Special Intensive Revision (SIR) of Electoral Rolls Explained | Voter List Update Process in Kannada – ಮತದಾರರ ಪಟ್ಟಿ ನವೀಕರಣ ಸಂಪೂರ್ಣ ಮಾಹಿತಿ

Special Intensive Revision (SIR) of Electoral Rolls – Voter List Debate, Citizenship Issue & Right to Vote Explained in Kannada.

Special Intensive Revision (SIR)

1782749951705
Voting in election

ನಮಸ್ತೆ ಗೆಳೆಯರೇ ಎಲ್ಲರೂ ಹೇಗಿದ್ದೀರಾ? Comment ಮಾಡಿ.

ನಮಸ್ತೆ ಗೆಳೆಯರೇ 🙏. ನಾನು ಇಂದಿನ ವಿಷಯದಲ್ಲಿ ನಿಮಗೆ ಕೇಂದ್ರ ಸರ್ಕಾರ update ಮಾಡುತ್ತಿರುವ “ಮತದಾರರ ಪಟ್ಟಿ ಯ ಬಗ್ಗೆ ಹೇಳುತ್ತಿದ್ದೇನೆ. ನಾಳೆಯಿಂದಲೇ ನಿಮ್ಮ ಮನೆಗೆ ಆಫೀಸರ್ಸ್ ಬಂದು ಮಾಹಿತಿಯನ್ನು ಕೇಳುತ್ತಾರೆ. ನೀವು ಅವರಿಗೆ ಯಾವ ಯಾವ ಮಾಹಿತಿಯನ್ನು ನೀಡಬೇಕೆಂದು ಇದರಲ್ಲಿ ಸಂಪೂರ್ಣ ಮಾಹಿತಿ ಇದೆ.

ಭಾರತದ ಚುನಾವಣಾ ವ್ಯವಸ್ಥೆ ಸರಿಯಾಗಿ ನಡೆಯಬೇಕೆಂದರೆ, ಅದಕ್ಕೆ ಮೊದಲು ಮತದಾರರ ಪಟ್ಟಿ ಸರಿಯಾಗಿರಬೇಕು. ಈ ಚುನಾವಣೆ ಸರಿಯಾಗಿ ನಡೆಯಲು ಅತೀ ಮುಖ್ಯವಾದ ಅಂಶವೆಂದರೆ ಅದು voters list (ಮತದಾರರ ಪಟ್ಟಿ). ಈಗ ಅದರಲ್ಲಿ ಇರುವ ಹೆಸರುಗಳನುಸಾರ ಮಾತ್ರ ಜನ ವೋಟ್ ಮಾಡಬಹುದು. ಈಗ ಈ ಮತದಾರರ ಪಟ್ಟಿಯನ್ನು ನವೀಕರಿಸಲು ಸರ್ಕಾರವು Special Intensive Revision (SIR) ಅನ್ನು ನೇಮಿಸಿದೆ.

SIR ತಂಡವು ನಿಮ್ಮ ಮನೆಗೆ ಬಂದು ಒಂದಿಷ್ಟು ಮಾಹಿತಿಯನ್ನು ಕೇಳುತ್ತಾರೆ. ಅವರು ಕೇಳಿದ ಮಾಹಿತಿಯನ್ನು ಸರಿಯಾಗಿ ಕೊಡಿ.

Special Intensive Revision (SIR) ಅಂದ್ರೇನು?

Special Intensive Revision (SIR) ಅಂದ್ರೆ Election Commission of India (ECI) ನಡೆಸುವ ಒಂದು ಮತದಾರರ ಪಟ್ಟಿಯನ್ನು ಪರಿಶೀಲನೆ ಮಾಡುವ ಒಂದು ವಿಶೇಷ ಪ್ರಕ್ರಿಯೆ.

ಸಾಮಾನ್ಯವಾಗಿ ಪ್ರತಿ ವರ್ಷ ಸಹ ಮತದಾರರ ಪಟ್ಟಿಯನ್ನು ನವೀಕರಿಸಲಾಗುತಿತ್ತು. ಆದ್ರೆ ಈ ವರ್ಷ ಕೇಂದ್ರ ಸರ್ಕಾರವೂ ವಿಶೇಷವಾಗಿ SIR ಹೆಸರಿನಲ್ಲಿ ಒಂದು ತಂಡವನ್ನು ರಚಿಸಲಾಗಿದೆ. ಇದರಿಂದ ಈ ವರ್ಷ ಮತದಾರರ ಪಟ್ಟಿಯನ್ನು ತುಂಬಾ ಗಂಭೀರವಾಗಿ ನವೀಕರಿಸಲು ನಿರ್ಧರಿಸಿದೆ.

