ಕ್ಯಾಮೆರಾದಲ್ಲಿ ರೋಬೋಟ್, 2 ದಿನ ಬರುವ ಬ್ಯಾಟರಿ! Samsung, Honor & Apple ಭವಿಷ್ಯದ ಫೋನ್‌ಗಳ Leaked Features!

1431
Mobile phones.

ನಮಸ್ಕಾರ ಗೆಳೆಯರೇ ಇಂದಿನ ವಿಷಯ ಬಂದು ಸ್ಮಾರ್ಟ್ ಫೋನ್ ಗಳ ಬಗ್ಗೆ ಇದೆ. ಈ ತಿಂಗಳಿಗೊಂದರಂತೆ ಹೊಸ ಹೊಸ Smartphone ಗಳು ಬರುತ್ತಲೇ ಇವೆ. ಇಂದು, ಮುಂಬರಲಿರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಕೆಲವು ಸ್ಮಾರ್ಟ್ ಫೋನ್ ಗಳ ಬಗ್ಗೆ ತಿಳಿದುಕೊಳ್ಳೋಣ. ಹಾಗಾಗಿ ಇಂದು Samsung, Honor ಮತ್ತು Apple ಈ ಸಂಸ್ಥೆಗಳು ಬಿಡುಗಡೆ ಮಾಡಲಿರುವ ಮೊಬೈಲ್ಗಳ ಬಗ್ಗೆ ಈ ವಿಷಯ ಇದೆ. So ಈ ಮೂರು ಸಂಸ್ಥೆಗಳು ಮುಂಬರುವ ಫ್ಲಾಗ್ ಶಿಪ್ ಮೊಬೈಲ್ಗಳಲ್ಲಿ ಹಿಂದೆಂದೂ ಕಾಣದಂತಹ ಅದ್ಭುತ ಬೇಜಾರುಗಳನ್ನು ತರಲು ಸಿದ್ಧತೆ ನಡೆಸುತ್ತಿವೆ. ಆ ಮೊಬೈಲ್ಗಳು ಯಾವುವು, ಬನ್ನಿ ನೋಡೋಣ.

ನೀವೇನಾದರೂ ಇಷ್ಟರಲ್ಲಿ ದೊಡ್ಡ ಬ್ರಾಂಡೆಡ್ ಮೊಬೈಲ್ ಅನ್ನು ಖರೀದಿಸಬೇಕು ಅಂತ ಇದ್ದರೆ. ಈ ಮೂರು ಮೊಬೈಲುಗಳಲ್ಲಿ ಯಾವುದಾದರು ಖರೀದಿಸಿ ಯಾಕಂದ್ರೆ ಈ ಮೂರು ಕಂಪನಿಗಳು ತರಲಿರುವ Next-Gen Smartphone Features ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. Samsung, Honor ಮತ್ತು Apple ಈ ಮೂರು ಸಂಸ್ಥೆಗಳು ತರಲಿರುವ ಅತ್ಯಾಕರ್ಷಕ ಸ್ಮಾರ್ಟ್ ಫೋನ್ ಗಳ ಬಗ್ಗೆ ಕುರಿತು ತಿಳಿಯಿರಿ

1. Samsung Galaxy S27 & Rollable Phone: ದೊಡ್ಡ ಬ್ಯಾಟರಿ ಮತ್ತು ರೋಲಬಲ್ ಸ್ಕ್ರೀನ್!

ಸ್ಯಾಮ್ಸಂಗ್ ಕಂಪನಿಯು ಎಲ್ಲರಿಗೂ ಗೊತ್ತಿದೆ ಇದು ಅತ್ಯಂತ ದೊಡ್ಡ ಸಂಸ್ಥೆಯಾಗಿದ್ದು, ಎಲ್ಲ ಸಂಸ್ಥೆಗಳ ಮುಂಚಿತವಾಗಿ ಇದು ಫೋಲ್ಡಬುಲ್ ಮೊಬೈಲ್ ಅಂದ್ರೆ ಮಳಚಬಹುದಾದ ಮೊಬೈಲನ್ನು ಮೊಟ್ಟಮೊದಲ ಬಾರಿಗೆ ಜಾಗತಿಕವಾಗಿ ಪರಿಚಯಿಸುತ್ತು. ಅದೇ ರೀತಿಯಾಗಿ ಈಗ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಏನಂದ್ರೆ ಸಿಲಿಕಾನ್ ಬ್ಯಾಟರಿ (silicon-carbon battery).

