Latest Government Job Alert: Karnataka Police Recruitment 2026.7,925 Candidates for Various Posts​ ಇತ್ತೀಚಿನ ಸರ್ಕಾರಿ ಉದ್ಯೋಗದ ಮಾಹಿತಿ: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 7,925 ಹುದ್ದೆಗಳ ಭರ್ತಿ

Karnataka Police Recruitment 2026.

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 7,925 ಹುದ್ದೆಗಳ ಭರ್ತಿ: ಯುವಕರಿಗೆ ಉದ್ಯೋಗದ ಸುವರ್ಣಾವಕಾಶ.

1 20260705 105517 0000
Karnataka Police Recruitment 2026

ನಮಸ್ತೆ ಗೆಳೆಯರೇ ಎಲ್ಲರೂ ಹೇಗಿದ್ದೀರಾ comment ಮಾಡಿ.

ನಮಸ್ತೆ ಗೆಳೆಯರೇ ನಾನು ಇಂದಿನ ವಿಷಯದಲ್ಲಿ ನಿಮಗೆ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸುಮಾರು 7,925 ಹುದ್ದೆಗಳನ್ನು ಭರ್ತಿ ಮಾಡಲು ಸರಕಾರ ನಿರ್ಧರಿಸಿದೆ. ಈ ವಿಷಯದಲ್ಲಿ ಆ ಕೆಲಸಕ್ಕೆ ಹೆಗೆ apply ಮಾಡುವುದು? ಆ ಹುದ್ದೆಗಳು ಯಾವ ಯಾವ ಭಾಗಗಳಿಗೆ ಇದೆ? ಎಂಬುದನ್ನು ವಿವರಿಸುತ್ತೇನೆ.

ರಾಜ್ಯದ Police ಇಲಾಖೆಗೆ ಸೇರಿ ಕರ್ನಾಟಕ ರಾಜ್ಯಕ್ಕೆ ಸೇವೆ ಮಾಡಬೇಕು ಅಂತ ಇರುವ ಎಲ್ಲ ಅಭ್ಯರ್ಥಿಗಳಿಗೆ ಇದೊಂದು ಸಂತಸದ ಮತ್ತು ಸಿಹಿ ಸುದ್ದಿ ಆಗಿದೆ. Police ಹುದ್ದೆಗಳಿಗೆ ಸೇರಲು ಲಕ್ಷಾಂತರ ಅಭ್ಯರ್ಥಿಗಳು ಕನಸು ಕಾನುತಿರುತ್ತಾರೆ. ಅಂತಹ ಅಭ್ಯರ್ಥಿಗಳಿಗೆ ಇದು ಸಿಹಿ ಸುದ್ದಿನೆ.

ಕರ್ನಾಟಕ ಸರ್ಕಾರವು ಇತ್ತೀಚಿನ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಆರಂಭಿಸಿದೆ. ಇದು ಕೇವಲ ಉದ್ಯೋಗ ಸೃಷ್ಟಿ ಅಲ್ಲ. ಬದಲಾಗಿ ರಾಜ್ಯದ ಬಾಹ್ಯ ಮತ್ತು ಆಂತರಿಕವಾಗಿ ಬಲಪಡಿಸುವುದರ ನಿಟ್ಟಿನಲ್ಲಿ ಸರಕಾರ ಕೈಗೊಂಡಿರುವ ಒಂದು ಭೃಹತ್ ಮತ್ತು ಅತ್ಯಂತ ಮುಖ್ಯವಾದ ಹೆಜ್ಜೆಯಾಗಿದೆ. ಈ ವಿಷಯದಲ್ಲಿ ಅಭ್ಯರ್ಥಿಗಳು ಮಾಡಿಕೊಳ್ಳಬೇಕಾದ ಸಿದ್ಧತೆಯ ಬಗ್ಗೆ ವಿವರಣೆ ನೀಡಲಾಗಿದೆ.

