SSP scholarship 2026-27.
ಕರ್ನಾಟಕ ಸರ್ಕಾರವು ಇಂದು SSP scholarship ಗೆ ಅರ್ಜಿ ಹಾಕಲು ಅನುಮತಿ ನೀಡಿದೆ.
ಹೌದು, ನಿಮ್ಮ ಮಕ್ಕಳು ಅಥವಾ ನೀವೇ ವಿದ್ಯಾರ್ಥಿಗಳಾಗಿ ಇರಲಿ. ಇದು ನಿಮಗೆ ಸಂತೋಷ ನೀಡುವ ಸುದ್ದಿ ಆಗಿದೆ.
ಸರ್ಕಾರವು 2026 ಮತ್ತು 27 ನೇ ಸಾಲಿನ SSP scholarship ಗೆ ಅರ್ಜಿ ಹಾಕಲು ಬಿಟ್ಟಿದ್ದಾರೆ. ಇದು ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವತನ( pre-Metric ಹಾಗೂ post-metric) ನೀಡಲು ಅದಕ್ಕೆ ಅರ್ಜಿ ಹಾಕಲು ಬಿಟ್ಟಿದೆ.
ಸರ್ಕಾರ ಬಿಟ್ಟಿರುವ ಈ ಅರ್ಜಿಯನ್ನು ನಾವು ಹೇಗೆ ಸಲ್ಲಿಸುವುದು ಎಂದು ಇದರಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ. ಈ ಮಾಹಿತಿ ಉಪಯೋಗಿಸಿಕೊಂಡು ನೀವು ನಿಮ್ಮ SSP scholarship ಗೆ ಅರ್ಜಿ ಹಾಕಿ.
ಎಸ್‌ಎಸ್‌ಪಿ ಸ್ಕಾಲರ್‌ಶಿಪ್ 2026-27: ವಿದ್ಯಾರ್ಥಿವೇತನಕ್ಕೆ ಆನ್‌ಲೈನ್ ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಬೆಂಗಳೂರು:- ಕರ್ನಾಟಕ ಸರ್ಕಾರವು ರಾಜ್ಯದ ವಿದ್ಯಾರ್ಥಿಗಳ ಶೈಕ್ಷಣಿಕ ವಿದ್ಯಾಭ್ಯಾಸವು ಸುಗಮವಾಗಲಿದೆ ಎಂಬುದರ ನಿಟ್ಟಿನಲ್ಲಿ ಇಂದು “ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ” (SSP – State Scholarship Portal) ನೀಡುತ್ತಿದೆ. ಇದು 1 ನೇ ತರಗತಿಂದ 10 ನೇ ತರಗತಿಯವರೆಗೆ (pre-Metric) ಮತ್ತು 11 ನೇ ತರಗತಿ (PUC), ಡಿಗ್ರಿ ಮತ್ತು ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸುಮಾರು ₹5000 ದಿಂದ ಹಿಡಿದು ಸುಮಾರು ₹30000 ರೂಪಾಯಿಗಳ ವರೆಗೆ ಸರ್ಕಾರವು ವಿದ್ಯಾರ್ಥಿವೇತನವನ್ನು ನೀಡುತ್ತಿದೆ. ನೀವು ಸಹ ಅರ್ಜಿ ಹಾಕಿ.
ಎಸ್‌ಎಸ್‌ಪಿ (SSP) ಪೋರ್ಟಲ್ ರಾಜ್ಯದ ವಿವಿಧ 15ಕ್ಕೂ ಹೆಚ್ಚು ಇಲಾಖೆಗಳ ವಿದ್ಯಾರ್ಥಿವೇತನ ಯೋಜನೆಗಳನ್ನು ಒಂದೇ ಸೂರಿನಡಿ ತಂದಿರುವ ಮಹತ್ವದ ವೇದಿಕೆಯಾಗಿದೆ.
ಈ ಲೇಖನದಲ್ಲಿ ಎಸ್‌ಎಸ್‌ಪಿಯಲ್ಲಿ ಹೊಸ ಖಾತೆ ಸೃಷ್ಟಿಸುವುದು ಹೇಗೆ? ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳೇನು? ಎಂಬ ಸಂಪೂರ್ಣ ಹಾಗೂ ಹಂತ-ಹಂತದ ಮಾಹಿತಿಯನ್ನು ನೀಡಲಾಗಿದೆ.
1.ಯಾರೆಲ್ಲ ಈ student Scholership ಗೆ ಅರ್ಜಿ ಹಾಕಬಹುದು?
ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಲು 3 ವಿಭಾಗಗಳಾಗಿ ವಿಂಗಡಿಸಲಾಗಿದೆ.

ಈ ಮೇಲೆ ಇರುವ ಹಾಗೆ ಮೂರು ರೀತಿಯಲ್ಲಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಬಹುದು.
A)ಹೊಸ ಖಾತೆ ಸೃಷ್ಟಿ (Create New Account).
- ನೀವು ಇದುವರೆಗೆ ಇನ್ನು SSP ನಲ್ಲಿ ಖಾತೆ ಅನ್ನು ತೆಗೆಯದಿದ್ದರೆ ಇದನ್ನು ಕ್ಲಿಕ್ ಮಾಡಿ ನಂತರ ಅದರಲ್ಲಿ ನಿಮ್ಮ ಹೊಸ ಖಾತೆಯನ್ನು ತೆಗೆದುಕೊಳ್ಳಬೇಕು. (Pre-Metric ಮತ್ತು post-Metric ಈ ಇಬ್ಬರು ವಿದ್ಯಾರ್ಥಿಗಳಿಗೆ ಅನ್ವಯ).
B) ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ (Post-Metric).
- ನೀವು 10 ನೇ ತರಗತಿಯಲ್ಲಿ ಪಾಸ್ ಆಗಿ. ಅಂದ್ರೆ ಉತ್ತೀರ್ಣರಾಗಿ ನಂತರ 11 ನೇ ತರಗತಿ (PUC), ಡಿಗ್ರಿ ಇನ್ನು ಮುಂತಾದ ಉತ್ತಮ ಮಟ್ಟದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು SSP Scholarship Karnataka ಇದು ಬೇಕಿದ್ದರೆ ಇದನ್ನು ಕ್ಲಿಕ್ ಮಾಡಿ.
C) ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನವನ (pre-Metric)
- 1 ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ಶಾಲಾ ವಿದ್ಯಾರ್ಥಿಗಳಿಗೆ ಈ ವಿಭಾಗ ಅನ್ವಯವಾಗುತ್ತದೆ. (ಈಗಾಗಲೇ ಖಾತೆ ಸೃಜಿಸಿರುವ ವಿದ್ಯಾರ್ಥಿಗಳಿಗೆ ಮಾತ್ರ).
2.NSP-OTR ನೊಂದಾಣಿ ಕಡ್ಡಾಯವಾಗಿದೆ
ಹೌದು ಇತ್ತೀಚಿಗೆ ಸರ್ಕಾರವು SSP scholarship ನಲ್ಲಿ ದೊಡ್ಡ ಬದಲಾವಣೆ ಮಾಡಿದೆ.
- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (BCWD), ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ (STWD) ಮತ್ತು ಸಮಾಜ ಕಲ್ಯಾಣ ಇಲಾಖೆಯ (SWD) ಯೋಜನೆಗಳಿಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ನ್ಯಾಷನಲ್ ಸ್ಕಾಲರ್‌ಶಿಪ್ ಪೋರ್ಟಲ್‌ನಲ್ಲಿ ಒನ್ ಟೈಮ್ ರಿಜಿಸ್ಟ್ರೇಷನ್ (NSP-OTR) ಮಾಡುವುದು ಕಡ್ಡಾಯವಾಗಿದೆ.ಒಮ್ಮೆ ರಿಜಿಸ್ಟರ್ ಆದ ಬಳಿಕ, ಆ OTR ಸಂಖ್ಯೆಯನ್ನು ಬಳಸಿ ಎಸ್‌ಎಸ್‌ಪಿ ಪೋರ್ಟಲ್‌ನಲ್ಲಿ ಅರ್ಜಿಯನ್ನು ಮುಂದುವರಿಸಬಹುದು.
3.SSP ಯಲ್ಲಿ ಅರ್ಜಿ ಸಲ್ಲಿಸಲು ಬೇಕಾಗುವ ಕಡ್ಡಾಯ ದಾಖಲೆಗಳು (Required Documents)
ಸಾಮಾನ್ಯವಾಗಿ SSP scholarship portal ನಲ್ಲಿ ವಿದ್ಯಾರ್ಥಿವೇತವನಕ್ಕೆ ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲೆಗಳು ಕಡ್ಡಾಯವಾಗಿ ಬೇಕೆ ಬೇಕು.
