
ನಮಸ್ಕಾರ ಸ್ನೇಹಿತರೆ ಎಲ್ಲರೂ ಹೇಗಿದ್ದೀರಾ ಕಮೆಂಟ್ ಮಾಡಿ.
ಇಂದಿನ ವಿಷಯ ಬಂದ್ ಬಿಟ್ಟು “IBPS ನಲ್ಲಿ ಬ್ಯಾಂಕ್ ಕ್ಲರ್ಕ್ ಹುದ್ದೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಪ್ರಾರಂಭವಾಗಿದೆ” ಈ ಹುದ್ದೆಯ ಬಗ್ಗೆ ತಿಳಿಸಲಿದ್ದೇನೆ. ಸೋ ಯಾರಾದರೂ ನಿಮ್ಮ ಮನೆಯಲ್ಲಿ ಅಥವಾ ಮನೆಯ ಅಕ್ಕ-ಪಕ್ಕದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ಇದ್ದರೆ ಅವರಿಗೆ ಈ ವಿಷಯವನ್ನು ತಿಳಿಸಿ.
IBPS CSA Recruitment 2026 Notification ಬಿಡುಗಡೆ: ಬ್ಯಾಂಕ್ ಕ್ಲರ್ಕ್ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಪ್ರಾರಂಭ | With “Namma Kannada News“
ಹೌದು ಸ್ನೇಹಿತರೆ, ಹಣಕಾಸು ವಿಷಯದಲ್ಲಿ ಸ್ವಲ್ಪ ಜ್ಞಾನವಿರುವವರು ಈ ಹುದ್ದೆಗಳಿಗೆ ಅರ್ಜಿಯನ್ನು ಹಾಕಬಹುದು. ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಗಿಟ್ಟಿಸಿಕೊಳ್ಳುವವರಿಗೆ ಇದೊಂದು ದೊಡ್ಡ ಸುದ್ದಿ ಅಂತ ಹೇಳಬಹುದು. ಇತ್ತೀಚಿನ ದಿನಗಳಲ್ಲಿ ಭಾರತ ದೇಶದಲ್ಲಿ ನಿರುದ್ಯೋಗ ಸಮಸ್ಯೆಗಳು ಹೆಚ್ಚುತ್ತಿದೆ ಇಂತಹ Requirement Notification ಬರೋದರಿಂದ ನಿರುದ್ಯೋಗ ಸಮಸ್ಯೆಯೂ ಸಹ ಕಡಿಮೆಯಾಗುತ್ತದೆ.
ಈಗ ವಿಷಯಕ್ಕೆ ಬರೋಣ, ಸುರಕ್ಷಿತ ಭವಿಷ್ಯ, ಉತ್ತಮ ವೇತನ ಶ್ರೇಣಿ ಹಾಗು ಗೌರವಾನ್ವಿತ ಜೀವನ ಶೈಲಿಯನ್ನು ಒದಗಿಸುವ ಪ್ರಮುಖ ಕ್ಷೇತ್ರಗಳಲ್ಲಿ ಈ ಬ್ಯಾಂಕಿಂಗ್ ಕ್ಷೇತ್ರವು ಸಹ ಒಂದಾಗಿದೆ. ನೀವೇನಾದರೂ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿ ಸರ್ಕಾರಿ ವಲಯದಲ್ಲಿ ಉತ್ತಮ ಉದ್ಯೋಗಗಳನ್ನು ಹುಡುಕುತ್ತಿದ್ದರೆ ಇಲ್ಲಿದೆ ನಿಮಗೆ ಸುವರ್ಣ ಅವಕಾಶ.
