BGSSS Recruitment 2026: 438 Jobs Notification | Age Limit, Qualification, Apply Online 438 ಹುದ್ದೆಗಳು | ಅರ್ಹತೆ, ದಾಖಲೆಗಳು, ಅರ್ಜಿ ಸಲ್ಲಿಸುವ ವಿಧಾನ

BGSSS Recruitment 2026

1783268355785
BGSSS (Bank Of Baroda)

ನಮಸ್ಕಾರ ಗೆಳೆಯರೇ ಎಲ್ಲರೂ ಹೇಗಿದ್ದೀರಾ? Comment ಮಾಡಿ.

ನಮಸ್ತೆ ಗೆಳೆಯರೇ ಇಂದಿನ ವಿಷಯದಲ್ಲಿ ನಾನು ಎನ್ ತಿಳಿಸುತ್ತಾ ಇದ್ದೀನಿ ಅಂತ ಹೇಳೋದಾದ್ರೆ ಬ್ಯಾಂಕ್ ಆಫ್ ಬರೋಡ ದ ಒಂದು ಸಹಾಯಕ ಸಂಸ್ಥೆಯಲ್ಲಿ ಸುಮಾರು 438 ಹುದ್ದೇಗಳನ್ನೂ ಭರ್ತಿ ಮಾಡುತ್ತಿದ್ದಾರೆ. ಅರ್ಹ ಅಭ್ಯರ್ಥಿಗಳು ಇದರಲ್ಲಿ ಅರ್ಜಿ ಹಾಕಲು ತಿಳಿಸುತ್ತಿದ್ದೇನೆ. ಅರ್ಜಿ ಹಾಕಲು ಏನೇನು ಸಿದ್ಧತೆ ಮಾಡಿಕೊಳ್ಳಬೇಕು, ಅರ್ಜಿ ಹಾಕುವುದು ಹೇಗೆ, ಕೊನೆಯ ದಿನಾಂಕ, ಸಂಬಳ ಎಷ್ಟು ಇರುತ್ತೆ ಮತ್ತು ಅರ್ಜಿ ಸಲ್ಲಿಸಿದ ಮೇಲೆ ಆಯ್ಕೆಯ ಪ್ರಕ್ರಿಯೆಯ ಬಗ್ಗೆ ಇದರಲ್ಲಿ ತಿಳಿಸುತ್ತೇನೆ.

BGSSS Recruitment 2026 / BGSSS ನೇಮಕಾತಿ 2026 – 438 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಭಾರತದಲ್ಲಿ ನಿರುದ್ಯೋಗ ಸಮಸ್ಯೆಯೂ ಇತ್ತೀಚೆಗೆ ಹೆಚ್ಚಾಗುತ್ತಿದೆ ಅದರ ನಡುವೆ ಇಂತಹ ಖಾಲಿ ಉದ್ಯೋಗಗಳನ್ನುಭರ್ತಿ ಮಾಡಲು ಸರ್ಕಾರಗಳು ನಿರ್ಧಾರಿಸತೊಡಗಿದಾಗ, ನಿರುದ್ಯೋಗ ಸಮಸ್ಯೆಯೂ ಸಹ ಸ್ವಲ್ಪ ಮಟ್ಟಿಗೆ ಕಡಿಮೆ ಆಗುತ್ತದೆ.

ಅದೇ ರೀತಿ ಹಣಕಾಸಿನಲ್ಲಿ ಸ್ವಲ್ಪ ಜ್ಞಾನವಿದ್ದು ವ್ಯವಹಾರದ ಕ್ಷೇತ್ರದಲ್ಲಿ ಕೆಲಸ ಮಾಡಲು ಬಯಸುವವರಿಗೆ ಇದೊಂದು ಅತ್ತ್ಯುತ್ತಮ ಅವಕಾಶ. ಕರ್ನಾಟಕದಲ್ಲಿ ಬರೋಡ ಬ್ಯಾಂಕಿನ ಶಾಖೆಗಳು ತುಂಬಾ ಇವೆ. ಈಗ ಕೆಲವೊಂದು ಶಾಖೆಯಲ್ಲಿ ಖಾಲಿ ಉದ್ಯೋಗಗಳು ಇದೆ. ಆ ಉದ್ಯೋಗಗಳನ್ನು ಭರ್ತಿ ಮಾಡಲು ಬ್ಯಾಂಕ್ ಆಫ್ ಬರೋಡ ದ ಸಹಾಯಕ ಸಂಸ್ಥೆಯಾದ Baroda Global Shared Services Limited (BGSSS) ಈ ಸಂಸ್ಥೆಯು ಆ ಖಾಲಿ ಉದ್ಯೋಗಗಳು ತುಂಬಲು ನಿರ್ಧರಿಸಿದೆ.

