Tech News Kannada: ₹1,800ಗೆ iPhone, ಪ್ಲಾಸ್ಟಿಕ್ ನೋಟುಗಳು & Vivo 200MP Camera! 5 Big Updates

1788
Tech news

ನಮಸ್ಕಾರ ಗೆಳೆಯರೇ, ಇಂದಿನ ವಿಷಯದಲ್ಲಿ ನಾನು ನಿಮಗೆ ತಿಳಿಸುವುದು ಏನೆಂದರೆ tech ಕುರಿತಾದ ವಿಷಯಗಳು. ಇದರಲ್ಲಿ ಯಾವ ಯಾವ ವಿಷಯಗಳು ಇದಾವೆ ಅಂಥ ನೋಡುವುದಾದರೆ,

1.ತಿಂಗಳಿಗೆ ಬಾಡಿಗೆ ಕಟ್ಟಿ Apple phone ಗಳಲನ್ನು ಬಳಸುವುದು.

2.ಭಾರತಕ್ಕೆ ಈಗ ಪ್ಲಾಸ್ಟಿಕ್ ನೋಟುಗಳು(ಹಣ).

3.WhatsApp web ನಲ್ಲಿ ಆದ ಬದಲಾವಣೆಗಳು.

4.Vivo X500 Ultra mobile.

5.Apple mobile ಗಳ ಬಗ್ಗೆ

ಇವುಗಳನ್ನು ನೀವು ಇಂದಿನ ವಿಷಯದಲ್ಲಿ ತಿಳಿದುಕೊಳ್ಳಬಹುದು. ಬನ್ನಿ ಸ್ಟಾರ್ಟ್ ಮಾಡೋಣ

ನಮ್ಮ ಇಡೀ ಪ್ರಪಂಚದಲ್ಲಿ ತಂತ್ರಜ್ಞಾನ ತುಂಬಾ ಬೆಳೆದಿದೆ. ಅದರಲ್ಲೂ ಮೊಬೈಲ್ ಗಳಲ್ಲಿ ತುಂಬಾ ಬೆಳೆದಿದೆ. ಒಂದೆಡೆ ಸ್ಮಾರ್ಟ್ ಫೋನ್ ಕಂಪನಿಗಳು ಮೊಬೈಲ್ಗಳಲ್ಲಿ ತುಂಬಾ ದೊಡ್ಡ display ಮತ್ತು ತುಂಬಾ ಹೆಚ್ಚು ಹೊತ್ತು ಬಳಕೆಗೆ ಬರುವ ಬ್ಯಾಟರಿ ಗಳನ್ನು mobile ನಲ್ಲಿ ಹಾಕುವುದರ ಕಡೆಗೆ ಗಮನಕೊಟ್ಟರೆ. ಮತ್ತೊಂದೆಡೆ ಭಾರತ ಸರ್ಕಾರ ಈಗ ಇರುವ ನೋಟುಗಳು ಅಂದರೆ ಹಣ ಪೇಪರ್ನಲ್ಲಿ ಇದೆ. ಆದರೆ ಅದನ್ನು ಪ್ಲಾಸ್ಟಿಕ್ ಗೆ ಬದಲಾಯಿಸಲು ನಿರ್ಧಾರ ಮಾಡುತ್ತಿದೆ.

1. ತಿಂಗಳಿಗೆ ಬಾಡಿಗೆ ಕಟ್ಟಿ ಆಪಲ್ (Apple) ಡಿವೈಸ್ ಬಳಸಿ!

ಈಗ ಯಾರಾದರೂ ಫಂಕ್ಷನ್ ಅಥವಾ ಯಾವುದೇ ಒಂದು ಸಮಾರಂಭ ಇರುತ್ತದೆ. ಅಂತಹ ಪಂಕ್ಷನ್ ಗಳಿಗೆ ದುಬಾರಿ ಮೊಬೈಲ್ ಅಥವಾ ವಾಚ್ ಗಳನ್ನು ಖರೀದಿಸಿ ಬಳಸಲು ಸಾಧ್ಯವಾಗುವುದಿಲ್ಲ. ಸೊ ಅದಕ್ಕಾಗಿ ಆಪಲ್ ಕಂಪನಿ ಇದೀಗ ತನ್ನ ದುಬರಿ ವಸ್ತುಗಳಾದ iPhone, Makbuk ಮತ್ತು ಆಪಲ್ ವಾಚ್ ಗಳನ್ನು ಬಾಡಿಗೆಗೆ ನೀಡುತ್ತಿದೆ.