ಭಾರತೀಯ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ(IBPS – Institute of Banking Personnel Selection) ತನ್ನ ಬಹುನಿರೀಕ್ಷಿತ IBPS CSA Recruitment 2026 (CRP CSA-XVI) ಅಧಿಕೃತ ನೇಮಕಾತಿಯ ಅಧಿಸೂಚನೆಯನ್ನು ಬಿಡುಗಡೆ ಅಧಿಕೃತವಾಗಿ ಬಿಡುಗಡೆ ಮಾಡಿದೆ. ನಮ್ಮ ಇಡೀ ಭಾರತ ದೇಶದಲ್ಲಿ ಇರುವ ಪಬ್ಲಿಕ್ ಬ್ಯಾಂಕ್ ಗಳು ಅಂದರೆ ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ (Public Sector Banks) ಕಸ್ಟಮರ್ ಸರ್ವಿಸ್ ಅಸೋಸಿಯೇಟರ್ (Customer Service Associate – CSA / Clerk) ಹುದ್ದೆಗಳು ಖಾಲಿ ಇವೆ, ಈ ಹುದ್ದೆಗಳನ್ನು ತುಂಬಲು IBPS ಸಂಸ್ಥೆಯು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸಲು ಆಹ್ವಾನಿಸಲಾಗಿದೆ.
ಸೋ ಇದರಿಂದಾಗಿ ಅರ್ಹ ಅಭ್ಯರ್ಥಿಗಳು ಮತ್ತು ಆಸಕ್ತಿ ಇರುವವರು ಇದಕ್ಕೆ ಅಪ್ಲೈ ಮಾಡಿ. ಅಪ್ಲೈ ಮಾಡುವುದು ಹೇಗೆ ಎಂದು ಕೆಳಗಡೆ ವಿವರಿಸಲಾಗಿದೆ ನೋಡಿ.
ಈ ಲೇಖನದಲ್ಲಿ IBPS CSA ನೇಮಕಾತಿಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ, ವಯೋಮಿತಿ, ವಯೋಮಿತಿ ಸಡಿಲಿಕೆ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಸಿಲಬಸ್ ವಿವರ, ಪ್ರಮುಖ ದಿನಾಂಕಗಳು ಮತ್ತು ಅರ್ಜಿ ಸಲ್ಲಿಸುವ ಹಂತ-ಹಂತದ ಮಾರ್ಗದರ್ಶನವನ್ನು ಸಂಪೂರ್ಣ ಕನ್ನಡದಲ್ಲಿ ನೀಡಲಾಗಿದೆ. ಕೊನೆಯವರೆಗೂ ಆಸಕ್ತಿಯಿಂದ ಓದಿ!…..
Tech News Kannada: ₹1,800ಗೆ iPhone, ಪ್ಲಾಸ್ಟಿಕ್ ನೋಟುಗಳು & Vivo 200MP Camera! 5 Big Updates
ಹುದ್ದೆಯ ವಿವರ ಮತ್ತು ಸಂಸ್ಥೆಯ ಪರಿಚಯ.
IBPS ಸಂಸ್ಥೆಯು ಪ್ರತಿ ವರ್ಷ ದೇಶದ ವಿವಿಧ ಬ್ಯಾಂಕುಗಳಿಗೆ ಅಗತ್ಯವಿರುವ ಸಿಬ್ಬಂದಿಗಳನ್ನು ಆಯ್ಕೆ ಮಾಡಿಕೊಳ್ಳಲು ಪಾರದರ್ಶಕವಾಗಿ ಒಂದು ಪರೀಕ್ಷೆಯನ್ನು ನಡೆಸುತ್ತದೆ. ಈ ಬಾರಿ ಭಾರತದ ಬ್ಯಾಂಕುಗಳಲ್ಲಿ ಕಸ್ಟಮರ್ ಸರ್ವಿಸ್ ಅಸೋಸಿಯೇಟ್ ಹುದ್ದೆಗಳು ಖಾಲಿ ಇರುವುದರಿಂದ, ಈ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿಯ ಪ್ರಕ್ರಿಯೆಯನ್ನು ಆರಂಭಿಸಿದೆ.