ಇದರ ಮುಖ್ಯ ಉದ್ದೇಶಗಳು:

  • ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ಪರಿಶೀಲಿಸುವುದು
  • ಹೊಸ eligible ಮತದಾರರನ್ನು ಸೇರಿಸುವುದು
  • ಮೃತಪಟ್ಟ ಅಥವಾ ಸ್ಥಳಾಂತರಗೊಂಡ ವ್ಯಕ್ತಿಗಳ ಹೆಸರುಗಳನ್ನು ತೆಗೆದುಹಾಕುವುದು

ಇದು ಒಂದು ರೀತಿಯಲ್ಲಿ “complete voter list cleanup process” ಎನ್ನಬಹುದು.

Special Intensive Revision(SIR) ಪ್ರಕ್ರಿಯೆ ಹೇಗೆ ನಡೆಯುತ್ತದೆ?

SIR ಪ್ರಕ್ರಿಯೆ ಬಹಳ ಹಂತಗಳಲ್ಲಿ ನಡೆಯುತ್ತದೆ. Election Commission ಇದನ್ನು Booth Level Officers (BLOs) ಮೂಲಕ ಜಾರಿಗೆ ತರುತ್ತದೆ. ಅವುಗಳಲ್ಲಿ ಹೀಗಿವೆ.

ಹಂತ 1: ಮನೆ ಮನೆ ಭೇಟಿ.

BLO ಗಳು ನಿಮ್ಮ ನಿಮ್ಮ ಮನೆಗಳಿಗೆ ಭೇಟಿ ನೀಡುತ್ತಾರೆ. ನಂತರ ಅವರು ನಿಮ್ಮ ಮನೆಯಲ್ಲಿ ಇರುವ ಮತದಾರರ ಬಗ್ಗೆ ಪರಿಶೀಲಿಸುತ್ತಾರೆ.

ಹಂತ 2: ಮಾಹಿತಿ ಸಂಗ್ರಹ.

BlO ಗಳು ನಿಮ್ಮ ಮನೆಗೆ ಬಂದು ಮತದಾರರ ಬಗ್ಗೆ ವಿವರಿಸುತ್ತಾರೆ. ವಯಸ್ಸು, ವಿಳಾಸ ಮತ್ತು ಇನ್ನು ಮುಂತಾದ ವಿಷಯಗಳ ಬಗ್ಗೆ ಅವರು ಮಾಹಿತಿಯನ್ನು ಸಂಗ್ರಹಿಸಿಕೊಳ್ಳುತ್ತಾರೆ.

ಹಂತ 3: ಮತದಾರರ ಪಟ್ಟಿಗೆ ಸೇರ್ಪಡೆ.

ನಿಮ್ಮ ಮನೆಯಲ್ಲಿ ಯಾರಾದರೂ 18 ವರ್ಷ ತುಂಬಿದವರು ಇದ್ದರೆ ಅವರನ್ನು voter list (ಮತದಾರರ ಪಟ್ಟಿಗೆ) ಸೇರ್ಪಡೆ ಮಾಡುತ್ತಾರೆ.

ಹಂತ 4: ಹೆಸರು ತೆಗೆದು ಹಾಕುವುದು.

  • ಮೃತಪಟ್ಟವರು
  • ಬೇರೆ ಪ್ರದೇಶಕ್ಕೆ ಸ್ಥಳಾಂತರದವರು
  • ತಪ್ಪು ಹೆಸರು ನೋಂದಾಯಿತ

ನಿಮ್ಮ ಮನೆಯಲ್ಲಿ ಈ ಮೇಲಿನ ರೀತಿ ಬದಲಾವಣೆ ಆಗಿದ್ದರೆ ಹೆಸರನ್ನು ತೆಗೆದು ಹಾಕುತ್ತಾರೆ.