ಈ ಹುದ್ದೆಗಳನ್ನು ಭರ್ತಿ ಮಾಡಲು BGSSS ಇಲಾಖೆಯು ಅರ್ಹ ಅಭ್ಯರ್ಥಿಗಳಿಗೆ Online ಮೂಲಕ ಅರ್ಜಿ ಆಹ್ವಾನ ಮಾಡಲಾಗಿದೆ.ತಕ್ಷಅನ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ. ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗೆ ಈ ನೇಮಕಾತಿಯು ಉತ್ತಮ ವೃತ್ತಿಜೀವನದ ಅವಕಾಶವನ್ನು ಒದಗಿಸುತ್ತದೆ. ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವವರು ತಮ್ಮ ವಿದ್ಯಾರ್ಹತೆ ಮತ್ತು ಅನುಭವಕ್ಕೆ ತಕ್ಕಂತೆ ಅರ್ಜಿ ಸಲ್ಲಿಸಬಹುದು.

ಇದರಲ್ಲಿ ಕೆಲಸ ಸಿಕ್ಕವರಿಗೆ ಮುಂದೆ ತಮ್ಮ ಭವಿಷ್ಯದಲ್ಲಿ ತುಂಬಾ ದೊಡ್ಡದಾಗಿ ನೆರವಾಗುತ್ತದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಗಳನ್ನು ಓದಿ ಅಗತ್ಯವಾದ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಅರ್ಜಿ ಸಲ್ಲಿಸುವುದು ಉತ್ತಮ.

ಇದನ್ನು ಓದಿ:- Latest Government Job Alert: Karnataka Police Recruitment 2026.7,925 Candidates for Various Posts​ ಇತ್ತೀಚಿನ ಸರ್ಕಾರಿ ಉದ್ಯೋಗದ ಮಾಹಿತಿ: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 7,925 ಹುದ್ದೆಗಳ ಭರ್ತಿ

BGSSS Recruitment 2026 Overview / ನೇಮಕಾತಿಯ ಮುಖ್ಯಾಂಶಗಳು

ಈ ನೇಮಕಾತಿಯನ್ನು Baroda Global Shared Services Limited (BGSSS) ಸಂಸ್ಥೆಯು ಪ್ರಕಟಿಸಿದೆ. ಒಟ್ಟು 438 ಹುದ್ದೆಗಳು ಭರ್ತಿಯಾಗಲಿದ್ದು, ದೇಶದ ವಿವಿಧ ಭಾಗಗಳಲ್ಲಿ ಕೆಲಸ ಮಾಡುವ ಅವಕಾಶ ಅಭ್ಯರ್ಥಿಗಳಿಗೆ ದೊರೆಯಲಿದೆ. ಅರ್ಜಿ ಸಲ್ಲಿಸುವ ವಿಧಾನ ಸಂಪೂರ್ಣವಾಗಿ ಆನ್‌ಲೈನ್ ಆಗಿದೆ. ಸಂಸ್ಥೆಯ ಅಗತ್ಯಕ್ಕೆ ಅನುಗುಣವಾಗಿ ವಿವಿಧ ವಿಭಾಗಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಬ್ಯಾಂಕಿಂಗ್ ಸೇವೆಗಳ ನಿರ್ವಹಣೆ, ಗ್ರಾಹಕ ಸೇವೆ, ಆಡಳಿತ, ಹಣಕಾಸು ಹಾಗೂ ಇತರೆ ವಿಭಾಗಗಳಲ್ಲಿ ಕೆಲಸ ಮಾಡಲು ಇದು ಉತ್ತಮ ಅವಕಾಶವಾಗಿದೆ.