New Silicon-Carbon Battery Technology (Si-C Battery)

ನಾವು ಈಗ ಪ್ರಸ್ತುತ ಬಳಸುತ್ತಿರುವ ಸ್ಮಾರ್ಟ್ ಫೋನ್ ಗಳಲ್ಲಿ ಲೀಥಿಯಂ ಅಯಾನ್ (Lithium-Ion) ಬ್ಯಾಟರಿಗಳನ್ನು ಬಳಸಲಾಗುತ್ತದೆ. ಆದರೆ ಈಗ ಸಾಮ್ಸನ್ಗ್ ತನ್ನ ಮುಂಬರುವ Samsung Galaxy S27 Series ಫೋನ್‌ಗಳಲ್ಲಿ Silicon-Carbon (Si-C) Battery ತಂತ್ರಜ್ಞಾನವನ್ನು ಅಳವಡಿಸಲು ಪರೀಕ್ಷೆಗಳನ್ನು ನಡೆಸುತ್ತಿದೆ.

  • ಹೆಚ್ಚಿನ ಬ್ಯಾಟರಿ ಸಾಮರ್ಥ್ಯ (High Battery Density): ಈ ಹೊಸ Si-C ಬ್ಯಾಟರಿಯ ವಿಶೇಷತೆಯೆಂದರೆ, ಫೋನ್‌ನ ದಪ್ಪ ಅಥವಾ ಗಾತ್ರವನ್ನು ಹೆಚ್ಚಿಸಲಾರದೆ ಮತ್ತು ಹೆಚ್ಚಿನ mAh ಸಾಮರ್ಥ್ಯದ ಬ್ಯಾಟರಿಯನ್ನು ಜೋಡಿಸಬಹುದು.
  • ದೀರ್ಘಕಾಲಿಕ ಬ್ಯಾಟರಿ ಬ್ಯಾಕಪ್ (Long Battery Life): ಇದರ ಸಹಾಯದಿಂದ Galaxy S27 Ultra / Pro ಮಾದರಿಗಳಲ್ಲಿ 5,500mAh ನಿಂದ 5,700mAh ಗೂ ಹೆಚ್ಚಿನ ಬ್ಯಾಟರಿ ಬ್ಯಾಕಪ್ ಸಿಗುವ ನಿರೀಕ್ಷೆಯಿದೆ.
  • ​​ವೇಗದ ಚಾರ್ಜಿಂಗ್ ಮತ್ತು ಸುರಕ್ಷತೆ (Fast Charging & Safety): ಇದು ಅತ್ಯಂತ ವೇಗವಾಗಿ ಚಾರ್ಜ್ ಆಗುವುದಲ್ಲದೆ, ಚಾರ್ಜಿಂಗ್ ಸಮಯದಲ್ಲಿ ಫೋನ್ ಕಾಯುವ (Overheating) ಸಮಸ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.

ISRO MCF Hassan Recruitment 2026: ಹಾಸನ ಇಸ್ರೋದಲ್ಲಿ ಪರೀಕ್ಷೆ ಇಲ್ಲದೆ ಉದ್ಯೋಗ! Apply Online For 45 Posts

Samsung Rollable Phone Display Concept

ಈಗ ಸ್ಯಾಮ್ಸಂಗ್ ಮೊಟ್ಟ ಮೊದಲ ಬಾರಿಗೆ Foldable Phone ಕಂಡುಹಿಡಿದ ಸಂಸ್ಥೆ ಆಗಿದೆ. ಈಗ ಇದೇ ರೀತಿಯಾಗಿ ಸ್ಯಾಮ್ಸಂಗ್ ಸಂಸ್ಥಾಪಕರು ಈಗ ಒಂದ್ ದೊಡ್ಡ ಕೆಲಸ ಮಾಡಲು ಹೊರಟಿದ್ದಾರೆ. ಅದೇನು ಅಂದ್ರೆ ಈಗ ಒಂದು Rolleble Display mobile ನ ಕಂಡುಹಿಡಿಯಲು ಕಾರ್ಯ ಪ್ರವೃತ್ತರಾಗಿದ್ದಾರೆ. ಹಾಗಾದ್ರೆ ಈ ಮೊಬೈಲ್ ಹೇಗೆ ಕೆಲಸ ಮಾಡುತ್ತದೆ ಅಂದ್ರೆ ಎಲ್ಲಾದರೂ ಹೊರಗಡೆ ಹೋದಾಗ ಈ display ಮೊಬೈಲ್ ನ ತಗೊಂಡ್ ಹೋಗಿ. ನಂತರ ಈ ಮೊಬೈಲ್ ನ ಓಪನ್ ಮಾಡಿ ಕೆಲಸ ಮುಗಿದ ನಂತರ ಅದನ್ನು ಮಡಚಿ ಅಥವಾ ಒಂದು ರೋಲ್ ಮಾಡಿ ಜೇಬಿನಲ್ಲಿ ಇಟ್ಟುಕೊಂಡು ಬರಬಹುದು. ಈ ರೀತಿಯಾಗಿ ಕೆಲಸ ಮಾಡುತ್ತದೆ ಅದು.