ಇದನ್ನು ಓದಿ:- Top 6 AI Tools for Students learning | ವಿದ್ಯಾರ್ಥಿಗಳು ತಪ್ಪದೇ ತಿಳಿಯಬೇಕಾದ 6 ಎಐ ಟೂಲ್ಸ್‌ಗಳು

7,925 ಪೊಲೀಸ್ ಹುದ್ದೆಗಳ ನೇಮಕಾತಿ: ಸಂಪೂರ್ಣ ಮಾಹಿತಿ ಮತ್ತು ಸರ್ಕಾರದ ಗುರಿ.

ರಾಜ್ಯದ ಗೃಹ ಸಚಿವಾಲಯವು ಪ್ರಕಟಿಸಿದ ಮಾಹಿತಿಯಂತೆ, ಪ್ರಸ್ತುತ ವರ್ಷದ 2026 27 ನೇ ಸಾಲಿನಲ್ಲಿ 7,925 ಹುದ್ದೆಗಳನ್ನು ಹಲವು ಹಂತಗಳಲ್ಲಿ ನಡೆಸಲು ಶುರು ಮಾಡಿದೆ. ಪೊಲೀಸ್ ಸಬ್-ಇನ್‌ಸ್ಪೆಕ್ಟರ್‌ಗಳಿಂದ (PSI) ಹಿಡಿದು ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್ (APC) ಹುದ್ದೆಗಳವರೆಗೆ ವಿವಿಧ ಹುದ್ದೆಗಳನ್ನು ಇದರಲ್ಲಿ ಸೇರಿಸಲಾಗಿದೆ.

ಗೃಹ ಸಚಿವರಾದ ಪ್ರಿಯಾಂಕ ಖರ್ಗೆ ಅವರ ನೇತೃತ್ವದಲ್ಲಿ ಈ ನೇಮಕಾತಿ ಪ್ರಕ್ರಿಯೆಯನ್ನು ನಡೆಸಲು ಕರ್ನಾಟಕ ಪರಿಕ್ಷ ಪ್ರಾಧಿಕಾರವು (KEA) ಜವಬ್ದಾರಿಯನ್ನು ವಹಿಸಿಕೊಂಡಿದೆ. ಇದರಿಂದಾಗಿ ಯಾವುದೇ ಮೋಸ ಆಗದೆ ಅಭ್ಯರ್ಥಿಗಳಿಗೆ ನ್ಯಾಯಯುತವಾಗಿ ಕೆಲಸ ಸಿಗಲಿದೆ ಇಷ್ವಾಸ ಸರ್ಕಾರವು ವ್ಯಕ್ತ ಪಡಿಸಿದೆ.

ಕಲ್ಯಾಣ ಕರ್ನಾಟಕ ಮತ್ತು ಸಾಮಾಜಿಕ ಮೀಸಲಾತಿ ನಿಯಮಗಳು.

ಹೌದು, ಕಲ್ಯಾಣ ಕರ್ನಾಟಕಕ್ಕೆ ಅಂತ ಸರಕಾರವು ಸುಮಾರು 1,639 ಹುದ್ದೆಗಳನ್ನು ಮೀಸಲಿಟ್ಟಿದೆ. ಯಾವುವು ಕಲ್ಯಾಣ ಕರ್ನಾಟಕಕ್ಕೆ ಸೇರಿದ ಜಿಲ್ಲೆಗಳು ಅಂತ ನೋಡುವುದಾದರೆ.

  • ಕಲಬುರಗಿ
  • ಬೀದರ್
  • ರಾಯಚೂರು
  • ಯಾದಗಿರಿ
  • ಕೊಪ್ಪಳರು
  • ಬಳ್ಳಾರಿ
  • ವಿಜಯನಗರ (ಹಿಂದೆ ಬಳ್ಳಾರಿ ಜಿಲ್ಲೆಯ ಭಾಗವಾಗಿದ್ದ ವಿಜಯನಗರವನ್ನು ಹೊಸ ಜಿಲ್ಲೆಯಾಗಿ ರಚಿಸಲಾಗಿದೆ)

ಈ 7 ಹಿಂದುಳಿದ ಜಿಲ್ಲೆಗಳಿಗೆ ಸುಮಾರು 1639 police ಹುದ್ದೆಗಳನ್ನು ಮೀಸಲಿಟ್ಟಿದ್ದಾರೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವುದು ಉತ್ತಮ. ಇದರಿಂದ ತಮ್ಮ ಪ್ರದೇಶದಲ್ಲೇ ತಾವು Police ಆಗಿ ಜನರನ್ನು ರಕ್ಷಣೆ ಮಾಡುವ ಅದೃಷ್ಟ ಸಿಗುತ್ತದೆ.