Post Details / ಹುದ್ದೆಗಳ ವಿವರ

ಈ ಬ್ಯಾಂಕ್ ಶಾಖೆಗಳಲ್ಲಿ ಈಗ BGSSS ಹಲವಾರು ಪೋಸ್ಟ್ ಗಳಿಗೆ ನೇಮಕ ಮಾಡುತ್ತಿದೆ. ಅವುಗಳು ಯಾವುವು ಅಂದ್ರೆ

  • Field Sales Officer (ಕ್ಷೇತ್ರ ಮಾರಾಟ ಅಧಿಕಾರಿ)
  • Tele Collection Agent (ದೂರವಾಣಿ ಮೂಲಕ ಸಾಲ ವಸೂಲಾತಿ ಪ್ರತಿನಿಧಿ)
  • Executive (ಕಾರ್ಯನಿರ್ವಾಹಕ)
  • Trade Finance Executive (ವ್ಯಾಪಾರ ಹಣಕಾಸು ಕಾರ್ಯನಿರ್ವಾಹಕ)
  • Risk Review Officer (ಅಪಾಯ ಪರಿಶೀಲನಾ ಅಧಿಕಾರಿ)
  • MIS Analyst (ನಿರ್ವಹಣಾ ಮಾಹಿತಿ ವ್ಯವಸ್ಥೆ ವಿಶ್ಲೇಷಕ)
  • Deputy Manager (ಉಪ ವ್ಯವಸ್ಥಾಪಕ)
  • Procurement Officer (ಖರೀದಿ ಅಧಿಕಾರಿ)
  • Company Secretary (ಕಂಪನಿ ಕಾರ್ಯದರ್ಶಿ)
  • Business Head (ವ್ಯವಹಾರ ವಿಭಾಗದ ಮುಖ್ಯಸ್ಥ)

ಹೀಗೆ 10 ವಿಭಾಗಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದಾರೆ. ಕೆಲವು ಹುದ್ದೆಗಳಿಗೆ ಹೆಚ್ಚಿನ ಮಟ್ಟದಲ್ಲಿ ನೇಮಕ ಮಾಡುತ್ತಾರೆ. ಇನ್ನೂ ಕೆಲವು ಹುದ್ದೆಗಳಿಗೆ ವಿಶೇಷ ಪರಿಣಿತಿ ಹೊಂದಿರುವ ಅಭ್ಯರ್ಥಿಗಳು ಆಯ್ಕೆ ಮಾಡುತ್ತಾರೆ. ಆದ್ದರಿಂದ ಅರ್ಹ ಅಭ್ಯರ್ಥಿಗಳು ತಮ್ಮ ಅರ್ಹತೆಗೆ ಅನುಗುಣವಾಗಿ ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳಿ.

Educational Qualification / ಶೈಕ್ಷಣಿಕ ಅರ್ಹತೆ

ಏನೇ ಆಗಲಿ ಪ್ರತಿಯೊಂದು ಹುದ್ದೆಯನ್ನು ನಮ್ಮ ಪಾಲಾಗಿಸಿಕೊಳ್ಳಬೇಕೆಂದರೆ ಅದಕ್ಕೆ ಆಡ ವಿದ್ಯಾಬ್ಯಾಸ ಮಾಡಿರಬೇಕು. ಅದೇ ರೀತಿ ಇದಕ್ಕೂ ಸಹ ವಿದ್ಯಾರ್ಹತೆ ಇದೆ.