ಹಂತ 5: ಅಂತಿಮ voter list ಪ್ರಕಟಿಸುವುದು.

ಈ ಮೇಲಿನ ಎಲ್ಲಾ ಸರಿಯಾದಾಗ ನಿಮಗೆ ಅಂತಿಮವಾಗಿ ವೋಟರ್ ಲೀಸ್ಟ್ ಅನ್ನು ಕೊಡ್ತಾರೆ.

(ಆದ್ರೆ ಗಮನಿಸಿ ಇವೆಲ್ಲವೂ ಆಗುವುದಕ್ಕೆ ತಿಂಗಳುಗಳ ಸಮಯ ಬೇಕು)

SIR ಪ್ರಕ್ರಿಯೆ ನಡೆಸಲು ಬೇಕಾಗುವ ಪ್ರಮುಖ ದಾಖಲೆಗಳು

  • ನೀವೇನಾದರೂ employ ಆಗಿದ್ದರೆ ಅದರ card, ಗುರುತಿನ ಚೀಟಿ ಅಥವಾ ಪೆಕ್ಷನ್ ಪಡೆಯುತ್ತಿದ್ದಾರೆ ಅದರ ಚೀಟಿ.
  • 1987 ರ ಕೆಳಗಿನ ನಿಮ್ಮದು ಯಾವುದಾದರೂ ಬ್ಯಾಂಕ್ ಖಾತೆ ಅಥವಾ LIC ಇದ್ದರೆ ಮಾತ್ರ ready ಇಟ್ಟುಕೊಳ್ಳಿ.
  • ಜನನ ಪ್ರಮಾಣ ಪತ್ರ (birth certificate)
  • ನಿಮ್ಮ ಬಳಿ passport ಇದ್ದರೆ ಅದನ್ನು ದಾಖಲೆಯಾಗಿ ಸಲ್ಲಿಸಿ.
  • SSLC Marks Card ಅಥವಾ TC. ಅದರ ನಂತರ ಮುಂದಿನ ವಿದ್ಯಾಭ್ಯಾಸದ TC/Marks Card ಇದ್ದರೆ ದಾಖಲೆಯಾಗಿ ಸಲ್ಲಿಸಿ.
  • ವಾಸಸ್ಥಳದ ಪ್ರಮಾಣ ಪತ್ರ (ಖಡ್ಡಾಯ).
  • cast and Income Certificate (ಜಾತಿ ಮತ್ತು ಆದಾಯ ಪ್ರಮಾಣ ಪತ್ರ). (ಖಡ್ಡಾಯ)
  • ನಿಮಗೆ ಸರ್ಕಾರದ ಕಡೆಯಿಂದ ಮನೆ, ಜಾಗ ಇನ್ನಿತರ ಸೌಲಭ್ಯ ಪಡೆದಿದ್ದರೆ ಅದರ Grand ಪತ್ರ.

ಇದರಲ್ಲಿ ನಿಮಗೆ ಸಂಭಿಂಡಿಸುವ ಎಲ್ಲ ದಾಖಲೆಗಳನ್ನು Ready ಮಾಡಿ ಇಟ್ಟುಕೊಳ್ಳಿ (ನಿಮಗೆ ಅನ್ವಯವಾಗುವ ದಾಖಲೆಗಳು)

Citizenship vs Voting Rights – ಏಕೆ ವಿವಾದ?

SIR ಪ್ರಕ್ರಿಯೆಯ ಬಗ್ಗೆ ಪ್ರಮುಖ ಚರ್ಚೆ ನಡೆಯುತ್ತಿರುವ ವಿಷಯವೆಂದರೆ citizenship ಮತ್ತು voting rights ನಡುವಿನ ಸಂಬಂಧ.

ಕೆಲವರು ಹೇಳುವಂತೆ:

  • voter list ಪರಿಶೀಲಿಸುವಾಗ citizenship ಬಗ್ಗೆ ಪ್ರಶ್ನೆಗಳು ಬರುತ್ತವೆ.
  • ಕೆಲವರ ದಾಖಲೆಗಳು ಪರಿಶೀಲನೆಯಾಗುವಾಗ ಗೊಂದಲ ಉಂಟಾಗುತ್ತದೆ.