(Samsung Galaxy S27, Si-C Battery Technology, Samsung Rollable Phone, Silicon Carbon Battery, Samsung Galaxy S27 Ultra.)

2. Honor Robot Phone: ಕ್ಯಾಮೆರಾದಲ್ಲಿ ರೋಬೋಟ್ ತಂತ್ರಜ್ಞಾನ!

ಆನರ್ (Honor) ಸಂಸ್ಥೆಯು ಸ್ಮಾರ್ಟ್‌ಫೋನ್ ಕ್ಯಾಮೆರಾ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಸಲು ಹೊರಟಿದೆ. ಇತ್ತೀಚೆಗಷ್ಟೇ ತನ್ನ ನೂತನ ಮತ್ತು ವಿನೂತನ Honor Robot Phone ನ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಿದೆ.

World’s First 4D Gimbal Camera Setup

​ಈ ಫೋನ್‌ನ ಅತ್ಯಂತ ಪ್ರಮುಖ ಮತ್ತು ವಿಶೇಷ ಫೀಚರ್ ಎಂದರೆ ಇದರ ಹಿಂಭಾಗದಲ್ಲಿ ನೀಡಲಾಗಿರುವ 200-Megapixel 4D Gimbal Camera.

  • ರೊಬೊಟಿಕ್ ಚಲನೆ (Robotic Camera Movement): ಈ ಕ್ಯಾಮೆರಾ ಮಾಡ್ಯೂಲ್ ಸಾಮಾನ್ಯ ಫೋನ್‌ಗಳಂತೆ ಸ್ಥಿರವಾಗಿರುವುದಿಲ್ಲ. ಇದು ರೋಬೋಟ್‌ನಂತೆ ತನ್ನಷ್ಟಕ್ಕೆ ತಾನೇ ತಿರುಗುತ್ತದೆ ಮತ್ತು ಬಳಕೆದಾರರ ಚಲನೆಯನ್ನು ಗುರುತಿಸಿ (Motion Tracking) ಫೋಕಸ್ ಮಾಡುತ್ತದ.
  • ARRI Cinema Collaboration: ಪ್ರಸಿದ್ಧ ಸಿನಿಮಾ ಕ್ಯಾಮೆರಾ ತಯಾರಕ ಸಂಸ್ಥೆಯಾದ ARRI ಜೊತೆಗೂಡಿ ಈ ಕ್ಯಾಮೆರಾ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ. ಇದರಿಂದ ವ್ಲಾಗ್‌ ಮಾಡುವವರಿಗೆ (Vlogging) ಮತ್ತು ಪ್ರೊಫೆಷನಲ್ ವೀಡಿಯೋಗ್ರಾಫರ್‌ಗಳಿಗೆ ಅತ್ಯುತ್ತಮ ಅನುಭವ ಸಿಗಲಿದೆ.

Honor Robot Phone Specifications & Features

  • Launch Date: ಈ ಫೋನ್ August 12, 2026 ರಂದು ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.
  • Processor: ಇದರಲ್ಲಿ ಶಕ್ತಿಶಾಲಿ 3nm ಪ್ರೊಸೆಸರ್ ಆದ Snapdragon 8 Elite Gen 5 Chipset ನೀಡಲಾಗಿದೆ.
  • Battery & Charging: 6,000mAh Battery ಮತ್ತು 120W Fast Charging ಬೆಂಬಲವಿದೆ.
  • Display: 1.5K ರೆಸಲ್ಯೂಶನ್ ಹೊಂದಿರುವ 6.4-inch Flat Display ಇರಲಿದೆ.
  • Camera Setup: 200MP ಗಿಂಬಲ್ ಕ್ಯಾಮೆರಾ ಜೊತೆಗೆ, 200MP Periscope Telephoto Lens ಮತ್ತು 50MP Ultrawide Camera ಸೌಲಭ್ಯವಿದೆ.