ಹೆಚ್ಚಿನ ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕೆಲವು ಹುದ್ದೆಗಳಿಗೆ ವಾಣಿಜ್ಯ, ಹಣಕಾಸು, ಕಂಪ್ಯೂಟರ್ ಸೈನ್ಸ್, ಮಾಹಿತಿ ತಂತ್ರಜ್ಞಾನ, MBA, ಕಂಪನಿ ಸೆಕ್ರೆಟರಿ ಅಥವಾ ಇತರೆ ಸಂಬಂಧಿತ ವಿದ್ಯಾರ್ಹತೆ ಅಗತ್ಯವಾಗಬಹುದು. ಕೆಲವು ಹುದ್ದೆಗಳಿಗೆ ಸಂಬಂಧಿತ ಕ್ಷೇತ್ರದಲ್ಲಿ ಕೆಲಸದ ಅನುಭವಕ್ಕೂ ಆದ್ಯತೆ ನೀಡಲಾಗುತ್ತದೆ. ಆದ್ದರಿಂದ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ ಮತ್ತು ಅನುಭವಕ್ಕೆ ಹೊಂದುವ ಹುದ್ದೆಯನ್ನು ಆಯ್ಕೆ ಮಾಡುವುದು ಸೂಕ್ತ

.ಇದನ್ನು ಓದಿ:- Best Upcoming 5G Smartphones in July 2026: ಜುಲೈನಲ್ಲಿ ಬಿಡುಗಡೆಯಾಗುತ್ತಿರುವ ಟಾಪ್ 5 ಸ್ಮಾರ್ಟ್‌ಫೋನ್‌ಗಳು!”

Age Limit / ವಯೋಮಿತಿ

ಈ ನೇಮಕಾತಿಯಲ್ಲಿ ಎಲ್ಲ ಹುದ್ದೆಗಳಿಗೂ ಒಂದೇ ರೀತಿಯ ವಯೋಮಿತಿಯನ್ನು ಪ್ರಕಟಿಸಿಲ್ಲ. ಹುದ್ದೆಯ ಸ್ವರೂಪ, ಅನುಭವ ಹಾಗೂ ಜವಾಬ್ದಾರಿಯನ್ನು ಆಧರಿಸಿ ಅರ್ಹತೆಯನ್ನು ಪರಿಗಣಿಸಲಾಗುತ್ತದೆ. ಕೆಲವು ಹುದ್ದೆಗಳಿಗೆ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ಅಭ್ಯರ್ಥಿಗಳು ತಮ್ಮ ಹುದ್ದೆಗೆ ಸಂಬಂಧಿಸಿದ ಅರ್ಹತಾ ಮಾಹಿತಿಯನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸಬಹುದು.

Selection Process / ಆಯ್ಕೆ ಪ್ರಕ್ರಿಯೆ

ಆಯ್ಕೆ ಪ್ರಕ್ರಿಯೆಯು ಹಲವಾರು ಹಂತಗಳಲ್ಲಿ ನಡೆಯುತ್ತದೆ. ಅದು ಹೇಗೆ ಅಂದೆಯುತ್ತದೆ ಅಂದ್ರೆ ಮೊದಲಿಗೆ

  • ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಸಲ್ಲಿಸಬೇಕು.
  • ನಂತರ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಒಂದು shortlist ಮಾಡುತ್ತಾರೆ.
  • ಅಗತ್ಯವಿದ್ದಲ್ಲಿ ವೈಯಕ್ತಿಕ ಸಂದರ್ಶನ ಅಥವಾ ಕೌಶಲ್ಯ ಪರೀಕ್ಷೆಯನ್ನು ನಡೆಸಬಹುದು.

ಇದೆಲ್ಲ ಮುಗಿದ ಮೇಲೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು ನೇಮಕ ಮಾಡಿಕೊಳ್ಳುತ್ತಾರೆ. ಆಯ್ಕೆ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳ ವಿದ್ಯಾರ್ಹತೆ, ಅನುಭವ ಹಾಗೂ ಕಾರ್ಯನೈಪುಣ್ಯಕ್ಕೂ ಮಹತ್ವ ನೀದುತ್ತದೆ.

