
ನಮಸ್ತೆ ಗೆಳೆಯರೇ ಎಲ್ಲರೂ ಹೇಗಿದ್ದೀರಾ? Comment ಮಾಡಿ.
ನಮಸ್ಕಾರ ಗೆಳೆಯರೇ ಇಂದು ಪ್ರಪಂಚ ಆದ್ಯಾಂತ ತಂತ್ರಜ್ಞಾನವೂ ಬೆಳೆದಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನವು ಸಾಮಾನ್ಯ ಮನುಷ್ಯ ಅಂದಾಜು ಮಾಡಲಾಗದಷ್ಟು ಬೆಳೆದಿದೆ.
ತಂತ್ರಜ್ಞಾನದ ಜಗತ್ತು ಇಂದಿನ ದಿನಗಳಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮತ್ತು ವಿಸ್ಮಯಗಳನ್ನು ಹಾಗೂ ಮನೋರಂಜನೆಗೆ ಆಸಕ್ತಿದಾಯಕ ಆಗುತ್ತಿವೆ. ಈ ಜುಲೈ ತಿಂಗಳಲ್ಲಿ ತಂತ್ರಜ್ಞಾನದ ವಲಯದಲ್ಲಿ ದೊಡ್ಡ ದೊಡ್ಡ ಬದಲಾವಣೆಗಳು ಆಗಿವೆ. ಇಂತಹ ಬದಲಾವಣೆಗಳಲ್ಲಿ ನಾನು ನಿಮಗೆ ಒಂದಿಷ್ಟು ವಿಷಯಗಳನ್ನು ತಿಳಿಸುತ್ತೇನೆ.
ಪ್ರಮುಖ ವಿಷಯಗಳು (KEY NEWS)
ಈ ವಿಷಯದಲ್ಲಿ ತಿಳಿದುಕೊಳ್ಳುವ ಪ್ರಮುಖ ವಿಷಯಗಳು👇⬇️
- OPPO Wide Fold: ಫೋಲ್ಡಬಲ್ ಸ್ಮಾರ್ಟ್ಫೋನ್
- Moto Edge 70 Max ಸ್ಮಾರ್ಟ್ ಫೋನ್
- WhatsApp Birthdays Feature
- Unitree Robot Surgeon: ವೈದ್ಯಕೀಯ ರಂಗದಲ್ಲಿ ರೋಬೋಟ್ಗಳ ಕ್ರಾಂತಿ
- RAM and Processor Price Hike: ಸ್ಮಾರ್ಟ್ಫೋನ್ಗಳ ಬೆಲೆ ಏರಿಕೆ
- Apple Watch Ultra: ಜೀವ ಉಳಿಸಿದ ಆಪಲ್ ವಾಚ್
ಈ 6 ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ.
ಇದನ್ನು ಓದಿ:- How to Open SBI Account Online: ಎಸ್ಬಿಐ ಆನ್ಲೈನ್ ಸೇವಿಂಗ್ಸ್ ಖಾತೆ ತೆರೆಯುವ ಸರಳ ವಿಧಾನ ಇಲ್ಲಿದೆ SBI Account Opening Online
Tech News: ಜಾಗತಿಕ ತಂತ್ರಜ್ಞಾನದ ಪ್ರಮುಖ ಅಪ್ಡೇಟ್ಗಳು ಮತ್ತು ವಿಚಿತ್ರ ಸುದ್ದಿಗಳು (Global Tech Updates and Mind-Blowing Facts)
ಪ್ರಮುಖ ಸ್ಮಾರ್ಟ್ಫೋನ್ ಬ್ರ್ಯಾಂಡ್ಗಳ ಭವಿಷ್ಯದ ಯೋಜನೆಗಳಿಂದ ಹಿಡಿದು, ವೈದ್ಯಕೀಯ ರಂಗದಲ್ಲಿ ರೋಬೋಟ್ಗಳ ಕ್ರಾಂತಿ ಮತ್ತು ಗೇಮಿಂಗ್ ಪ್ರಪಂಚದ ಹೊಸ ನಿಯಮಗಳವರೆಗೆ ಹಲವು ಪ್ರಮುಖ ವಿಷಯಗಳು ಸಖತ್ ಸೌಂಡ್ ಮಾಡುತ್ತಿವೆ. ಈ ವಿಷಯದಲ್ಲಿ ನಾವು ಇತ್ತೀಚಿನ ಟೆಕ್ ನ್ಯೂಸ್ ಹಾಗೂ ಜಾಗತಿಕವಾಗಿ ವೈರಲ್ ಆಗುತ್ತಿರುವ ಕೆಲವು ರೋಮಾಂಚಕ ಸುದ್ದಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವಿಸ್ತಾರವಾಗಿ ತಿಳಿದುಕೊಳ್ಳೋಣ.
