ಇದನ್ನು ಓದಿ:- Special Intensive Revision (SIR) of Electoral Rolls Explained | Voter List Update Process in Kannada – ಮತದಾರರ ಪಟ್ಟಿ ನವೀಕರಣ ಸಂಪೂರ್ಣ ಮಾಹಿತಿ

3. Audio Learning with NotebookLM (ನೋಟ್‌ಬುಕ್ ಎಲ್‌ಎಂ ಮೂಲಕ ಆಡಿಯೋ ಕಲಿಕೆ)

ಈ AI tool ನಲ್ಲಿ ನೀವು ನಿಮ್ಮ text book ನಲ್ಲಿ ನಿಮಗೆ ಬೇಕಾಗಿರುವ ಹಾಳೆಯ ಫೋಟೋ ತೆಗೆದು ಹಸಕಿದರೆ ಸಾಕು ಇದು ಅದನ್ನು ನಿಮಗೆ ಆಡಿಯೋ ಅಂದ್ರೆ ಸಂಭಾಷಣೆ ಮಾಡುವ ರೀತಿ ನಿಮಗೆ ಕಳುಹಿಸುತ್ತದೆ. ನೀವೂ ಎಲ್ಲಾದರೂ ಪ್ರಯಾಣ ಮಾಡುವಾಗ ಮತ್ತು ವಾಕಿಂಗ್ ಮಾಡುವಾಗ ಇದನ್ನು ಬಳಸಬಹುದು. ಅದಲ್ಲದೆ ನಿಮಗೆ ಬೋರ್ ಆದಾಗ ಸಹ ಇದನ್ನು ಉಪಯೋಗಿಸಿ ಕೊಳ್ಳಬಹುದು.

ಇದನ್ನು ಹೇಗೆ ಬಳಸುವುದು

  • ಮೊದಲು ನಿಮ್ಮ ಮೊಬೈಲ್ ನಲ್ಲಿ Google Open ಮಾಡಿಕೊಳ್ಳಿ. ನಂತರ ಅದರಲ್ಲಿ ಹೀಗೇ search ಮಾಡಿ:- NotebookLM ಎಂದು. ನಂತರ ಅಲ್ಲಿ ಅದಕ್ಕೆ ಸಂಭಂದಿಸಿದ website ಬರುತ್ತದೆ.
  • ಆ website ಅನ್ನು ಓಪನ್ ಮಾಡಿ ನಂತರ ಅಲ್ಲಿ ಒಂದು ನೋಟ್ಬುಕ್ ಅನ್ನು creat ಮಾಡಿ. ಅದರಲ್ಲಿ ನೀವು ಈ ರೀತಿ ನೋಟ್ಬುಕ್ creat ಮಾಡಬಹುದು.1. file uplode 2. ನೀವೇ ಕೈಯಾರೆ ಬರೆಯಬಹುದು. 3. Website ನಿಂದಾ ಕಾಪಿ ಪೇಸ್ಟ್ ಮಾಡಬಹುದು. ಈ ರೀತಿ ನೀವು note book ಅನ್ನು creat ಮಾಡಬೇಕು.
  • ನಂತರ ಅಲ್ಲಿ chat ಮತ್ತು studeo ಎಂದು ಇರುತ್ತದೆ ಅಲ್ಲಿ ನೀವು studeo ವನ್ನ ಆಯ್ಕೆ ಮಾಡಿ.
  • ಅದದಾದಮೇಲೆ ನಂತರ ಅಲ್ಲಿ Audio Overview endu ಇರುತ್ತೆ ಅದನ್ನು ಆಯ್ಕೆ ಮಾಡಿಕೊಂಡು ಕೆಳಗಡೆ ಭಾಷೆ ಆಯ್ಕೆ ಮಾಡಿ. ಅದಾದಮೇಲೆ ನೀವು ಆಗಲೇ creat ಮಾಡಿರುವ note book ಅನ್ನು ಅಪ್ಲೋಡ್ ಮಾಡಿ. ನಂತರ ಅಲ್ಲಿ Generate ಅನ್ನು ಒತ್ತಿ ಕೊಡಿ ಅಲ್ಲಿಗೆ ನಿಮ್ಮ ಕೆಲಸ ಮುಗಿಯುತ್ತದೆ. ನಂತರ ನಿಮಗೆ ಆಡಿಯೋ ಸಿಗುತ್ತದೆ.