ಕಲ್ಯಾಣ ಕರ್ನಾಟಕ ಮತ್ತು ಸಾಮಾಜಿಕ ಮೀಸಲಾತಿ ನಿಯಮಗಳು ಬಗ್ಗೆ ಹೇಳುವುದಾದರೆ

ಇನ್ನೂ ಇದರ ಬಗ್ಗೆ ಹೇಳುವುದಾದರೆ ಸಾಮಾನ್ಯವಾಗಿ ಇನ್ನುಳಿದ ರಾಜ್ಯದ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಪೊಲೀಸ್ ಸಿಬ್ಬಂದಿ ತರ ಆಯ್ಕೆ ಮಾಡುತ್ತಾರೆ. ಆದ್ರ ಅದರಲ್ಲೂ ಸಹ ಮೀಸಲಾತಿ ಇದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಇವುಗಳ ಆಧಆರದ ಮೇಲೆ ಮೀಸಲಾತಿ ಸಿಗುತ್ತದೆ. ಮತ್ತು ಮಹಿಳೆಯರಿಗೆ ಪ್ರತ್ಯೇಕ ಮೀಸಲಾತಿಗಳನ್ನು ಇದ್ದಾವೆ.ಇದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೇ.

ಇದನ್ನು ಓದಿ:- Best Upcoming 5G Smartphones in July 2026: ಜುಲೈನಲ್ಲಿ ಬಿಡುಗಡೆಯಾಗುತ್ತಿರುವ ಟಾಪ್ 5 ಸ್ಮಾರ್ಟ್‌ಫೋನ್‌ಗಳು!”

ವಿವಿಧ ಶ್ರೇಣಿಯ ಹುದ್ದೆಗಳ ವಿಂಗಡಣೆ ಮತ್ತು ಜವಾಬ್ದಾರಿಗಳು

ಇದರಲ್ಲಿ ಒಟ್ಟು 4 ಶ್ರೇಣಿಯ ಹುದ್ದೆಗಳು ಇವೆ. ಯಾವ ಯಾವ ಹುದ್ದೆಗಳು? ಮತ್ತು ಯಾವ ಯಾವ ಕೆಲಸಗಳು ಅಂತ ಇದರಲ್ಲಿ ಮಾಹಿತಿ ಇದೆ ಪ್ರತಿಯೊಂದು ಹುದ್ದೆಯೂ ಅದರ ಜವಂಡಆರಿಯನ್ನು ಹೊಂದಿರುತ್ತದೆ.

  • ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್: ಇವುರು ಜನರ ಜೊತೆ ನೇರ ಸಂಪರ್ಕದಲ್ಲಿ ಇರುತ್ತಾರೆ. ಸಾಮಾನ್ಯವಾಗಿ ಜೂಜು ಮತ್ತು ಇನ್ನಿತರ ಕಾನೂನು ವಿರುದ್ಧ ಮಾಡುವ ಕೆಲಸವನ್ನು ತಡೆಯುತ್ತಾರೆ. ಅಪರಾಧವನ್ನು ತಡೆಯುತ್ತಾರೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಇವರ ಕೆಲಸ.
  • ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್ (APC): ಇವರ ನೇಮಕಾತಿಯ ಪೊಲೀಸರ ಸಶಸ್ತ್ರ ಪಡೆಯಲ್ಲಿ ಆಗುತ್ತದೆ. Enaadau ದೊಡ್ಡ ದೊಡ್ಡ ಗಲಾಟೆ ಮತ್ತು ವಿಶೇಷ ಭದ್ರತಾ ಸಮಯದಲ್ಲಿ ಇವರ ಕೆಲಸ ಇರುತ್ತದೆ.
  • ವಿಶೇಷ ಮೀಸಲು ಪೊಲೀಸ್ ಕಾನ್‌ಸ್ಟೆಬಲ್ (CAR/DAR): ಇವರು ರಾಜ್ಯದ ಮೀಸಲು ಪಡೆಗಳಲ್ಲಿ ಕೆಲಸ ಮಾಡುತ್ತಾರೆ. ವಿಶೇಷ ಕಾರ್ಯಾಚರಣೆಗಳ ಸಂದರ್ಭದಲ್ಲಿ ಇವರ ಸೇವೆ ಅಗತ್ಯವಾಗಿರುತ್ತದೆ.
  • ಡಿಟೆಕ್ಟಿವ್ ಮತ್ತು ಸಬ್-ಇನ್‌ಸ್ಪೆಕ್ಟರ್ ಹುದ್ದೆಗಳು: ಏನಾದರು ಅಪರಾಧ ಆದಲ್ಲಿ ಅದನ್ನು ತನಿಖೆ ಮಾಡಿ ಕಂಡುಹಿಡಿಯಲು ಡಿಟೆಕ್ಟಿವ್ ಪೊಲೀಸರ ಅಗತ್ಯ ಇರುತ್ತದೆ. ಮತ್ತು ಸಬ್-ಇನ್ಸ್ಪೆಕ್ಟರ್ ಹುದ್ದೆ ಯಾರಾದರೂ ಕಂಪ್ಲೇಂಟ್ ಕೊಡಲು ಬಂದಾಗ ಎಫ್‌ಐಆರ್ ದಾಖಲು ಮಾಡುವುದು ಮತ್ತು ಇಲಾಖೆಯ ಮೇಲ್ವಿಚಾರಣೆಯಲ್ಲಿ ಇವರ ಪಾತ್ರ ಅತ್ಯಂತ ನಿರ್ಣಾಯಕವಾಗಿರುತ್ತದೆ.

ಹೀಗೇ ವಿವಿಧ ಶ್ರ್ ನಿಯ ಪೊಲೀಸ್ ನೇಮಕಾತಿಯು ನಡೆಯುತ್ತದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಪಾರದರ್ಶಕ ನೇಮಕಾತಿ ಪ್ರಕ್ರಿಯೆ

ಹಿಂದಿನ ಬಾರಿ ನೇಮಕಾತಿ ಮಾಡಿಕೊಳ್ಳುವ ಸಮಯದಲ್ಲಿ ತುಂಬಾನೇ ಲೋಪ ದೋಷಗಳನ್ನು ಕಂಡುಬಂದಿದ್ದವು. ಇದರಿಂದಾಗಿ ಈ ಬಾರಿ ಸರ್ಕಾರವು ಪೂರ್ಣ ಜವಾಬ್ದಾರಿಯನ್ನು KEA ಗೆ ಒಪ್ಪಿಸಿದೆ. ಹೈಟೆಕ್ ಕಣ್ಗಾವಲು, ಕಠಿಣ ಪರೀಕ್ಷಾ ನಿಯಮಗಳು, ಬಯೋಮೆಟ್ರಿಕ್ ಪರಿಶೀಲನೆ ಮತ್ತು ಸಂಪೂರ್ಣ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಅಭ್ಯರ್ಥಿಗಳಲ್ಲಿ ಹೆಚ್ಚಿನ ವಿಶ್ವಾಸವನ್ನು ಮೂಡಿಸಿದೆ. ಶಿಫಾರಸು ಅಥವಾ ಅಕ್ರಮಗಳಿಗೆ ಅವಕಾಶವಿಲ್ಲದೆ, ಕೇವಲ ಮೆರಿಟ್ ಮತ್ತು ದೈಹಿಕ ಸಾಮರ್ಥ್ಯದ ಆಧಾರದ ಮೇಲೆ ಆಯ್ಕೆ ನಡೆಯುವುದರಿಂದ, ಪ್ರತಿಭಾವಂತ ಯುವಕರಿಗೆ ಉತ್ತಮ ಭವಿಷ್ಯವಿದೆ.