ಕೆಲವೊಬ್ಬರಿಗೆ ದುಬಾರಿ ವಸ್ತುಗಳನ್ನು ಖರೀದಿಸಲು ಆಗುವುದಿಲ್ಲ ಆದರೆ ಅವುಗಳನ್ನು ಬಾಡಿಗೆ ಗೆ ತಗೊಳ್ಳಿಕ್ಕೆ ಆಗುತ್ತದೆ ಎಂದು ಆಪಲ್ ಸಂಸ್ಥೆಯು ಈ ನಿರ್ಧಾರಕ್ಕೆ ಬಂದಿದೆ. Apple ತನ್ನ ಪ್ರೀಮಿಯಂ ಸಾಧನಗಳನ್ನು ನೇರವಾಗಿ ಗ್ರಾಹಕರಿಗೆ ಬಾಡಿಗೆ ನೀಡುವ ಹೊಸ ಯೋಜನೆಯನ್ನು ಅಮೆರಿಕದಲ್ಲಿ ಶುರು ಮಾಡಿದೆ. ಇದು ಇಂಡಿಯಾ ಗೆ ಬರಬಹುದು ಎಂಬ ಮಾಹಿತಿಯು ಲಭ್ಯವಾಗಿದೆ.

ಈ ಯೋಜನೆಯ ಪ್ರಕಾರ, ನೀವು ಯಾವುದೋ ಒಂದು ಫಂಕ್ಷನ್ ಗೋಸ್ಕರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೊಸ ಮೊಬೈಲನ್ನು ಖರೀದಿಸುವ ಅಗತ್ಯವಿಲ್ಲ. ಬದಲಾಗಿ ಪ್ರತಿ ತಿಂಗಳು ಸುಮಾರು ₹1,800 ಕೊಟ್ಟರೆ ಸಾಕು ನಿಮಗೆ ಐಫೋನ್ ಸಿಗುತ್ತದೆ. ಮತ್ತು ನಿಮಗೆ ಸಿಗುವ ಐಫೋನ್ ಹಳೆಯ ದಲ್ಲ ಬದಲಾಗಿ ಹೊಸದೇ ಸಿಗುತ್ತದೆ.

ಇನ್ನು ಕೇವಲ ಐಫೋನ್ ಮಾತ್ರವಲ್ಲ, ಆಪಲ್ ಸಂಸ್ಥೆಯ ಇನ್ನಿತರ Product ಗಳಾದ Apple watch, Makbuk ಅಥವಾ ಐಪ್ಯಾಡ್ ಗಳನ್ನು ಸಹ ನೀವು ಬಾಡಿಗೆಗೆ ತೆಗೆದುಕಳ್ಳಬಹುದು. ಇನ್ನು ಇವುಗಳ ಬಾಡಿಗೆಗೆ ಬೆಲೆಗಳನ್ನು ನೋಡುವುದಾದರೆ, Apple watch ಇದಕ್ಕೆ ತಿಂಗಳಿಗೆ ಬಾಡಿಗೆ ಬಂದು ಬಿಟ್ಟು ಸುಮಾರು₹1,200 ಆಗುತ್ತದೆ. ನಂತರ ಮ್ಯಾಕ್ ಬುಕ್ ಅಥವಾ ಐ ಪ್ಯಾಡ್ ಇವುಗಳ ಬಾಡಿಗೆ ಬೆಲೆ ತಿಂಗಳಿಗೆ ಸುಮಾರು ₹2,000 ದಿಂದ ₹3,000 ಹೊರಗೆ ಬೆಲೆಯನ್ನು ನಿಗದಿಪಡಿಸಲಾಗಿದೆ.