4. Active Recall and Mock Tests (ಮಾಕ್ ಟೆಸ್ಟ್ ಮತ್ತು ಆಕ್ಟಿವ್ ರಿಕಾಲ್): ಪರೀಕ್ಷೆಯ ಭೀತಿ ಓಡಿಸಿ

ಅಂದಹಾಗೆ ಇದು ಯಾವುದೇ AI ಅಲ್ಲ. ಇದನ್ನು ನೀವು ನಿಮ್ಮ ಮನೆಯಿಂದಲೇ ಮಾಡಬಹುದು. ಮಾಕ್ ಟೆಸ್ಟ್ ಮತ್ತು ಆಕ್ಟಿವ್ ರಿಕಾಲ್ ಎಂದರೆ: ನೀವು ಪರೀಕ್ಷೆಯ ಹಿಂದಿನ ರಾತ್ರಿ ಎಲ್ಲ ಕುಳಿತು ಹೊಡುವ ಬದಲು ಪರೀಕ್ಷೆಯ 4 ವಾರ ಮುಂಚಿತವಾಗಿಯೇ ಸಿದ್ಧತೆ ಮಾಡಿಕೊಳ್ಳುವುದನ್ನು ಮಾಕ್ ಟೆಸ್ಟ್ ಮತ್ತು ಆಕ್ಟಿವ್ ರಿಕಾಲ್ ಎನ್ನುತ್ತಾರೆ.

ಇದನ್ನು ಮಾಡುವುದು ಹೇಗೆ

  • 1ನೇ ವಾರ: AI ಬಳಸಿ ಚಾಪ್ಟರ್ ವೈಸ್ ರಸಪ್ರಶ್ನೆ (Quiz) ರಚಿಸಿ.
  • 2ನೇ ವಾರ: ಇಂಟರಾಕ್ಟಿವ್ ಫ್ಲ್ಯಾಶ್‌ಕಾರ್ಡ್‌ಗಳ ಮೂಲಕ ಕೀ-ವರ್ಡ್ಸ್ ಅಭ್ಯಾಸ ಮಾಡಿ.
  • 3ನೇ ವಾರ: ನೀವು ವೀಕ್ ಇರುವ ಟಾಪಿಕ್ ಮೇಲೆ ಮೈಕ್ರೋ-ಕ್ವಿಸ್ ಮಾಡಿ.
  • 4ನೇ ವಾರ: ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ ಮಾಕ್ ಟೆಸ್ಟ್ ತೆಗೆದುಕೊಳ್ಳಿ.

ಈ ರೀತಿ ಮಾಡುವುದರಿಂದ ನಿಮ್ಮ ಆತ್ಮ ವಿಶ್ವಾಸವನ್ನು ಇದು ಹೆಚ್ಚಿಸುತ್ತದೆ. ಮತ್ತು ಪರೀಕ್ಷೆ ಬರೆಯುವ ಸಮಯದಲ್ಲಿ ಯಾವುದೇ ರೀತಿಯಭಯ ಸಹ ಆಗುವುದಿಲ್ಲ.

ಇದನ್ನು ಓದಿ:- UPSC Recruitment 2026: Massive Recruitment for 450 Posts – Eligibility, Salary, Application Process Complete Details.ಅರ್ಹತೆ, ಸಂಬಳ, ಅರ್ಜಿ ಸಲ್ಲಿಸುವ ವಿಧಾನ ಸಂಪೂರ್ಣ ಮಾಹಿತಿ

5.Research Reports with Perplexity Pages (ರಿಸರ್ಚ್ ರಿಪೋರ್ಟ್ ಸಿದ್ಧಪಡಿಸಲು ಪರ್ಪ್ಲೆಕ್ಸಿಟಿ ಪೇಜಸ್)