ಮೊದಲು ಈ ಹುದ್ದೆಗಳನ್ನು ಕ್ಲರ್ಕ್(Clerk ) ಎಂದು ಕರೆಯುತ್ತಿದ್ದರು ಈಗ ಅದೇ ಪದಕ್ಕೆ ಸಮನಾಗಿ ಈ ಹುದ್ದೆಗೆ ಕಸ್ಟಮರ್ ಸರ್ವಿಸ್ ಅಸೋಸಿಯೇಟ್ ಎಂದು ಕರೆಯುತ್ತಿದ್ದಾರೆ. ಈ ಕಸ್ಟಮರ್ ಸರ್ವಿಸ್ ಅಸೋಸಿಯೇಟ್ ನ ಕೆಲಸ ಏನೆಂದರೆ “ಬ್ಯಾಂಕುಗಳಿಗೆ ಆಗಮಿಸುವ ಗ್ರಾಹಕರಿಗೆ ಸೂಕ್ತ ಸೇವೆ ಒದಗಿಸುವುದು, ಖಾತೆ ನಿರ್ವಹಣೆ, ಹಣಕಾಸಿನ ವ್ಯವಹಾರಗಳ ನೋಂದಣಿ ಮತ್ತು ಇತರ ದೈನಂದಿನ ಕಾರ್ಯಗಳನ್ನು ನಿರ್ವಹಿಸುವುದು. ಮುಖ್ಯ ಕೆಲಸ (Main Job) ಆಗಿದೆ.
ಯಾವ ಯಾವ ಬ್ಯಾಂಕ್ ನಲ್ಲಿ ಈ ಹುದ್ದೆಗಳು ಇವೆ ಎಂದು ನೋಡುವುದಾದರೆ, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಆಫ್ ಇಂಡಿಯಾ. ಇಂಡಿಯನ್ ಬ್ಯಾಂಕ್ ಸೇರಿ ಅಂತ ಹಲವು ಬ್ಯಾಂಕ್ ಗಳಲ್ಲಿ ಈ ಹುದ್ದೆಗಳನ್ನು ವಿಸ್ತರಿಸಲಾಗಿದೆ. ಇನ್ನು ಕರ್ನಾಟಕದ ವ್ಯಾಪ್ತಿಯಲ್ಲಿ ಬರುವ ಬ್ಯಾಂಕ್ ಶಾಖೆಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ಹುದ್ದೆಗಳನ್ನು ವಿಸ್ತರಿಸಲಾಗಿದೆ ಎಂಬ ಮಾಹಿತಿ ಇದೆ.
ಶೈಕ್ಷಣಿಕ ಅರ್ಹತೆಗಳು (Educational Qualification)
ಹೌದು ಗುರುವೇ, ಈಗ ಯಾವುದೇ ಒಂದು Government Jobs ಗೆ apply ಮಾಡಬೇಕೆಂದರೆ ಅವರು ಮೊದಲು ನಿಮ್ಮ ಶೈಕ್ಷಣಿಕ ಅರ್ಹತೆಯನ್ನು ಪರೀಕ್ಷಿಸುತ್ತಾರೆ. So ಈ ಹುದ್ದೆಗಳಿಗೆ ಅರ್ಜಿ ಹಾಕಲು ಸಹ ಶೈಕ್ಷಣೆಯ ಅರ್ಹತೆಯ ನಿಯಮವಿದೆ. ಅದೇನು ಅಂಥ ನೋಡುವುದಾದರೆ,
- ಪದವಿ ಶಿಕ್ಷಣ: ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ (BA, B.Com, B.Sc, BBA, BCA, BE ಇತ್ಯಾದಿ) ಪದವಿ (Degree) pass ಆಗಿರಬೇಕು.
- ಅಂಕಗಳ ನಿರೀಕ್ಷೆ: ಪದವಿಯಲ್ಲಿ ಯಾವುದೇ ಕನಿಷ್ಠ ಅಂಕಗಳ ಶೇಕಡಾವಾರು ನಿಗದಿಪಡಿಸಿಲ್ಲ. ಉತ್ತೀರ್ಣರಾಗಿದ್ದರೆ ಸಾಕು, ನೀವು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತೀರಿ.