so ಗೊತ್ತಾಯಿತಲ್ಲ ಈ ಹಾನರ್ ರೋಬೋಟ್ ಮೊಬೈಲ್ ಬಗ್ಗೆ. ಇದು ನಾವು ಫೋಟೋ ತೆಗೆಯುವಾಗ ಮೊಬೈಲ್ ನಿಂದ ಕ್ಯಾಮರವು ಹೊರಗಡೆ ಬಂದು ಜಿಮ್ಬಲ್ ರೀತಿ ಕೆಲಸ ಮಾಡುತ್ತದೆ. ಅಂದ್ರೆ ನಾವು ಮೊಬೈಲನ್ನು ಶೇಕ್ ಮಾಡಿದಾಗ ಅದರ ಒಳಗಡೆ ವಿಡಿಯೋ ಯಾವುದೇ ರೀತಿಯಾಗಿ ಶೇಕ್ ಆಗುವುದಿಲ್ಲ.

Samsung Fold 8 ಲಾಂಚ್, Flipkart Sale ಆಫರ್ಸ್: ಈ ವಾರದ ಟಾಪ್ Tech News ಇಲ್ಲಿದೆ!

3. Apple iPhone 18 Pro Max: ಐಫೋನ್ ಇತಿಹಾಸದಲ್ಲೇ ಅತಿದೊಡ್ಡ ಬದಲಾವಣೆ!

Apple ಸಂಸ್ಥೆಯು ಪ್ರತಿ ವರ್ಷ ತನ್ನ ಗ್ರಾಹಕರಿಗೆ ಹೊಸ ಹೊಸ ಮೊಬೈಲ್ಗಳನ್ನು ಪರಿಚಯಿಸುತ್ತಲೇ ಇದೆ. So ಈಗ ಅದೇ ರೀತಿಯಲ್ಲೇ Apple iPhone 18 pro Max, iphone ತಗೊಳುವವರಿಗೆ ಇದೊಂದು ಉತ್ತಮ ಅವಕಾಶ ಎನ್ನಬಹುದು.

iPhone 18 Pro Max Release Date & Expected Price

Apple iPhone 18 pro Max ಯಾವಾಗ ಜಾಗತಿಕವಾಗಿ ಮಾರುಕಟ್ಟೆಗೆ ಬರುತ್ತದೆ ಅಂದ್ರೆ ಈ ವರ್ಷದ September 2026 ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದೆ ಇಂದು ತಿಳಿಸಿದ್ದಾರೆ.

Variable Aperture & Upgraded Camera

​ಐಫೋನ್ 18 ಪ್ರೋ ಮ್ಯಾಕ್ಸ್‌ನಲ್ಲಿ ಕ್ಯಾಮೆರಾ ತಂತ್ರಜ್ಞಾನ ಸಂಪೂರ್ಣವಾಗಿ ಅಪ್‌ಗ್ರೇಡ್ ಆಗಲಿದೆ.

  • Variable Aperture Lens: ಮೊದಲ ಬಾರಿಗೆ ಆಪಲ್ ತನ್ನ ಫೋನ್‌ನಲ್ಲಿ ‘ವೇರಿಯೇಬಲ್ ಅಪರ್ಚರ್’ ಅಳವಡಿಸುತ್ತಿದೆ. ಇದರಿಂದ ಬೆಳಕಿನ ಪ್ರಮಾಣಕ್ಕೆ ತಕ್ಕಂತೆ ಕ್ಯಾಮೆರಾ ಲೆನ್ಸ್ ತಾನಾಗಿಯೇ ಹೊಂದಿಕೊಳ್ಳುತ್ತದೆ. ಕತ್ತಲಲ್ಲಿ (Low Light Photography) ಅತ್ಯಂತ ಸ್ಪಷ್ಟ ಚಿತ್ರಗಳನ್ನು ತೆಗೆಯಬಹುದು.
  • 3-Layer Image Sensor: ಫೋಟೋಗಳ ನೈಜ ಬಣ್ಣ ಮತ್ತು ವಿವರಗಳನ್ನು ಸೆರೆಹಿಡಿಯಲು ಹೊಸ ಸೆನ್ಸರ್ ಮತ್ತು 24MP Front Selfie Camera ಇರಲಿದೆ.