ಆದರೆ ಆಪಲ್ ಸಂಸ್ಥೆ ಒಂದು ಶರತ್ತನ್ನು ಇಟ್ಟಿದೆ(Condition) ಈ ಪ್ರಾಡಕ್ಟ್ ಗಳನ್ನು ಕೇವಲ ಒಂದು ತಿಂಗಳಿಗೆ ತಗೊಳ್ಳುವ ಹಾಗಿಲ್ಲ. ಬದಲಿಗೆ 12 ರಿಂದ 24 ತಿಂಗಳವರೆಗೆ ಬಾಡಿಗೆಗೆ ಒಪ್ಪಂದ ಮಾಡಿಕೊಳ್ಳಬೇಕು.

ಕನಿಷ್ಠ ಈ ಒಪ್ಪಂದದ ಅವಧಿಯು ಮುಗಿದ ನಂತರ ಬಾಕಿ ಉಳಿದ ಹಣವನ್ನು ಪಾವತಿಸಿ ಆಪಲ್ ಸಂಸ್ಥೆಯ Product ಗಳನ್ನು ಶಾಶ್ವತವಾಗಿ ಕೊಂಡುಕೊಳ್ಳಬಹುದು. ಅಥವಾ ಕಂಪನಿಗೆ ನೀವೇ ತೆಗೆದುಕೊಂಡ ಪ್ರಾರಟನ್ನು ವಾಪಸ್ ಕೊಟ್ಟು ಹೊಸ ಮಾಡೆಲ್ ಗಳನ್ನೂ ಮತ್ತೆ ಬಾಡಿಗೆಗೆ ತೆಗೆದುಕೊಳ್ಳಬಹುದು.

2. Plastic Currency Notes in India: ಭಾರತದಲ್ಲಿ ₹10 ಮತ್ತು ₹20 ಪ್ಲಾಸ್ಟಿಕ್ ನೋಟುಗಳ ಪರೀಕ್ಷೆ! (RBI Polymer Notes News)

ಇದರಿಂದಾಗಿ ಭಾರತ ಸರ್ಕಾರವು ಇಂದಿನ ದಿನಗಳಲ್ಲಿ ಹೊಸದಾಗಿ ಪ್ಲಾಸ್ಟಿಕ್ ನೋಟುಗಳನ್ನು ತಯಾರು ಮಾಡಲು ನಿರ್ಧಾರ ಮಾಡಿದೆ.

ಹೌದು ನೀವೇನು ಈಗ ಮೇಲೆ ಓದಿದರೆ ಅಲ್ವಾ, ಇದು ನಿಜ. ಯಾಕಪ್ಪ ಅಂದ್ರೆ ಇಂದಿನ ದಿನಗಳಲ್ಲಿ ಮೊದಲು ಇರುವ 10,20 ನೋಟುಗಳು ಪೇಪರ್ ನಿಂದ ಮಾಡಿಲ್ಪಟ್ಟಿದವು. ಇದರಿಂದ ಏನಾಗುತ್ತಿತ್ತು ಅಂದ್ರೆ ಒಬ್ಬರಿಂದ ಇನ್ನೊಬ್ಬರ ಕೈಗೆ ಹೋಗಿ ಅವು ಮೆತ್ತಗಾಗಿ ಅರಿದು ಹೋಗುತ್ತಿದ್ದವು.

ಈ ಪ್ಲಾಸ್ಟಿಕ್ ನೋಟುಗಳು ಭಾರತದಲ್ಲಿ ಜಾರಿಗೆ ಬಂದರೆ ಏನು ಲಾಭವಾಗುತ್ತದೆ?