- ಕಂಪ್ಯೂಟರ್ ಜ್ಞಾನ: ಅಭ್ಯರ್ಥಿಗಳು ಕಂಪ್ಯೂಟರ್ ಕಾರ್ಯಾಚರಣೆಯ ಮೂಲಭೂತ ಜ್ಞಾನವನ್ನು ಹೊಂದಿರಬೇಕು. ಕಂಪ್ಯೂಟರ್ ಸಾಕ್ಷರತೆಯ ಪ್ರಮಾಣಪತ್ರ (Certificate/Diploma) ಇರಬೇಕು ಅಥವಾ ಶಾಲಾ/ಕಾಲೇಜು ಹಂತದಲ್ಲಿ ಕಂಪ್ಯೂಟರ್ ವಿಷಯವನ್ನು ಒಂದು ವಿಷಯವಾಗಿ ಅಭ್ಯಾಸ ಮಾಡಿರಬೇಕು.
- ಸ್ಥಾನಿಕ ಭಾಷಾ ಜ್ಞಾನ: ನೀವು ಯಾವ ರಾಜ್ಯದಿಂದ ಅರ್ಜಿ ಸಲ್ಲಿಸುತ್ತೀರೋ (ಉದಾಹರಣೆಗೆ ಕರ್ನಾಟಕ), ಆ ರಾಜ್ಯದ ಅಧಿಕೃತ ಭಾಷೆಯಾದ ‘ಕನ್ನಡ’ವನ್ನು ಓದಲು, ಬರೆಯಲು, ಮಾತನಾಡಲು ಮತ್ತು ಅರ್ಥೈಸಿಕೊಳ್ಳಲು ಸಂಪೂರ್ಣವಾಗಿ ತಿಳಿದಿರಬೇಕು.
ಈ ಮೇಲಿನ ನಿಯಮಗಳಿಗೆ ನೀನು ಅರ್ಹರಾಗಿದ್ದಾರೆ ನಿಮಗೆ ಈ job ಗೆ apply ಮಾಡುವ ಅವಕಾಶ ಇರುತ್ತದೆ. ನಂತರ ವಯೋಮಿತಿಯನ್ನು ನೋಡುವುದಾದರೆ.
ವಯೋಮಿತಿ ಮತ್ತು ವಯೋಮಿತಿ ಸಡಿಲಿಕೆ (Age Limit & Relaxation)
ಹೌದು ಈ ಕೆಲಸಕ್ಕೆ ಸೇರಲು ನಿಮಗೆ ಕನಿಷ್ಠ ಮತ್ತು ಗರಿಷ್ಠ ಎಂದು ಎರಡಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಕನಿಷ್ಠ ವಯಸ್ಸು 20 ಮತ್ತು ಗರಿಷ್ಠ ವಯಸ್ಸಿಗೆ ಬಂದ್ರೆ 28 ಮೀರಿರಬಾರದು ಎಂದು ತಿಳಿಸಿದ್ದಾರೆ.
ಸರ್ಕಾರಿ ನಿಯಮಗಳ ಪ್ರಕಾರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಹಾಗೂ ವಿಶೇಷ ಚೇತನ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯ ಕೆಳಗಿನಂತೆ ಸಡಿಲಿಕೆ ಮಾಡಲಾಗಿದೆ.
- SC / ST ಅಭ್ಯರ್ಥಿಗಳಿಗೆ: 5 ವರ್ಷಗಳ ವಯೋಮಿತಿ ಸಡಿಲಿಕೆ (ಗರಿಷ್ಠ 33 ವರ್ಷ).
- OBC (Non-Creamy Layer) ಅಭ್ಯರ್ಥಿಗಳಿಗೆ: 3 ವರ್ಷಗಳ ವಯೋಮಿತಿ ಸಡಿಲಿಕೆ (ಗರಿಷ್ಠ 31 ವರ್ಷ).