1.ಆಧಾರ್ ಕಾರ್ಡ್ (Adhaar Card) :- ವಿದ್ಯಾರ್ಥಿಗಳು ಕರ್ನಾಟಕದ ನಿವಾಸಿ ಎಂದು ಮತ್ತು ಅದರಲ್ಲಿ ಇರುವ ಹೆಸರು ಪ್ರಮುಖವಾಗಿ ಬೇಕಾಗುತ್ತವೆ.
2.ಆರ್. ಡಿ ಸಂಖ್ಯೆ (RD Number) :- ವಿದ್ಯಾರ್ಥಿಗಳ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ದಲ್ಲಿ ಇರುವ RD ನಂಬರ್. (Cast and Income Certificate number).
3. ಮೊಬೈಲ್ ಸಂಖ್ಯೆ (Phone Number):- ಈ ಮೊಬೈಲ್ ನಂಬರ್ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರಬೇಕು.
4. ಇಮೇಲ್ (e-mail):- ಇದು ಅವಶಯಕತೆ ಇದ್ದರೆ, ಯಾಕೆ ಅಂದ್ರೆ ಇದಕ್ಕೆ ಈ ಮೇಲ್ ಬರುತ್ತದೆ.
5.ಎಸೆಸೆಲ್ಸಿ ಅಂಕಪಟ್ಟಿ (SSLC Marks Card) :- ಇದರಲ್ಲಿ ಇರುವ registere ನಂಬರ್ ಬೇಕಾಗುತ್ತದೆ ಅದಕ್ಕಾಗಿ.
6.ವಿಕಲಚೇತನರಾಗಿದ್ದರೆ (UDID): ವಿದ್ಯಾರ್ಥಿಯು ವಿಕಲಚೇತನರಾಗಿದ್ದಲ್ಲಿ (Disability), ಯು.ಡಿ.ಐ.ಡಿ (UDID) ಗುರುತಿನ ಸಂಖ್ಯೆ.
7.ವಿಳಾಸದ ವಿವರ (Address):- ಇದು ಆಧಾರ್ ಕಾರ್ಡ್ ನಲ್ಲೆ ಇರುತ್ತೆ. ಆದ್ರೆ ಅವಶ್ಯಕತೆ ಬಂದರೆ ಇದು ಬೇಕಾಗುತ್ತದೆ.
8.ಕಾಲೇಜು ದಾಖಲಾತಿ (College Registration): ವಿದ್ಯಾರ್ಥಿಯ ಕಾಲೇಜು ದಾಖಲಾತಿ/ನೋಂದಣಿ ಸಂಖ್ಯೆ (College Registration/Admission Number).
9.ಹಾಸ್ಟೆಲ್ ವಿವರ (Hostel Details) :- ಇದು ಕೇವಲ ಹಾಸ್ಟೆಲ್ ನಲ್ಲಿ ಇದ್ದು ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ.
10.ಇ-ದೃಢೀಕರಣ ಸಂಖ್ಯೆ (e-Attestation Number): ಸಂಬಂಧಪಟ್ಟ ದಾಖಲೆಗಳ ಇ-ದೃಢೀಕರಣ ಸಂಖ್ಯೆ (ಅನ್ವಯವಾದಲ್ಲಿ ಮಾತ್ರ).
ಈ ಮೇಲಿರುವ 10 ದಾಖಲಾತಿಗಳು SSP scholarship ಗೆ ಅಪ್ಲೈ ಮಾಡುವಾಗ ಬೇಕಾಗುವ ದಾಖಲೆಗಳು.