ಆದರೆ ಕಾನೂನು ಪ್ರಕಾರ:

Election Commission ನ ಕೆಲಸ citizenship ನಿರ್ಧಾರ ಮಾಡುವುದಲ್ಲ ಅವರ ಕೆಲಸ ಕೇವಲ voter list ನಿರ್ವಹಣೆ ಮಾತ್ರ ಅಂದರೆ ಯಾರಾದರೂ ಭಾರತೀಯ ನಾಗರಿಕರಾಗಿದ್ದಾರೋ ಇಲ್ಲವೋ ಎಂಬ ಅಂತಿಮ ನಿರ್ಧಾರ ECI ತೆಗೆದುಕೊಳ್ಳುವುದಿಲ್ಲ.

ಈ ವಿಷಯದಲ್ಲಿ Supreme Court ನ ದೃಷ್ಟಿಕೋನ.

ನಮ್ಮ ದೇಶದ ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ಸ್ಪಷ್ಟವಾದ ಅಭಿಪ್ರಾಯ ನೀಡಿದೆ. ಅದೇನಪ್ಪಾ ಅಂತ ಅಂದ್ರೆ

  • Election Commission ಗೆ voter list ನವೀಕರಣ ಮಾಡುವ ಸಂಪೂರ್ಣ ಅಧಿಕಾರ ಇದೆ.
  • ಮತದಾರರ ಪಟ್ಟಿಯನ್ನು ಶುದ್ಧಗೊಳಿಸುವುದು constitutional duty ಆಗಿದೆ
  • ಆದರೆ citizenship ನಿರ್ಧಾರ ಮಾಡುವುದು ಬೇರೆ ಕಾನೂನು ಪ್ರಕ್ರಿಯೆ

ಇದರಿಂದಾಗಿ SIR ಪ್ರಕ್ರಿಯೆ ಕಾನೂನಾತ್ಮಕವಾಗಿ ಮಾನ್ಯವಾಗಿದೆ ಅಂತಾನೆ ಹೇಳಬಹುದು.

SIR ಬಗ್ಗೆ ಇರುವ ವಿವಾದಗಳು

SIR ಜಾರಿಗೆಯ ಬಗ್ಗೆ ಒಂದಿಷ್ಟು ವಿವಾದಗಳು ಸಹ ಹುಟ್ಟಿಕೊಂಡವು. ಅವುಗಳೆಂದರೆ

1. ತಪ್ಪು ಹೆಸರು ತೆಗೆದುಹಾಕುವ ಭಯ.

ಕೆಲವು ಸಂದರ್ಭಗಳಲ್ಲಿ ಸರಿಯಾಗಿರುವ ಹೆಸರುಗಳನ್ನು ತೆಗೆದು ಹಾಕಬಹುದು ಎಂಬ ಆತಂಕ ಇದೆ.

2.transparency ಸಮಸ್ಯೆ

ಪ್ರಕ್ರಿಯೆ ಹೇಗೆ ನಡೆಯುತ್ತಿದೆ ಎಂಬುದರ ಬಗ್ಗೆ ಸಂಪೂರ್ಣ ಪಾರದರ್ಶಕತೆ ಬೇಕು ಎಂದು ಕೆಲವರು ಒತ್ತಾಯಿಸುತ್ತಿದ್ದಾರೆ..

3.ರಾಜಕೀಯ ಚರ್ಚೆ.

ಕೆಲವು ರಾಜಕೀಯ ಪಕ್ಷಗಳು ಈ ಪ್ರಕ್ರಿಯೆಯನ್ನು ಚುನಾವಣಾ ರಾಜಕೀಯದ ದೃಷ್ಟಿಯಿಂದ ಪ್ರಶ್ನಿಸುತ್ತಿವೆ..

Right to Vote ನ ಮಹತ್ವ

ಒಂದೇ ಒಂದು ಓಟಿನಿಂದ ಒಬ್ಬ ರಾಜಕಾರಣಿ ಗೆಲ್ಲಬಹುದು. ಅದೇ ರೀತಿ ಪ್ರತಿಯೊಬ್ಬ ಮಾನವನ ಹಕ್ಕು ಈ voting Power.