- PwBD (ವಿಶೇಷ ಚೇತನ) ಅಭ್ಯರ್ಥಿಗಳಿಗೆ: 10 ವರ್ಷಗಳ ವಯೋಮಿತಿ ಸಡಿಲಿಕೆ.
- ಮಾಜಿ ಸೈನಿಕರು (Ex-Servicemen): ಸೇವಾ ಅವಧಿಗೆ ಅನುಗುಣವಾಗಿ ನಿಯಮಾನುಸಾರ ಸಡಿಲಿಕೆ ಲಭ್ಯವಿರುತ್ತದೆ.
ಈ ಮೇಲಿನ ರೀತಿಯಾಗಿ ವಯೋಮಿತಿಯನ್ನು ಸಡಿಲಿಕೆ ಮಾಡಲಾಗಿದೆ.
Quick Glance: IBPS CSA Recruitment 2026 ಪ್ರಮುಖ ಮುಖ್ಯಾಂಶಗಳು
- ನೇಮಕಾತಿ ಸಂಸ್ಥೆ: IBPS (Institute of Banking Personnel Selection)
- ಹುದ್ದೆಯ ಹೆಸರು: Customer Service Associate (CSA) / Clerk
- ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 01 ಆಗಸ್ಟ್ 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21 ಆಗಸ್ಟ್ 2026
- ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ (Online Mode Only)
- ಪೂರ್ವಭಾವಿ ಪರೀಕ್ಷೆ (Prelims Exam): ಅಕ್ಟೋಬರ್ 2026
- ಅಧಿಕೃತ ವೆಬ್‌ಸೈಟ್: www.ibps.in
ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ವಿಧಾನ (Selection Process)
IBPS ಕಸ್ಟಮರ್ ಸರ್ವಿಸ್ ಅಸೋಸಿಯೇಟ್ ಹುದ್ದೆಯ ಆಯ್ಕೆ ಪ್ರಕ್ರಿಯೆಯು ಎರಡು ಮುಖ್ಯ ಹಂತಗಳನ್ನು ಒಳಗೊಂಡಿರುತ್ತದೆ. ಈ ಹುದ್ದೆಗೆ ಯಾವುದೇ ರೀತಿಯ ನೇರ ಸಂದರ್ಶನ (Personal Interview) ಇರುವುದಿಲ್ಲ. ಇದರಿಂದಾಗಿ ಪರೀಕ್ಷೆಯಲ್ಲಿ ಪ್ರತಿಭೆ ತೋರಿಸುವ ಪ್ರತಿಯೊಬ್ಬ ಅಭ್ಯರ್ಥಿಗೂ ಸಮಾನ ಅವಕಾಶ ದೊರೆಯುತ್ತದೆ.
1. ಪೂರ್ವಭಾವಿ ಪರೀಕ್ಷೆ (Preliminary Examination):
ಇದು ಮೊದಲ ಹಂತದ ಪರೀಕ್ಷೆಯಾಗಿದ್ದು, ಅಭ್ಯರ್ಥಿಗಳ ಮೂಲಭೂತ ಜ್ಞಾನವನ್ನು ಇಲ್ಲಿ ಪರೀಕ್ಷಿಸಲಾಗುತ್ತದೆ. ಆದರೆ ಇದನ್ನು ಆನ್ಲೈನ್ ಮೂಲಕವೇ ಪರಿಕ್ಷಿಸಲಾಗುತ್ತದೆ. ಈ ಪರೀಕ್ಷೆಯು ಒಟ್ಟು 100 ಅಂಕಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ಆಗಿದೆ. ಇದಕ್ಕೆ ಸುಮಾರು 60 ನಿಮಿಷಗಳ ಕಾಲವಕಾಶ(ಸುಮಾರು 1 ಗಂಟೆ) ಇದೆ.