ಪೊಲೀಸ್ ಇಲಾಖೆಯ ಆಧುನೀಕರಣ ಮತ್ತು ಮೂಲಸೌಕರ್ಯ ಅಭಿವೃದ್ಧಿ

ಈ ಬಾರಿ ಕೇವಲ ನೇಮಕಾತಿ ಅಷ್ಟೇ ಅಲ್ಲದೆ, ರಾಜ್ಯದ ಮೂಲSಉಕರ್ಯವನ್ನು ಸಹ ಹೆಚ್ಚಿಸಲು ಸರ್ಕಾರ ಮುಂದಾಗಿದೆ. ಸುಮಾರು ರಾಜ್ಯದ 10 ಜಿಲ್ಲೆಗಳಲ್ಲಿ ಹೊಸ ಪೊಲೀಸ್ ಸ್ಟೇಶನ್ ಗಳನ್ನು ನಿರ್ಮಿಸಲು ಸರ್ಕಾರ ಸಚಿವ ಸಂಪುಟ ಅನುಮತಿ ನೀಡಿದೆ. ಇದಕಂತಾನೆ ಸುಮಾರು 30 ಕೊಟಿ ರೂಪಾಯಿಗಳನ್ನು ಭೃಹಾತ್ ಅನುಮೋದನೆಯನ್ನು ನೀಡಲಾಗಿದೆ. ಹೊಸದಾಗಿ ನೇಮಕಗೊಳ್ಳುವ ಸಿಬ್ಬಂದಿಗಳಿಗೆ ಆಧುನಿಕ ತಂತ್ರಜ್ಞಾನ ಹೊಂದಿರುವ ಪೊಲೀಸ್ ಠಾಣೆಗಳಲ್ಲಿ ಕೆಲಸ ಮಾಡುವ ಅವಕಾಶ ಸಿಗಲಿದೆ. ಇದು ಇಲಾಖೆಯ ಕಾರ್ಯದಕ್ಷತೆಯನ್ನು ಹೆಚ್ಚಿಸುವುದಲ್ಲದೆ, ಪೊಲೀಸ್ ಸಿಬ್ಬಂದಿಯ ಕಾರ್ಯವೈಖರಿಯನ್ನು ಮತ್ತಷ್ಟು ಉತ್ತಮಗೊಳಿಸುತ್ತದೆ.

ಅಭ್ಯರ್ಥಿಗಳು ಮಾಡಿಕೊಳ್ಳಬಹುದಾದ ಸಿದ್ಧತೆಗಳು.

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಹೀಗೇ ಸಿದ್ಧತೆ ಮಾಡಿಕೊಳ್ಳುವುದು ಉತ್ತಮ.

  • ಪಠ್ಯಕ್ರಮದ ಅಧ್ಯಯನ: ಪ್ರತಿಯೊಂದು ಹುದ್ದೆಗೂ ಬೇರೆ ಬೇರೆ ಪರೀಕ್ಷಾ ವಿಧಾನಗಳಿರುತ್ತವೆ. ನಿರ್ದಿಷ್ಟ ಪಠ್ಯಕ್ರಮವನ್ನು (Syllabus) ಡೌನ್‌ಲೋಡ್ ಮಾಡಿಕೊಂಡು ವಿಷಯವಾರು ತಯಾರಿ ನಡೆಸಿ.
  • ದೈಹಿಕ ಕ್ಷಮತೆ (Physical Fitness): ಪೊಲೀಸ್ ಹುದ್ದೆಗೆ ಲಿಖಿತ ಪರೀಕ್ಷೆಯಷ್ಟೇ ದೈಹಿಕ ಸಾಮರ್ಥ್ಯವೂ ಮುಖ್ಯ. ದೈನಂದಿನ ಓಟ, ಎತ್ತರ ಜಿಗಿತ, ಗುಂಡು ಎಸೆತ ಮುಂತಾದ ಅಭ್ಯಾಸಗಳನ್ನು ಇಂದೇ ಆರಂಭಿಸಿ.
  • ದಾಖಲೆಗಳ ಸಿದ್ಧತೆ: ಶೈಕ್ಷಣಿಕ ದಾಖಲೆಗಳು, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ ಮತ್ತು ಆಧಾರ್ ಕಾರ್ಡ್ ಮುಂತಾದವುಗಳನ್ನು ಕ್ರಮಬದ್ಧವಾಗಿ ಇಟ್ಟುಕೊಳ್ಳಿ.