ಈ ಪ್ಲಾಸ್ಟಿಕ್ ನಂತಹ ನೋಟುಗಳು ಜಾರಿಗೆ ಬಂದರೆ, ಈ ಪ್ಲಾಸ್ಟಿಕ್ ನೋಟುಗಳು ಹೆಚ್ಚು ಕಾಲ ಬಾಳಿಕೆ ಬರುತ್ತವೆ. ಇವುಗಳ ಮೇಲೆ ಆಕಸ್ಮಿಕವಾಗಿ ನೀರು ಬಿದ್ದರೆ ಅಥವಾ ಕೊಳೆ ಆದರೆ ಇವೇನು ಹಾಳಾಗುವುದಿಲ್ಲ. ಮತ್ತು ಬೇಗ ಹರಿದು ಸಹ ಹೋಗುವುದಿಲ್ಲ. ಈಗಾಗಲೇ ಬ್ರಿಟನ್, ಆಸ್ಟ್ರೇಲಿಯಾ ಮತ್ತು ಕೆನಡಾದಂತಹ ದೇಶಗಳಲ್ಲಿ ಇಂತಹ ನೋಟುಗಳು ಯಶಸ್ವಿಯಾಗಿ ಚಲಾವಣೆಯಲ್ಲಿವೆ. ಇದರಿಂದಾಗಿ ಭಾರತದಲ್ಲೂ ಸಹ ಇಂತಹ ನೋಟುಗಳನ್ನು ಏಕೆ ತರಬಾರದು ಎಂದು ಆರ್ ಬಿಐ (RBI) ಮತ್ತು ಭಾರತ ಸರ್ಕಾರ ಏನ್ ನಿರ್ಧಾರವನ್ನು ಕೈಗೊಂಡಿದೆ.

ಇದನ್ನು ತರಲು ಭಾರತ ಸರ್ಕಾರದ ಮೊದಲನೇ ಹಂತವಾದ ಸುಮಾರು 1 ಬಿಲಿಯನ್ (ಅಂದ್ರೆ 100 ಕೋಟಿ) ಪ್ಲಾಸ್ಟಿಕ್ ನೋಟುಗಳನ್ನು ಪ್ರಾಯೋಗಿಕವಾಗಿ ಮಾರುಕಟ್ಟೆಗೆ ಬಿಡಲು ಯೋಜನೆ ರೂಪಿಸಿದೆ. ಇದೇನಾದರೂ ಜಾರಿಗೆ ಬಂದರೆ ಮುಂದೆ ಎಂದೆಂದಿಗೂ ಈ ನೋಟುಗಳು ಹಾರಿದು ಹೋಗದೆ ನಮ್ಮ ಹತ್ತಿರ ಹಾಗೆ ಇರುತ್ತವೆ.

3. WhatsApp Web ನಲ್ಲಿ ಈಗ ನೇರವಾಗಿ ವಾಯ್ಸ್ ಮತ್ತು ವೀಡಿಯೊ ಕಾಲ್!

ಮೊದಲೆಲ್ಲ ಆಫೀಸ್ ಕೆಲಸ ಮಾಡುವವರು ಮತ್ತು ಕಂಪ್ಯೂಟರ್ ಮುಂದೆ ಹೆಚ್ಚು ಸಮಯ ಕಳೆಯುವವರು ಪ್ರತ್ಯೇಕವಾಗಿ ವಾಟ್ಸಾಪ್ ಡೌನ್ಲೋಡ್ ಮಾಡದೆ ವೆಬ್ ನಲ್ಲಿ ಬಳಸುತ್ತಿರುತ್ತಾರೆ. ಇದುವರೆಗೆ ಲ್ಯಾಪ್‌ಟಾಪ್‌ನಲ್ಲಿ ಕಾಲ್ ಮಾಡಬೇಕೆಂದರೆ ಪ್ರತ್ಯೇಕವಾಗಿ ವಾಟ್ಸಾಪ್ ಡೆಸ್ಕ್‌ಟಾಪ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕಿತ್ತು. ಬ್ರೌಸರ್‌ನಲ್ಲಿ ಓಪನ್ ಮಾಡುವ ವೆಬ್ ವರ್ಷನ್‌ನಲ್ಲಿ ಕರೆ ಮಾಡುವ ಸೌಲಭ್ಯ ಇರಲಿಲ್ಲ.

ಇದರಿಂದಾಗಿ ಮತ್ತೆ ಮೊಬೈಲನ್ನು ಓಪನ್ ಮಾಡಿ ಅದರಲ್ಲಿ ಕರೆ ಮಾಡುವುದು ಅಗತ್ಯವಾಗಿತ್ತು.