ಅನೇಕ ವಿದ್ಯಾರ್ಥಿಗಳು ಏನು ಮಾಡುತ್ತಾರೆ ಅಂದ್ರೆ ತಮ್ಮ project work ಗಾಗಿ ನೀವು ಎಲ್ಲೆಲ್ಲೋ ಮತ್ತು ಯಾವ್ಯಾವೋ ಬುಕ್ಸ್ ಓದಿ ತಲೆಕೆಡಿಸಿಕೊಳ್ಳುತ್ತಾರೆ. ಆದ್ರೆ ಇದೆಯಲ್ಲ ಮಾಡುವ ಬದಲು ನೀವು ನೇರವಾಗಿ Perplexity AI ಅನ್ನು ಉಪಯೋಗಿಸಿಕೊಳ್ಳುವುದು ಉತ್ತಮ. ಇದು ಎಲ್ಲಾ ಮೂಲಗಳಿಂದ ವಿಷಯವನ್ನು ಕಲೆಕ್ಟ್ ಮಾಡಿ ನಂತರ ನಿಮಗೆ ಬೇಕಾದ ಮಾಹಿತಿಯನ್ನು ಅದು ಕೊಡುತ್ತದೆ.

ಇದನ್ನು ಉಪಯೋಗಿಸುವುದು ಹೆಗೆ

  • ನೀವು ನೇರವಾಗಿ ನಿಮ್ಮ ಮೊಬೈಲ್ ನಲ್ಲಿ google open ಮಾಡಿಕೊಂಡು ಅದರಲ್ಲಿ Perplexity endu search ಮಾಡಿ.ಅದಕ್ಕೆ ಸಂಭಂದಿಸಿದ website open ಮಾಡಿ.
  • ನಂತರ ನೀವು ಅಲ್ಲಿ ಕೆಳಗಡೆ type ಮಾಡುವ ಆಪ್ಷನ್ ಕಾಣಿಸುತ್ತದೆ. ಅದರಲ್ಲಿ ನೀವು Plus icon (+) ಕಾಣಿಸುತ್ತದೆ ಅದನ್ನ ಕ್ಲಿಕ್ ಮಾಡಿ. ನಂತರ ಅಲ್ಲಿ website ಅನ್ನು ಅಂಟಿಕ್ ಮಾಡಿ ಅಲ್ಲಿ Academic ಅನ್ನು on ಮಾಡಿ.
  • ನಂತರ ಅಲ್ಲಿ ಟೈಪ್ ಮಾಡುವಲ್ಲಿ ನಿಮಗೆ ಬೇಕಾದ ವಿಷಯ ಟೈಪ್ ಮಾಡಿದರೆ ನಿಮಗೆ ಕೊಡಬೇಕಾದ ವಿಷಯವನ್ನು ಅದು ಕೊಡುತ್ತದೆ.

6. Real-world Digital Skills (ನೈಜ ಜಗತ್ತಿನ ಡಿಜಿಟಲ್ ಕೌಶಲ್ಯಗಳು): ಭವಿಷ್ಯದ ಉದ್ಯೋಗಕ್ಕಾಗಿ ತಯಾರಿ

ಅಂದಹಾಗೆ ಇದು ಯಾವುದೇ AI ಅಲ್ಲ. ಬದಲಿಗೆ ಇದು ಒಂದು ಮುಂದೆ ಕೆಲಸವನ್ನು ಹೆಗೆ ಪಡೆಯಬೇಕು ಎಂಬುದರ ಮೇಲೆ ಇದೆ. ಇದರಲ್ಲಿ ನೀವು ನೀವು ಕೆಲಸ ಮಾಡಲು ಬೇಕಾದ skils ಗಳನ್ನು ಕಲಿಯಲು ಉತ್ತಮ website ಗಳು ಇವೆ. ಅವುಗಳನ್ನು ನೀವು ನಿಮಗೆ ಯಾವುದರಲ್ಲಿ ಆಸಕ್ತಿ ಇದೆ ಅದರಲ್ಲಿ ನೀವು ಕಲಿಯಬಹುದು.