ಇದನ್ನು ಓದಿ:- SSP Scholarship 2026 Karnataka: Apply Online, Eligibility, Last Date, Status Check & Benefits.

ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು

ಈ jobs ಗೆ ಅರ್ಜಿ ಸಲ್ಲಿಸಲು Important Dacuments ಬೇಕು ಅವು ಹೀಗಿವೆ.

1.ಅಭ್ಯರ್ಥಿಯ ವಯಕ್ತಿಕ ದಾಖಲೆ

  • ಆಧಾರ್ ಕಾರ್ಡ್
  • ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋ
  • ಅಭ್ಯರ್ಥಿಯ ಸಹಿ.

2.ಅಭ್ಯರ್ಥಿಯ ಶೈಕ್ಷಣಿಕ ದಾಖಲೆಗಳು

  • SSLC/10 ನೇ ತರಗತಿಯ ಮಾರ್ಕ್ಸ್ ಕಾರ್ಡ್
  • ಪಿಯುಸಿ / 12ನೇ ತರಗತಿ ಅಂಕಪಟ್ಟಿ: (ಪೊಲೀಸ್ ಕಾನ್‌ಸ್ಟೆಬಲ್ (PC) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇದು ಕಡ್ಡಾಯ.)
  • ಪದವಿ ಪ್ರಮಾಣಪತ್ರ (Degree Marks Card & Certificate)

3. ಜಾತಿ ಮತ್ತು ಆದಾಯ ಪ್ರಮಾಣಪತ್ರಗಳು (Reservation Documents)

  • ಜಾತಿ ಪ್ರಮಾಣ ಪತ್ರ: ಮೀಸಲಾತಿ ಪಡೆಯಲು ಇದು ಅಗತ್ಯ
  • ಆದಾಯ ಪ್ರಮಾಣ ಪತ್ರ (Income Certificate)

4.ವಿಶೇಷ ಮೀಸಲಾತಿ ಪ್ರಮಾಣಪತ್ರಗಳು (ಅನ್ವಯಿಸುವವರಿಗೆ ಮಾತ್ರ)

  • ಕಲ್ಯಾಣ ಕರ್ನಾಟಕ ಪ್ರಮಾಣಪತ್ರ (371J)
  • ಗ್ರಾಮೀಣ ಅಭ್ಯರ್ಥಿ ಪ್ರಮಾಣಪತ್ರ (Rural Certificate)
  • ಕನ್ನಡ ಮಾಧ್ಯಮ ಪ್ರಮಾಣಪತ್ರ (Kannada Medium Certificate)

ಈ ಮೇಲಿನ ದಾಖಲೆಗಳು ಕಡ್ಡಾಯವಾಗಿದೆ. ಆದ್ರೆ ಅದರಲ್ಲಿ ನಿಮಗೆ ಅನ್ವಯವಾಗುವ ದಾಖಲೆಗಳನ್ನು submit ಮಾಡಿ.

ಅರ್ಜಿ ಸಲ್ಲಿಸುವುದು ಎಲ್ಲಿ ಮತ್ತು ಹೇಗೆ?