ಆದರೆ ಈಗ ವಾಟ್ಸಪ್ ಅನ್ನುವೆ ಭಾವರತಿಯಲ್ಲಿ ನೇರವಾಗಿ ವಾಯ್ಸ್ ಆಗಿ ವಿಡಿಯೋ ಕಾಲ್ ಮಾಡುವ ಫ್ಯೂಚರ್ ಅನ್ನು ಪರಿಚಯಿಸುತ್ತಿದೆ. ಮೈಕ್ರೋಸಾಫ್ಟ್ ಟೀಮ್ಸ್ ಅಥವಾ ಗೂಗಲ್ ಮೀಟ್ ಮಾದರಿಯಲ್ಲಿಯೇ ಸರಳವಾಗಿ ಕರೆಗಳನ್ನು ಮಾಡಬಹುದು ಮತ್ತು ಕರೆ ವಿನಂತಿಗಳನ್ನು ಸ್ವೀಕರಿಸಬಹುದು. ಇದರಿಂದ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವಾಗ ಫೋನ್ ಎತ್ತಿ ಮಾತನಾಡುವ ಅಗತ್ಯವಿರುವುದಿಲ್ಲ. ಇದು ಆಫೀಸ್ ಉದ್ಯೋಗಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಸಮಯ ಉಳಿಸಲು ತುಂಬಾ ಅನುಕೂಲಕರವಾಗಲಿದೆ.

​4. Vivo X500 Ultra: ಮೂರೂ ಕ್ಯಾಮೆರಾಗಳು 200MP!

ಯಾರಾದ್ರೂ ಸ್ಮಾರ್ಟ್ ಫೋನ್ ಗಳಲ್ಲಿ ಫೋಟೋಗ್ರಾಫಿ ಮಾಡಲು ಇಷ್ಟಪಡುವವರಿಗೆ ವಿವೋ (Vivo) ಕಂಪನಿ ಮತ್ತೊಂದು ದೊಡ್ಡ ಅಚ್ಚರಿ ನೀಡಲು ತಯಾರಾಗಿದೆ. ಅದೇನಪ್ಪಾ ಅದು ಅಂತಂದ್ರೆ ವಿವೋ ಕಂಪನಿಯು ಶೀಘ್ರದಲ್ಲೇ ಮಾರುಕಟ್ಟೆಗೆ ತರಲು ಇರುವ ತನ್ನ Vivo X500 Ultra ಫೋನ್ ನ ಕ್ಯಾಮೆರಾ ಸ್ಪೆಸಿಫಿಕೇಶನ್ಗಳು ಲೀಕಾಗಿದ್ದು ಮೊಬೈಲ್ ಫೋನ್ ಕರೆದಿಸುವವರಿಗೆ ಅಚ್ಚರಿ ಮೂಡಿಸಿದೆ

ಸಾಮಾನ್ಯವಾಗಿ ನಿಮ್ಮ ಮೊಬೈಲ್ ಹಿಂದಗಡೆ ಎರಡು ಅಥವಾ ಮೂರು ಕ್ಯಾಮರಗಳಿರುತ್ತವೆ. ಅದರಲ್ಲಿ ಒಂದಕ್ಕೆ ಮಾತ್ರ ಹೆಚ್ಚು ಮೆಗಾ ಪಿಕ್ಸೆಲ್ ಸಾಮರ್ಥ್ಯವನ್ನು ಹೊಂದಿರುತ್ತದೆ. ಆದರೆ ಈ ಫೋನ್‌ನ ಹಿಂಭಾಗದಲ್ಲಿರುವ ಪ್ರೈಮರಿ ಕ್ಯಾಮೆರಾ, ಆಲ್ಟ್ರಾ-ವೈಡ್ ಕ್ಯಾಮೆರಾ ಮತ್ತು ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ — ಮೂರೂ ಕ್ಯಾಮೆರಾಗಳು ತಲಾ 200 Megapixel ಸಾಮರ್ಥ್ಯ ಹೊಂದಿರಲಿವೆ!