ಅವು ಯಾವುವು?

  • Google Digital Garage: ನೀವು ಇದರಲ್ಲಿ ಮಾರ್ಕಈಟಿಂಗ್ ಹೆಗೆ ಮಾಡುವುದು ಎಂದು ಕಲಿಯಬಹುದು.
  • Coursera: ಇದರಲ್ಲಿ ನೀವು AI ಬಗ್ಗೆ ತಿಳಿಯಲು ಮತ್ತು business ಕಲಿಯಲು ಇದನ್ನು ಬಳಸಬಹುದು
  • FreeCodeCamp: ಇದರಲ್ಲಿ ನೀವು ಕೋಡಿಂಗ್ ಬಗ್ಗೆ ತಿಳಿದುಕೊಳ್ಳಬಹುದು.
  • HubSpot Academy: ನೀವು ಇದರಲ್ಲಿ ಕಂಟೆಂಟ್ ಬರೆಯುವುದು ಮತ್ತು SEO ಬಗ್ಗೆ ಇದರಲ್ಲಿ ಕಲಿಯಬಹುದು

ಅಂತಿಮ ಸಂದೇಶ (Final Conclusion)

ಈ ಅಡ್ವಾನ್ಸ್ಡ್ ಎಐ ಟೂಲ್‌ಗಳನ್ನು ಕೇವಲ ಹೋಮ್‌ವರ್ಕ್ ಕಾಪಿ-ಪೇಸ್ಟ್ ಮಾಡುವ ಶಾರ್ಟ್‌ಕಟ್ ಆಗಿ ಬಳಸಬೇಡಿ. ಇದು ಕೇವಲ ನಿಮಗೆ ಓದಲು help ಮಾಡುವ ಒಂದು AI Assistant ಅಂತ ಹೇಳಬಹುದು. ನೀವು ಮನೆಯಲ್ಲಿ ಓಡಿಕೊಳ್ಳುತಿರುವಾಗ ನಿಮಗೆ ಏನಾದರೂ ಡೌಟ್ ಬಂದಾಗ ಈ AI tools ಬಳಸಿಕೊಂಡು ನೀವು ನಿಮ್ಮ ಡೌಟ್ ಗಾಳನ್ನೂ ಕ್ಲಿಯರ್ ಮಾಡಿಕೊಳ್ಳಬಹುದು.

ಇವುಗಳನ್ನು ಇದ್ಯಾರ್ಥಿಗಳು ಉಪಯೋಗ ಮಾಡಿಕೊಳ್ಳಬೇಕು. ಏಕೆಂದರೆ ಇದರಿಂದ ಹಲವರು ವಿದ್ಯಾರ್ಥಿಗಳಿಗೆ ಪ್ರಯೋಜನವಿದೆ.

ನಿಮಗೆ ಈ ಲೇಖನ ಇಷ್ಟವಾಗಿದ್ದರೆ, ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಈ ಎಐ ಟೂಲ್ಸ್‌ಗಳಲ್ಲಿ ನಿಮಗೆ ಯಾವುದರ ಬಗ್ಗೆ ಡೌಟ್ ಇದೆಯೆಂದು comment ಮಾಡಿ ನಮಗೆ ತಿಳಿಸಿ. ನಾವು ಅದಕ್ಕೆ ಶೀಘ್ರದಲ್ಲೇ ಅದಕ್ಕೆ ಉತ್ತರಿಸುತ್ತೇವೆ.

ಇನ್ನೂ ಇದೆ ತರಹ ಹೆಚ್ಚಿನ ಮಾಹಿತಿಗಾಗಿ ಈ screen ಮೇಲೆ ಕಾಣುತ್ತಿರುವ Whatsapp ಸಿಂಬಲ್ ಅನ್ನು ಕ್ಲಿಕ್ ಮಾಡಿ, Whatsapp group ಗೆ join ಆಗಿ.

Thanks for reading.

ಲೇಖಕರು:- A UMESHA,Yarangaligi

Leave a Comment