3. SSP Portal ನಲ್ಲಿ ಈಗ ಅನೇಕ ಬದಲಾವಣೆಗಳು ಆಗಿವೆ. ಅವು ಹೀಗಿವೆ.
ಈಗಿನ ಹೊಸ ಅಪ್ಡೇಟ್‌ಗಳ ಪ್ರಕಾರ ಅರ್ಜಿ ಸಲ್ಲಿಕೆಯನ್ನು ಸುಗಮಗೊಳಿಸಲು ಹಲವು ತಾಂತ್ರಿಕ ನಿಯಮಗಳನ್ನು ಜಾರಿಗೆ ತರಲಾಗಿದೆ:
- ಕುಟುಂಬ ಗುರುತಿನ ಸಂಖ್ಯೆ (Family ID):- ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಲು ಕುಟುಂಬದ ಗುರುತಿನ ಸಂಖ್ಯೆ ಬೇಕಾಗಿದೆ. ಆದ್ರೆ ಇದು Optional ಆಗಿದೆ. ಆದ್ರಿಂದ ನಿಮ್ಮ ಬಳಿ ಇದ್ದರೆ ಹಾಕಿ ಇಲ್ಲದಿದ್ದರೆ ಖಾಲಿ ಬಿಟ್ಟರು ಸಮಸ್ಯೆ ಇಲ್ಲ
- UUCMS ಲಿಂಕ್ ಕಡ್ಡಾಯ: ವಿದ್ಯಾರ್ಥಿಯು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳಿಸಲು, 2025-26ನೇ ಸಾಲಿನ ಶೈಕ್ಷಣಿಕ ಮಾಹಿತಿಯು ಯುಯುಸಿಎಂಎಸ್ (UUCMS) ತಂತ್ರಾಂಶದಲ್ಲಿ ಲಭ್ಯವಿರಬೇಕು ಅಥವಾ ವಿಶ್ವವಿದ್ಯಾಲಯ/ಬೋರ್ಡ್ ಆ ಮಾಹಿತಿಯನ್ನು UNIDATA ಸರ್ವರ್‌ಗೆ ರವಾನಿಸುವುದು ಕಡ್ಡಾಯ.
- ಹಾಸ್ಟೆಲ್ ವಿದ್ಯಾರ್ಥಿಗಳಿಗೆ: ಹಾಸ್ಟೆಲರ್ (Hosteller) ಎಂದು ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ವಸತಿನಿಲಯ ದಾಖಲಾತಿ ಮಾಹಿತಿಯು, ರಾಜ್ಯ ವಸತಿನಿಲಯ ತಂತ್ರಾಂಶ (SHP) ಅಥವಾ ಎಸ್‌ಎಸ್‌ಪಿ – ಹೆಚ್.ಎಂ.ಐ.ಎಸ್ (SSP – HMIS) ತಂತ್ರಾಂಶದಲ್ಲಿ ಲಭ್ಯವಿರಬೇಕು.
4.SSP scholarship portal ನಲ್ಲಿ 15 ಇಲಾಖೆಗಳು.
ಹೌದು ಕರ್ನಾಟಕದ SSP scholarship ನೀಡುವುದರಲ್ಲಿ ಈ 15 ಇಲಾಖೆಯ ಪ್ರಮುಖ ಪಾತ್ರ ಇದೆ. ಅವು ಯಾವುವು ಎಂದರೆ
- ಸಮಾಜ ಕಲ್ಯಾಣ ಇಲಾಖೆ (Social Welfare)
- ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ (Tribal Welfare)
- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (BCWD)
- ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ (Minority Welfare)
- ತಾಂತ್ರಿಕ ಶಿಕ್ಷಣ ಇಲಾಖೆ (DTE)
- ವೈದ್ಯಕೀಯ ಶಿಕ್ಷಣ ಇಲಾಖೆ(medical education diportment)
- ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ
- ಆಯುಷ್ ಇಲಾಖೆ
- ವಿಕಲಚೇತನರ ಕಲ್ಯಾಣ ಇಲಾಖೆ
- ಕಾಲೇಜು ಶಿಕ್ಷಣ ಇಲಾಖೆ
- ಕಾರ್ಮಿಕ ಇಲಾಖೆ
- ಕೃಷಿ ಇಲಾಖೆ
- ಜವಳಿ ಮತ್ತು ಕೈಮಗ್ಗ ಇಲಾಖೆ
- ಸಾರಿಗೆ ಇಲಾಖೆ
- ಮೀನುಗಾರಿಕೆ ಇಲಾಖೆ
ಈ ರೀತಿಯ 15 ಸಂಸ್ಥೆಗಳು ಬಹು ಮುಕ್ಯ ಪಾತ್ರ ವಹಿತ್ತವೆ.
5. ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
ಇದಕ್ಕೆ ಅರ್ಜಿ ಹಾಕುವುದು ಸಂಪೂರ್ಣವಾಗಿ ಆನ್ಲೈನ್ ನಲ್ಲೆ ಆಗಿದ್ದು, ಇದನ್ನು internet ಇಲ್ಲದೆ ಅರ್ಜಿ ಹಾಕಲು ಬರುವುದಿಲ್ಲ.
- ಮೊದಲಿಗೆ ನೀವು ಈ ಕೆಳಗಿನ website ಗೆ ಹೋಗಿ. https://ssp.karnataka.gov.