ಇನ್ನು ಕೇವಲ ಇಷ್ಟೇ ಅಲ್ಲದೆ, ಸೆಲ್ಫಿ ತಕ್ಕೊಳ್ಳಲು 68MP ಫ್ರಂಟ್ ಕ್ಯಾಮೆರಾ ಹಾಗೂ ಅತ್ಯಂತ ವೇಗದ ‘Snapdragon 8 Gen 6 Pro’ ಪ್ರೊಸೆಸರ್ ಬಳಸಲಾಗುತ್ತಿದೆ. ಫೋನ್‌ನಲ್ಲೇ ಡಿಎಸ್‌ಎಲ್‌ಆರ್ (DSLR) ಕ್ಯಾಮೆರಾ ಮಟ್ಟದ ಫೋಟೋಗಳನ್ನು ತೆಗೆಯಲು ಬಯಸುವವರಿಗೆ ಇದು ಅತ್ಯುತ್ತಮ ಫೋನ್ ಆಗಲಿದೆ.

ನೋಡಿದ್ರಲ್ವಾ ಈ ವಿವೋ ಮೊಬೈಲ್ ಬಗ್ಗೆ. ಯಾರಾದರೂ ಫೋಟೋ ಗ್ರಾಫಿಕ್ ಆಗಿ ಮೊಬೈಲನ್ನು ಖರೀದಿಸುತ್ತದೆ ಅವರಿಗೆ ಈ ಮೊಬೈಲ್ ಉತ್ತಮವಾಗಿದೆ.

​5. ಆಪಲ್ ಸೇಲ್ಸ್ ಕುಸಿತ ಮತ್ತು iPhone 20 ರೂಮರ್ಸ್

ಹೌದು ಇತ್ತೀಚಿನ ದಿನಗಳಲ್ಲಿ ಜಾಗತಿಕ ವರದಿಗಳ ಪ್ರಕಾರ ಕಳೆದ ನಾಲ್ಕು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಆಪಲ್ ಕಂಪನಿ ಐಫೋನ್ ಮಾರಾಟದಲ್ಲಿ ಜಾಸ್ತಿ ಹೇಳಿಕೆ ಕಂಡು ಬಂದಿದೆ. ಆಪಲ್ ಸಣ್ಣ ಫೋನುಗಳ ಬೆಲೆಯನ್ನು ಏರಿಕೆ ಮಾಡಲಿದ್ದರೂ ಸಹ, ಜಾಗತಿಕವಾಗಿ ಆರ್ಥಿಕ ಮಂದಗತಿ ಮತ್ತು ಜನರ ಕೊಳ್ಳುವ ಶಕ್ತಿ ಕಡಿಮೆ ಆಗಿರುವುದು ಈ ಮಾರಾಟದ ಪ್ರಮುಖ ಕಾರಣ ಎನ್ನಲಾಗಿದೆ.

ಇನ್ನೊಂದೆಡೆ, 2027 ರಲ್ಲಿ ಆಪಲ್ ಸಂಸ್ಥೆಯು ತನ್ನ 20ನೇ ವರ್ಷದ ಸವಿನೆನಪಿಗಾಗಿ iPhone 20 (Special Edition) ಎಂಬ ಕ್ರಾಂತಿಕಾರಿ ಫೋನ್ ಲಾಂಚ್ ಮಾಡಲಿದೆ ಎಂಬ ವದಂತಿಗಳು ಹರಿದಾಡುತ್ತಿವೆ. ಈ ಫೋನ್ ಸಂಪೂರ್ಣವಾಗಿ ‘Edges ರಹಿತ’ ಕರ್ವ್ಡ್ ಡಿಸ್ಪ್ಲೇ (Curved Display) ಹೊಂದಿರಲಿದೆಯಂತೆ. ಪ್ರಸ್ತುತ ಬಹುತೇಕ ಆಂಡ್ರಾಯ್ಡ್ ಫೋನ್ ಕಂಪನಿಗಳು ಫ್ಲಾಟ್ ಡಿಸ್ಪ್ಲೇಗೆ ಹಿಂತಿರುಗುತ್ತಿರುವಾಗ, ಆಪಲ್ ಮತ್ತೆ ಕರ್ವ್ಡ್ ಡಿಸ್ಪ್ಲೇ ತಂದರೆ, ಮಾರುಕಟ್ಟೆಯಲ್ಲಿ ಡಿಸೈನ್ ಶೈಲಿ ಸಂಪೂರ್ಣವಾಗಿ ಬದಲಾಗುವ ಸಾಧ್ಯತೆಯಿದೆ.