Salary Details / ವೇತನ ವಿವರ

ಇನ್ನೂ BGSSS ಸಂಸ್ಥೆಯು ವೇತನ ವಿವರವನ್ನು ಪ್ರಕಟಿಸಿಲ್ಲ. ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆ, ಅನುಭವ, ಕೆಲಸದ ಸ್ಥಳ ಹಾಗೂ ಸಂಸ್ಥೆಯ ಮಾನವ ಸಂಪನ್ಮೂಲ (HR) ನೀತಿಯ ಆಧಾರದ ಮೇಲೆ ವೇತನವನ್ನು ನಿಗದಿಪಡಿಸಲಾಗುತ್ತದೆ. ವೇತನದ ಜೊತೆಗೆ ಸಂಸ್ಥೆಯ ನಿಯಮಗಳಿಗೆ ಅನುಸಾರ ಆಗುವ ಭತ್ಯೆಗಳು ಮತ್ತು ಇತರೆ ಉದ್ಯೋಗ ಸೌಲಭ್ಯಗಳನ್ನು ನೀಡುತ್ತದೆ. ವೇತನದ ನಿಖರ ಮಾಹಿತಿಯನ್ನು ಆಯ್ಕೆ ಪ್ರಕ್ರಿಯೆಯ ನಂತರ ಅಥವಾ ನೇಮಕಾತಿ ಪತ್ರದಲ್ಲಿ ತಿಳಿಸಲಾಗುತ್ತದೆ. ಆಯ್ಕೆ ಆಡ ಅಭ್ಯರ್ಥಿಗಳಿಗೆ ಅಲ್ಲಿ ವೇತನದ ಮಾಹಿತಿ ಸಿಗುತ್ತದೆ.

Important Dates / ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸುವ ಪ್ರಕ್ರಿಯೆಯು Online ನಲ್ಲಿ ಆರಂಭ ಆಗಿದೆ. ಅರ್ಹ ಅಭ್ಯರ್ಥಿಗಳು ತಡ ಮಾಡದೆ 15 July ತಿಂಗಳೊಳಗಾಗಿ ಅರ್ಜಿ ಸಲ್ಲಿಸಿ. ಕೊನೆ ದಿನಾಂಕದವರೆಗೆ ಕಾಯಬೇಡಿ. ಯಾಕಂದ್ರೆ ಯಾರಿಗೆ ಗೊತ್ತು ಆ ಕ್ಷಣದಲ್ಲಿ ಸರ್ವರ್ ಬಿಸಿ ಆಗಬಹುದು. ಹಾಗಾಗಿ 15 July last date ಆಗಿದೆ.

ಇದನ್ನು ಓದಿ:- SSP Scholarship 2026 Karnataka: Apply Online, Eligibility, Last Date, Status Check & Benefits.

Documents Required / ಅಗತ್ಯ ದಾಖಲೆಗಳು

  • ಪದವಿ ಪ್ರಮಾಣಪತ್ರ (Degree Certificate)
  • ಅಂಕಪಟ್ಟಿಗಳು (Marks Cards / Marksheets)
  • ಆಧಾರ್ ಕಾರ್ಡ್ ಅಥವಾ ಇತರೆ ಗುರುತಿನ ಚೀಟಿ (Aadhaar Card or Any Valid ID Proof)
  • ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ (Recent Passport Size Photograph)
  • ಸಹಿ (Signature)
  • ಅನುಭವ ಪ್ರಮಾಣಪತ್ರ, ಅನ್ವಯಿಸಿದಲ್ಲಿ (Experience Certificate, if applicable)
  • ಜಾತಿ ಪ್ರಮಾಣಪತ್ರ, ಅನ್ವಯಿಸಿದಲ್ಲಿ (Caste Certificate, if applicable)
  • ಅಂಗವೈಕಲ್ಯ ಪ್ರಮಾಣಪತ್ರ, ಅನ್ವಯಿಸಿದಲ್ಲಿ (Disability Certificate, if applicable)
  • ಇತರೆ ಅಗತ್ಯ ದಾಖಲೆಗಳು, ಹುದ್ದೆಯ ಅವಶ್ಯಕತೆಗೆ ಅನುಗುಣವಾಗಿ (Other Required Documents, as applicable for the post).

ಇವುಗಳನ್ನು ಅರ್ಜಿ ಸಲ್ಲಿಸುವ ಮುನ್ನ ready ಇಟ್ಟುಕೊಳ್ಳಿ.

Application Process / ಅರ್ಜಿ ಸಲ್ಲಿಸುವ ವಿಧಾನ

ನೀವು ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ನೀವು ಅರ್ಜಿ ಸಲ್ಲಿಸಬಹುದು. ಆರ್ಜಿಸಲ್ಲಿಸಲು ನೀವು ನೇರವಾಗಿ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ಹೋಗಿ.