- ಹೋಂ ಪೇಜ್ ನಲ್ಲಿ ಲಭ್ಯವಿರುವ ಖಾತೆಯನ್ನು ರಚಿಸುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಆಧಾರ್ ಸಂಖ್ಯೆ ಮತ್ತು ನಿಮ್ಮ ಹೆಸರು ಆಧಾರ್ ನಲ್ಲಿರುವಂತೆ ಇಲ್ಲಿ ನಮೂದಿಸಿ, ಲಿಂಗವನ್ನು ಆಯ್ಕೆ ಮಾಡಿ, ಕ್ಯಾಪ್ಚಾ ಕೊಡನ್ನು ನಮೂದಿಸಿ ಅರ್ಜಿಯನ್ನು ಮುಂದುವರಿಸಿ.
- ನಿಮ್ಮ ಪಾಲಕ ಅಥವಾ ಪೋಷಕರ ಆಧಾರ್ ಸಂಖ್ಯೆಯನ್ನು ನಮೂದಿಸಿ ಮೊಬೈಲ್ ನಂಬರನ್ನು ಭರ್ತಿ ಮಾಡಿ ಮತ್ತು ಸಬ್‌ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. ನಂತರ ನೀವು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಪಡೆಯುತ್ತೀರಿ.
- ನಂತರ ಅರ್ಜಿದಾರರು ಬಳಕೆದಾರ ID ಮತ್ತು ಪಾಸ್‌ವರ್ಡ್ ಅನ್ನು ಪಡೆಯುತ್ತೀರಿ. ಅದನ್ನು ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.
ಈ ಎಸ್ ಎಸ್ ಪಿ ವಿದ್ಯಾಭ್ಯಾಸನಕ್ಕೆ ಅರ್ಜಿ ಸಲ್ಲಿಸುವುದರಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಇದರಿಂದ ತುಂಬಾ ಅನುಕೂಲವಾಗಲಿದೆ. ಇದಲ್ಲದೆ ಪೋಷಕರಿಗೂ ಕೂಡ ವಿದ್ಯಾರ್ಥಿಗಳಿಗೆ ಹಣವನ್ನು ಕೊಡುವ ಸಮಸ್ಯೆ ಇರುವುದಿಲ್ಲ. ಹಾಗಾಗಿ ತುಂಬಾ ಅನುಕೂಲವಿರುವಂತಹ ಈ ಲೇಖನವನ್ನು ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೂ ಹಾಗೂ ಪೋಷಕರಿಗೂ ಶೇರ್ ಮಾಡಿ. ನೀವು ವಿದ್ಯಾರ್ಥಿ ಆಗಿದ್ದರೆ ಅರ್ಜಿ ಹಾಕುವುದನ್ನು ಮರೆಯಬೇಡಿ.
ವಿಶೇಷ ಸೂಚನೆ:- ಇದು ಕೇವಾಲ ಆಗಸ್ಟ್ 31 ಒಳಗೆ ಸೀಮಿತವಾಗಿರುತ್ತದೆ. ತದ ಮಾಡದೆ ಅರ್ಜಿ ಸಲ್ಲಿಸಿ.
ಇದೇ ತರಹದ ಮಾಹಿತಿಗಾಗಿ ನನ್ನ Whatsapp group ಗೆ join ಆಗಿ 👇👇👇https://chat.whatsapp.com/HnyKonTF53V802ox5pUyDO
sir ಅವ್ರು ಈ ವಿಡಿಯೋದಲ್ಲಿ ತುಂಬಾ ಚೆನ್ನಾಗಿ ಅರ್ಥಪೂರ್ಣವಾಗಿ ವಿವರಿಸಿದ್ದಾರೆ ನೋಡಿ.
https://youtu.be/SojkN4JBvKo?si=vETQgSZX0D0mOurQ
Thank you.
ನನ್ನ ಹೆಸರು ಎ ಉಮೇಶ್. ನಾನು ತಂತ್ರಜ್ಞಾನ (Tech), ಹೊಸ ಉದ್ಯೋಗಗಳು(New Jobs) ಮತ್ತು ಸರ್ಕಾರಿ ಯೋಜನೆಗಳು (Government Schemes) ಇವುಗಳ ಮೇಲೆ ಹೆಚ್ಚಿನ ಲೇಖನಗಳನ್ನು ಬರೆದು ಜನರಿಗೆ ಉಪಯುಕ್ತ ಮಾಹಿತಿಯನ್ನು ನೀಡುತ್ತೇನೆ.
Thank you……