ಟೆಕ್ ಸುದ್ದಿಗಳ ತ್ವರಿತ ನೋಟ (Quick Summary Table)

ವಿಷಯಹೊಸ ಅಪ್‌ಡೇಟ್ಮುಖ್ಯ ಸಾರಾಂಶ (Key Info)
Apple Rentalಐಫೋನ್ ಬಾಡಿಗೆ ಯೋಜನೆತಿಂಗಳಿಗೆ ₹1,800 ಯಿಂದ ಐಫೋನ್ ಬಳಸಿ.
Plastic Notesಪ್ಲಾಸ್ಟಿಕ್ ನೋಟುಗಳು₹10, ₹20 ಪಾಲಿಮರ್ ನೋಟುಗಳ ಪರೀಕ್ಷೆ.
WhatsApp Webವೆಬ್‌ನಲ್ಲಿ ಕಾಲಿಂಗ್ಬ್ರೌಸರ್‌ನಲ್ಲೇ ನೇರ ವಾಯ್ಸ್/ವೀಡಿಯೊ ಕಾಲ್.
Vivo X500 Ultra200MP Triple Camera3 ಬ್ಯಾಕ್ 200MP ಕ್ಯಾಮೆರಾ + Snap 8 Gen 6.
iPhone 20ಕರ್ವ್ಡ್ ಡಿಸ್ಪ್ಲೇ2027ಕ್ಕೆ ಬೆಸಲ್-ಲೆಸ್ ಐಫೋನ್ ಲಾಂಚ್.

ಮೇಲ್ಗಡೆ ನೋಡಿದಿರಲ್ಲ ಇತ್ತೀಚಿನ ದಿನಗಳಲ್ಲಿ ನಡೆದ ತಂತ್ರಜ್ಞಾನದ ವಿಭಾಗದ ಮಾಹಿತಿ ಇದು. ಸೋ ನಮ್ಮ ಭಾರತಕ್ಕೆ ಈ ಪ್ಲಾಸ್ಟಿಕ್ ನೋಟುಗಳು ಬಂದರೆ ತುಂಬಾ ಹೆಲ್ಪ್ ಫುಲ್ ಆಗಲಿದೆ. ಯಾಕಪ್ಪಾ ಅಂತಂದ್ರೆ ಮುಂದಿನ ದಿನಗಳಲ್ಲಿ ಆ ನೋಟುಗಳು ಹರಿದು ಹೋಗದೆ ಏನು ಕೊಳೆಯಾಗದೆ ಸ್ವಚ್ಛವಾಗಿರುತ್ತವೆ. ಒಟ್ಟಿನಲ್ಲಿ 1 ಬಿಲಿಯನ್ (ಅಂದ್ರೆ 100 ಕೋಟಿ) ಪ್ಲಾಸ್ಟಿಕ್ ನೋಟುಗಳನ್ನು ಉತ್ಪಾದಿಸಲು ಸರ್ಕಾರವು ಕೈಗೊಂಡಿದೆ.

ಸೊ ಇಲ್ಲಿಯವರಿಗಾಗಿತ್ತು ಈ ಸುದ್ದಿ ಇನ್ನೂ ಹೆಚ್ಚಿನ ಮಾಹಿತಿಗಾಗಿ, ಮೇಲ್ಗಡೆ ನಮ್ಮ ಟೆಲಿಗ್ರಾಂ ಚಾನೆಲ್ ನ ಬಟನ್ ಇದೆ ಸೋ ನೀವು ಕ್ಲಿಕ್ ಮಾಡಿ ನಮ್ಮ ಟೆಲಿಗ್ರಾಂ ಗೆ join ಆಗಿ. ಅಲ್ಲಿ ನಿಮಗೆ ತರಹ ಹೆಚ್ಚಿನ ಮಾಹಿತಿಗಳು ಸಿಗುತ್ತವೆ.

Thanks for Reading

Leave a Comment