  • ನಂತರ ಅಲ್ಲಿ home page open ಆಗುತ್ತದೆ. ಅದಾದ ನಂತರ ಅಲ್ಲಿ ಕಾಣಿಸುವ Menu ಬನ್ನು ಕ್ಲಿಕ್ ಮಾಡಿ.
  • ನಂತರ ಅಲ್ಲಿ Careers ಎಂಬ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿದರೆ ಅಲ್ಲಿ ಒಂದರ ಕೆಳಗೆ ಒಂದರಂತೆ ಜಾಬ್ಸ್ ಬರುತ್ತವೆ
  • ನಂತರ ನಿಮಗೆ ಬೇಕಾದ job ನ ಆಯ್ಕೆ ಮಾಡಿಕೊಂಡು ಅಲ್ಲಿ ನಿಮ್ಮ ವಿವರಗಳನ್ನು ತುಂಬಿ Submit ಮಾಡಿದರೆ ನೀವು ಅರ್ಜಿ ಸಲ್ಲಿಸಿದಾಂತೆ.

ಈ ರೀತಿಯಾಗಿ ನೀವು ನಿಮ್ಮ mobile ಮೂಲಕವೂ ಅರ್ಜಿ ಹಾಕಬಹುದು. ಮತ್ತು laptop ನಲ್ಲಿ ಸಹ ಅರ್ಜಿ ಹಾಕಬಹುದು.

ಕೊನೆಯ ಮಾತು.

ಈ ಉದ್ಯೋಗ ಕೊಡುವ ಮಾಹಿತಿಯು ಅನೇಕ ಉದ್ಯೋಗಾಕಾಂಕ್ಷಿಗಳಿಗೆ ಮಂದಹಾಸ ಮೂಡಿಸಿದೆ. ಇದರಿಂದಾಗಿ ನಿರುದ್ಯೋಗದ ಸಂಸ್ಯೇ ಸಹ ಅಲ್ಪ ಮಟ್ಟಿಗೆ ಕಡಿಮೆ ಆಗುತ್ತದೆ. ಇದರಲ್ಲಿ ಒಟ್ಟು ಸುಮಾರು 438 ಹುದ್ದೆಗಳಿಗೆ ಭರ್ತಿ ಮಾಡುತ್ತಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಗಮನವಿಟ್ಟು ಸರಿಯಾಗಿ ನಮೂದಿಸಿ ಅರ್ಜಿಯನ್ನು ಸಲ್ಲಿಸಿ.

ಇದು ಕೇವಲ ಕರ್ನಾಟಕದಲ್ಲಿ ಕೆಲಸ ಸಿಗುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಭಾರತದ ಯಾವುದೇ ರಾಜ್ಯದಲ್ಲಿ ಆದ್ರೂ ಕೆಲಸ ಸಿಗಬಹುದು. ಆದ್ರೆ ಸಂಬಳವೂ ಸಹ ಜಾಸ್ತಿ ಇರಬಹುದು ಎಂದು ಅಂದಾಜು ಮಾಡಲಾಗಿದೆ. ಹಾಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ತನಕ ಕಾಯಬೇಡಿ.Aಋಜು ಸಲ್ಲಿಸುವ ಮುನ್ನ ಎಲ್ಲ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಇಟ್ಟುಕೊಳ್ಳಿ.

ಈ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸಿದ್ದೇನೆ. ನಿಮ್ಮ ಸ್ನೇಹಿತರಿಗೂ ಇದನ್ನು ಶೇರ್ ಮಾಡಿ.

ಇನ್ನೂ ಇದೆ ತರಹ ಹೆಚ್ಚಿನ ಮಾಹಿತಿಗೆ ನಮ್ಮ Whatsapp group ಗೆ Join ಆಗಿ, ಸ್ಕ್ರೀನ್ ಮೇಲೆ ಇದೆ Whatsapp ಬಟನ್.

Thank you for Reading

ಲೇಖಕರು:- A UMESHA, Yarangaligi

Leave a Comment