ನೀವು ಅರ್ಜಿಯನ್ನು ನಿಮ್ಮ ಮೊಬೈಲ್ ಮೂಲಕವೇ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಹಂತಗಳು

  • ಮೊಬೈಲ್ ಫೋನ್ ನಲ್ಲಿ ಗೂಗಲ್ ಅಥವಾ ಯಾವುದಾದರೂ ಒಂದು ಬ್ರೌಸರ್ ಓಪನ್ ಮಾಡಿ
  • ನಂತರ ಅದರಲ್ಲಿ KEA Home ಎಂದು search ಮಾಡಿ. ಇಲ್ಲದಿದ್ದರೆ ನೇರ ಲಿಂಕ್ ಇಲ್ಲಿದೆ, ನೇರವಾಗಿ ಓಪನ್ ಮಾಡಿ.
  • https://cetonline.karnataka.gov.in/kea/ ಇದನ್ನು ಕ್ಲಿಕ್ ಮಾಡಿ.
  • ನಂತರ ಅಲ್ಲಿ HOME page open ಆಗುತ್ತೆ.
  • ಅದರಲ್ಲಿ ಮೆನುವನ್ನು ಓಪನ್ ಮಾಡಿ.
  • ಅದರಲ್ಲಿ Recruitment ಎಂಬ ಆಪ್ಷನ್ ಇರುತ್ತೆ ಅದನ್ನು ಓಪನ್ ಮಾಡಿ.
  • ಆಗ, Armed Police Constable (CAR/DAR) -2026 ಮತ್ತು Civil Police Constable Recruitment – 2026 ಎಂದು ಇರುತ್ತದೆ ಅದರಲ್ಲಿ ನೀವು ಯಾವುದಕ್ಕೆ ಅರ್ಜಿ ಸಲ್ಲಿಸಬೇಕೆಂದು ಇದ್ದೀರಿ ಅದನ್ನು sect ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಬಹುದು

ಕೊನೆಯ ಮಾತು.

ಒಟ್ಟಾರೆಯಾಗಿ ಹೇಳುವುದಾದರೆ ಈ ಪೊಲೀಸ್ ನೇಮಕಾತಿಯು, ಪೊಲೀಸ್ ಹುದ್ದೆಗಳಿಗಾಗಿ ಕಾಯುತ್ತಿದ್ದ ಎಷ್ಟೋ ಅಭ್ಯರ್ಥಿಗಳಿಗೆ ಸಂತಸದ ಸುದ್ದಿ ಆಗಿದೆ. ಇದು ಸ್ವಲ್ಪ ಮಟ್ಟಿಗೆ ಆದ್ರೂ ಕರ್ನಾಟಕದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸುತ್ತದೆ. ಸರ್ಕಾರಿ ಉದ್ಯೋಗದ ಕನಸು ಕಾಣುವವರಿಗೆ, ಸಮಾಜಕ್ಕೆ ಸೇವೆ ಸಲ್ಲಿಸಲು ಬಯಸುವವರಿಗೆ ಇದೊಂದು ದೊಡ್ಡ ಅವಕಾಶ.

ಇದನ್ನು ಕರ್ನಾಟಕ ಪರಿಕ್ಷಾ ಪ್ರಾಧಿಕಾರ ನಡೆಸುತ್ತಿರುವುದರಿಂದ ಅರ್ಹ ಅಭ್ಯರ್ಥಿಗಳಿಗೆ ಖಂಡಿತವಾಗಿಯೂ ಕೆಲಸ ಸಿಗುತ್ತದೆ. ಸತತ ಪ್ರಯತ್ನ, ಪರಿಶ್ರಮ ಮತ್ತು ಸರಿಯಾದ ಮಾರ್ಗದರ್ಶನವಿದ್ದರೆ ಯಶಸ್ಸು ನಿಮ್ಮದಾಗುತ್ತದೆ. ನಿಮ್ಮ ಸಿದ್ಧತೆ ಇಂದೇ ಆರಂಭಿಸಿ, ನಿಮ್ಮ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಕೆಗಳು!

ಇನ್ನೂ ಇದೆ ತರಹ ಹೆಚ್ಚಿನ ಮಾಹಿತಿಗಾಗಿ ನಮ್ಮ Whatsapp group ಗೆ Join ಆಗಿ. ಸ್ಕ್ರೀನ್ ಮೇಲೆ Whatsapp group joining ಬಟನ್ ಇದೆ.

Thank you for Reading 🙏

ಲೇಖಕರು:- A UMESHA, Yarangaligi

Leave a Comment