ವೋಟಿಂಗ್ಸ್ ಸಂಖ್ಯೆ ಎಷ್ಟು ಜಾಸ್ತಿ ಆಗುತ್ತವೆಯೋ ಅಷ್ಟೇ ಒಬ್ಬ ಒಳ್ಳೆಯ ಜನ ಪರ ಮತ್ತು ಒಬ್ಬ ಒಳ್ಳೆಯ ನಾಯಕನನ್ನು ಆಯ್ಕೆ ಮಾಡಬಹುದು. ಇದೆಲ್ಲ ಒಬ್ಬ ಮಾನವನಿಗೆ ವೋಟಿಂಗ್ Power ಇದ್ದರೆ ಮಾತ್ರ ಸಾದ್ಯ.

SIR ಯ ಪ್ರಯೋಜನಗಳು

ಈ SIR ಮಾಡುವುದರಿಂದ ಎಷ್ಟು ಬದಲಾವಣೆ ಆಗುತ್ತದೆ ಅಂದ್ರೆ, ಮತ್ತು ಅಷ್ಟೇ ಅಭಿವೃದ್ದಿ ಸಹ ಆಗುತ್ತದೆ.

  • voter list ಹೆಚ್ಚು ಶುದ್ಧವಾಗುತ್ತದೆ.
  • fake voters ಕಡಿಮೆಯಾಗುತ್ತಾರೆ.
  • ಚುನಾವಣೆ ವ್ಯವಸ್ಥೆ ಹೆಚ್ಚು ವಿಶ್ವಾಸಾರ್ಹವಾಗುತ್ತದೆ.
  • ನಿಜವಾದ ಮತದಾರರಿಗೆ ಸರಿಯಾದ ಹಕ್ಕು ದೊರೆಯುತ್ತದೆ.

SIR ಯ ಸವಾಲುಗಳು

ಈ SIR ಅನ್ನು ನಡೆಸುವುದು ಅಷ್ಟು ಸುಲಭವಲ್ಲ. ಇದಕ್ಕೆ ಮುಖ್ಯ ಕಾರಣಗಳಿವೆ. ಅವುಗಳೆಂದರೆ!

  • ದೊಡ್ಡ ಪ್ರಮಾಣದ data collection ಮಾಡುವುದು ಸ್ವಲ್ಪ ಕಷ್ಟ.
  • ಗ್ರಾಮೀಣ ಪ್ರದೇಶಗಳಲ್ಲಿ ಮಾಹಿತಿ ಕೊರತೆ. ಯಾಕೆಂದರೆ ಜನರಿಗೆ ಅಷ್ಟೊಂದು ಇದರ ಬಗ್ಗೆ ಗೊತ್ತಿರೋದಿಲ್ಲ.
  • ಜನರಲ್ಲಿ ಅರಿವು ಕಡಿಮೆ.
  • ಬೇಕಾದ ಎಲ್ಲ ದಾಖಲೆಗಳು ಇರೋದಿಲ್ಲ.

ಕೊನೆ ಮಾತು Special Intensive Revision(SIR)

Special Intensive Revision (SIR) ಭಾರತದ ಚುನಾವಣಾ ವ್ಯವಸ್ಥೆಯಲ್ಲಿ voter list ಅನ್ನು ಶುದ್ಧ ಮತ್ತು ನಿಖರವಾಗಿಡಲು ನಡೆಸುವ ಒಂದು ಪ್ರಮುಖ ಪ್ರಕ್ರಿಯೆಯಾಗಿದೆ. ಇದು democratic system ಅನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಆದ್ರೇ ಇದು ದಿನಾಂಕ 30/06/2026 ರಿಂದ ಶುರುವಾಗಲಿದೆ. BLO ಗಳು ನಿಮ್ಮ ಮನೆ ಬಳಿ ಬಂದು ದಾಖಲೆಗಳನ್ನು ಕೇಳಿದಾಗ ಎಲ್ಲ ಸರಿಯಾದ ಮಾಹಿತಿಯನ್ನು ನೀಡಿ.

1 thought on “Special Intensive Revision (SIR) of Electoral Rolls Explained | Voter List Update Process in Kannada – ಮತದಾರರ ಪಟ್ಟಿ ನವೀಕರಣ ಸಂಪೂರ್ಣ ಮಾಹಿತಿ”

Leave a Comment