- English Language: 30 ಪ್ರಶ್ನೆಗಳು – 30 ಅಂಕಗಳು (20 ನಿಮಿಷ)
- Numerical Ability (ಗಣಿತ): 35 ಪ್ರಶ್ನೆಗಳು – 35 ಅಂಕಗಳು (20 ನಿಮಿಷ)
- Reasoning Ability (ತಾರ್ಕಿಕ ಜ್ಞಾನ): 35 ಪ್ರಶ್ನೆಗಳು – 35 ಅಂಕಗಳು (20 ನಿಮಿಷ)
2. ಮುಖ್ಯ ಪರೀಕ್ಷೆ (Main Examination):
ಮೊದಲ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಈ ಮುಖ್ಯ ಪರೀಕ್ಷೆಗೆ ಕರೆಯಲಾಗುತ್ತದೆ. ನಂತರ ಈ ಮುಖ್ಯ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೇಲೆ ಅಂತಿಮವಾದ ಮೆರಿಟ್ ಲಿಸ್ಟ್ ಸಿದ್ಧ ಪಡಿಸಲಾಗುತ್ತದೆ. ಈ ಮುಖ್ಯ ಪರೀಕ್ಷೆಯೂ ಸುಮಾರು 200 ಅಂಕಗಳಿಗೆ ಇರುತ್ತದೆ. ಮತ್ತು ಸುಮಾರು 160 ನಿಮಿಷಗಳ ಕಾಲವಕಾಶ ಇರುತ್ತದೆ.
| ವಿಷಯ / ಪರೀಕ್ಷಾ ವಿಭಾಗ | ಪ್ರಶ್ನೆಗಳ ಸಂಖ್ಯೆ | ಗರಿಷ್ಠ ಅಂಕಗಳು | ಸಮಯ |
|---|---|---|---|
| General / Financial Awareness | 50 | 50 | 35 ನಿಮಿಷಗಳು |
| General English | 40 | 40 | 35 ನಿಮಿಷಗಳು |
| Reasoning Ability & Computer Aptitude | 50 | 60 | 45 ನಿಮಿಷಗಳು |
| Quantitative Aptitude (ಗಣಿತ) | 50 | 50 | 45 ನಿಮಿಷಗಳು |
| ಒಟ್ಟು (Total) | 190 | 200 | 160 ನಿಮಿಷಗಳು |
ಸೂಚನೆ: ಎರಡೂ ಪರೀಕ್ಷೆಗಳಲ್ಲಿ ತಪ್ಪು ಉತ್ತರಗಳಿಗೆ ಋಣಾತ್ಮಕ ಮೌಲ್ಯಮಾಪನ (Negative Marking) ಇರುತ್ತದೆ. ಪ್ರತಿ ತಪ್ಪು ಉತ್ತರಕ್ಕೆ 0.25 (¼) ಅಂಕಗಳನ್ನು ಕಳೆಯಲಾಗುತ್ತದೆ.
ಪ್ರಮುಖ ದಿನಾಂಕಗಳ ಪಟ್ಟಿ (Important Dates)
ಪ್ರಮುಖ ದಿನಾಂಕಗಳನ್ನು ಕೆಳಗೆ ನೀಡಲಾಗಿದೆ:
- ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ: 01 ಆಗಸ್ಟ್ 2026
- ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ಕೊನೆಯ ದಿನಾಂಕ: 21 ಆಗಸ್ಟ್ 2026
- ಪೂರ್ವ ತರಬೇತಿ ಪ್ರವೇಶ ಪತ್ರ (PET Admit Card): ಸೆಪ್ಟೆಂಬರ್ 2026
- ಪೂರ್ವಭಾವಿ ಪರೀಕ್ಷೆ ಹಾಲ್ ಟಿಕೆಟ್ ಬಿಡುಗಡೆ: ಸೆಪ್ಟೆಂಬರ್/ಅಕ್ಟೋಬರ್ 2026
- ಪೂರ್ವಭಾವಿ ಪರೀಕ್ಷೆ ನಡೆಯುವ ದಿನಾಂಕ: ಅಕ್ಟೋಬರ್ 2026
- Prelims ಪರೀಕ್ಷಾ ಫಲಿತಾಂಶ: ನವೆಂಬರ್ 2026
- ಮುಖ್ಯ ಪರೀಕ್ಷೆ ನಡೆಯುವ ದಿನಾಂಕ: ಡಿಸೆಂಬರ್ 2026
- ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ (Provisional Allotment): ಮಾರ್ಚ್ 2027
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು (Step-by-Step Guide)
1.ಮೊದಲು IBPS ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: www.ibps.in
2.ಮುಖಪುಟದಲ್ಲಿ ಲಭ್ಯವಿರುವ “CRP CSA-XVI Online Application Form” ಲಿಂಕ್ ಮೇಲೆ ಕ್ಲಿಕ್ ಮಾಡಿ.