​Powerful A20 Pro Chip & Bigger Battery

  • 2nm TSMC Processor: ಈ ಫೋನ್‌ನಲ್ಲಿ TSMC ಯ ಕ್ರಾಂತಿಕಾರಿ 2nm ಪ್ರೊಸೆಸಿಂಗ್‌ನಲ್ಲಿ ತಯಾರಾದ A20 Pro Chip ಇರಲಿದೆ. ಇದು ಅತ್ಯಂತ ವೇಗವಾಗಿದ್ದು, ಆನ್-ಡಿವೈಸ್ Apple Intelligence (AI) ಕಾರ್ಯಗಳನ್ನು ಸಲೀಸಾಗಿ ನಿರ್ವಹಿಸುತ್ತದೆ.
  • Bigger Battery Life: ಬಳಕೆದಾರರ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಲು ಆಪಲ್ ಈ ಬಾರಿ ಸುಮಾರು 5,500mAh Big Battery ನೀಡುವ ಸಾಧ್ಯತೆಯಿದ್ದು, ಫೋನ್ ಸ್ವಲ್ಪ ದಪ್ಪವಾಗಿರುವ ಲಕ್ಷಣಗಳಿವೆ.
  • Redesigned Dynamic Island: ಡಿಸ್ಪ್ಲೇ ಮುಂಭಾಗದಲ್ಲಿರುವ Dynamic Island ಗಾತ್ರವನ್ನು ಕಡಿತಗೊಳಿಸಿ ಹೆಚ್ಚು ಸ್ಕ್ರೀನ್ ಜಾಗವನ್ನು ನೀಡಲಾಗುತ್ತದೆ.

ದಳಪತಿ ವಿಜಯ ಅವರ Jana Nayagan ಸಿನಿಮಾದ Box office Collection ಎಷ್ಟು? ಸಂಪೂರ್ಣ ಮಾಹಿತಿ

Comparison Table: ಮೂರು ಫೋನ್‌ಗಳ ಪ್ರಮುಖ ವ್ಯತ್ಯಾಸಗಳು

FeatureSamsung Galaxy S27Honor Robot PhoneApple iPhone 18 Pro Max
Main HighlightSi-C Battery & Rollable Screen4D Gimbal Rotating CameraVariable Aperture & A20 Chip
ProcessorNext-Gen Snapdragon / ExynosSnapdragon 8 Elite Gen 5Apple A20 Pro (2nm)
Battery TechSilicon-Carbon Technology6,000mAh with 120W Fast ChargingUpgraded ~5,500mAh Battery
Camera FocusHigh Efficiency Sensor200MP ARRI Gimbal SetupVariable Aperture Photography
Expected LaunchEarly 2027August 12, 2026September

ಕೊನೆಯದಾಗಿ ಹೇಳುವುದಾದರೆ ಈ ಮೂರು ಮೊಬೈಲ್ ಕಂಪನಿ ಗಳಲ್ಲಿ ಯಾವುದು ಉತ್ತಮ ಅಂತ ಹೇಳಲು ಕಷ್ಟ ಆಗುತ್ತದೆ. So ಈ ಮೂರು ಕಂಪನಿಗಳಲ್ಲಿ ಯಾವುದು best ಅಂತ ಗ್ರಾಹಕರೆ ನಿರ್ಧರಿಸಬೇಕು. ಒಟ್ಟಿನಲ್ಲಿ ಹೇಳುವುದಾದರೂ ಸ್ಯಾಮ್ಸಂಗ್ ಕಂಪನಿಯು Rollable ಸ್ಕ್ರೀನ್ ಮೊಬೈಲ್, Honor ಕಂಪನಿಯು ತನ್ನ ರೋಬೋ ಕ್ಯಾಮೆರಾ ಮೊಬೈಲ್ ಮತ್ತು Apple ಸಂಸ್ಥೆಯು ತನ್ನ ಹೊಸ ಮೊಬೈಲ್ ನ ಸೆಪ್ಟೆಂಬರ್ ತಿಂಗಳಲ್ಲಿ ಲಾಂಚ್ ಮಾಡಲು ಸಿದ್ಧವಾಗಿದೆ. So ಈ ಮೂರು ಸಂಸ್ಥೆಗಳು ಮುಂಬರುವ ದಿನಗಳಲ್ಲಿ ಈ ಮೂರು ಮೊಬೈಲ್ ಗಳನ್ನು ಜಾಗತಿಕವಾಗಿ ಮಾರುಕಟ್ಟೆಗೆ ತರಲಿದ್ದಾವೆ.

so ನಿಮಗೆ ಈ ಮಾಹಿತಿ ಉಪಯುಕ್ತ ಆಗಿದೆ ಅಂಥ ಭಾವಿಸಿದ್ದೇನೆ. ಇನ್ನು ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ಮೇಲ್ಗಡೆ Trligram ಚಾನೆಲ್ button ಇದೆ click maadi ನಮ್ಮ teligram channel ಗೆ join ಆಗಿ.

Thanks for Reading

Written By A UMESHA…….

Leave a Comment