3.ನಂತರ “Click here for New Registration” ಆಯ್ಕೆಯನ್ನು ಆರಿಸಿ, ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ನಮೂದಿಸಿ ನೋಂದಣಿ ಮಾಡಿಕೊಳ್ಳಿ.
4.ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ನೋಂದಣಿ ಸಂಖ್ಯೆ (Registration No) ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ.
5.ನಿಮ್ಮ ವೈಯಕ್ತಿಕ ಮಾಹಿತಿ, ಶೈಕ್ಷಣಿಕ ವಿವರಗಳು ಹಾಗೂ ವಿಳಾಸವನ್ನು ಸರಿಯಾಗಿ ಭರ್ತಿ ಮಾಡಿ.
6.ನಿಮ್ಮ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋ, ಸಹಿ, ಎಡಗೈ ಹೆಬ್ಬೆರಳ ಗುರುತು ಮತ್ತು ಸ್ವಯಂ ಘೋಷಿತ ಪ್ರತಿಯನ್ನು (Handwritten Declaration) ನಿಯಮಾವಳಿಯಂತೆ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
7.ಎಲ್ಲಾ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ, ನಿಮ್ಮ ವರ್ಗಕ್ಕೆ ತಕ್ಕಂತೆ ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ.
8.ಅಂತಿಮವಾಗಿ ಭರ್ತಿ ಮಾಡಿದ ಅರ್ಜಿ ಫಾರ್ಮ್ ಮತ್ತು ಶುಲ್ಕ ಪಾವತಿ ರಸೀದಿಯನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್‌ಔಟ್ ತೆಗೆದಿಟ್ಟುಕೊಳ್ಳಿ.
ಈ ರೀತಿಯಾಗಿ ನೀವು ಅರ್ಜಿಯನ್ನು ಸಲ್ಲಿಸಬಹುದು.
ಇದಾಗಿತ್ತು ಇಂದಿನ ಸುದ್ದಿ. ಇನ್ನು ಹೆಚ್ಚಿನ ಮಾಹಿತಿಗಾಗಿ ಮೇಲೆ telegram ಬಟನ್ ಇದೆ ಸೋ ಅದನ್ನು ಕ್ಲಿಕ್ ಮಾಡಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಜಾಯಿನ್ ಆಗಿ.
Thanks For Reading 🙏
Written By A UMESHA
ನನ್ನ ಹೆಸರು ಎ ಉಮೇಶ್. ನಾನು ತಂತ್ರಜ್ಞಾನ (Tech), ಹೊಸ ಉದ್ಯೋಗಗಳು(New Jobs) ಮತ್ತು ಸರ್ಕಾರಿ ಯೋಜನೆಗಳು (Government Schemes) ಇವುಗಳ ಮೇಲೆ ಹೆಚ್ಚಿನ ಲೇಖನಗಳನ್ನು ಬರೆದು ಜನರಿಗೆ ಉಪಯುಕ್ತ ಮಾಹಿತಿಯನ್ನು ನೀಡುತ್ತೇನೆ.
Thank you……