1. OPPO Wide Fold: ಫೋಲ್ಡಬಲ್ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಒಪ್ಪೋ ಹೊಸ ಗೇಮ್ ಪ್ಲಾನ್ (OPPO Wide Fold: Oppo’s New Strategy in Foldable Smartphone Market)
ಹೌದು ಈಗ OPPO ಕಂಪನಿಯವರು ಮತ್ತೊಂದು foldable ಅಂದ್ರೆ ಮೊಬೈಲ್ ನ ಮಡಚುವ ರೀತಿಯ ಹೊಸ ಮೊಬೈಲ್ ನ ಲಾಂಚ್ ಮಾಡ್ತಾ ಇದ್ದಾರೆ. ಈ ಮೊದಲೇ ಸ್ಯಾಮ್ಸಂಗ್ (Samsung ) ಕಂಪನಿಯವರು ಸಹ ತಮ್ಮ ಹೊಸ ಮೊಬೈಲ್ ನ Foldable mobile ನ ಪರಿಚೈಸಲು ಸಿದ್ಧವಾಗಿದೆ. ಮತ್ತು ಇದೆ ರೀತಿಯಾಗಿ apple ಕಂಪನಿ ಸಹ ತನ್ನ ಬಹುನಿರೀಕ್ಷಿತ ಐ ಫೋನ್ ಅಲ್ಟ್ರಾ ಸರಣಿಯೊಂದಿಗೆ ತನ್ನ Foldable ಮೊಬೈಲನ್ನು ಪರಿಚಯಿಸಲು ಅದು ಸಹ ಸಿದ್ದವಾಗಿದೆ. ಇದರಿಂದಾಗಿ ಒಪ್ಪೋ ಕಂಪನಿಯವರು ನಾವು ಸಹ ಹಿಂದೆ ಉಳಿದಿಲ್ಲ ಎಂದು ತಮ್ಮ ಹೊಸ OPPO Wide Fold ಮೊಬೈಲನ್ನು ಲಾಂಚ್ ಮಾಡಲು ನಿರ್ಧರಿಸಿದ್ದಾರೆ.
ಆದರೆ ಇಲ್ಲಿ ಅತ್ಯಂತ ಕುತೂಹಲಕಾರಿ ವಿಷಯವೆಂದರೆ, ಒಪ್ಪೋ ತನ್ನ ಹೊಸ ಫೋಲ್ಡಬಲ್ ಫೋನ್ಗೆ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿ (R&D) ಕೆಲಸಗಳನ್ನು ಸಂಪೂರ್ಣವಾಗಿ ಮುಗಿಸಿಕೊಂಡಿದ್ದರೂ, ತಕ್ಷಣವೇ ಇದರ ಪ್ರೊಡಕ್ಷನ್ ಅಥವಾ ಉತ್ಪಾದನೆಯನ್ನು ಆರಂಭಿಸುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ‘ವೇಟ್ ಅಂಡ್ ವಾಚ್’ (Wait and Watch) ತಂತ್ರ. ಮಾರುಕಟ್ಟೆಯಲ್ಲಿ ಸದ್ಯ ಫ್ಲಿಪ್ ಫೋನ್ಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಂಡಿಲ್ಲ. ಆದ್ದರಿಂದ, ಮುಂಬರುವ ಸ್ಯಾಮ್ಸಂಗ್ ಮತ್ತು ಆಪಲ್ ಫೋಲ್ಡಬಲ್ ಫೋನ್ಗಳನ್ನು ಗ್ರಾಹಕರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಒಪ್ಪೋ ಸೂಕ್ಷ್ಮವಾಗಿ ಗಮನಿಸುತ್ತಿದೆ. ಒಂದು ವೇಳೆ ಆ ಫೋನ್ಗಳು ಯಶಸ್ವಿಯಾದರೆ, ಒಪ್ಪೋ ಈ ವರ್ಷದ ಅಕ್ಟೋಬರ್ ಆಸುಪಾಸಿನಲ್ಲಿ ಪ್ರೊಡಕ್ಷನ್ ಆರಂಭಿಸಿ, ಮುಂದಿನ ವರ್ಷದ ಮೊದಲಾರ್ಧದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಯೋಜಿಸಿದೆ. ಪ್ರಸ್ತುತ ಪ್ರೊಸೆಸರ್ ಮತ್ತು ರಾಮ್ (RAM) ಬೆಲೆಗಳು ಗಗನಕ್ಕೇರಿರುವುದರಿಂದ ಯಾವುದೇ ಬ್ರ್ಯಾಂಡ್ಗಳು ಅನಗತ್ಯ ರಿಸ್ಕ್ ತೆಗೆದುಕೊಳ್ಳಲು ತಯಾರಿಲ್ಲ.
2. Moto Edge 70 Max: ಗೇಮಿಂಗ್ ಪ್ರಿಯರಿಗಾಗಿ ಮೊಟೊರೊಲಾ ಸಪ್ರೈಸ್ (Moto Edge 70 Max: Motorola’s Surprise for Gaming Enthusiasts)
ಮೊಟೊರೊಲಾ ಕಂಪನಿಯು ಸಾಮಾನ್ಯವಾಗಿ ತನ್ನ ಕ್ಲಾಸಿಕ್ ಲುಕ್ ಮತ್ತು ಸ್ಟಾಕ್ ಆಂಡ್ರಾಯ್ಡ್ ಅನುಭವಕ್ಕೆ ಹೆಸರುವಾಸಿ. ಆದರೆ ಈ ಬಾರಿ ಏನಿದ್ರೂ ಆಗಿ ಅತ್ಯಂತ ಶಕ್ತಿಶಾಲಿಯಾದ ಒಂದು ಮೊಬೈಲನ್ನು ಲಾಂಚ್ ಮಾಡಲಿದೆ ಎಂದು ತಿಳಿದು ಬಂದಿದೆ. ಜುಲೈ 15 ರಂದು ಬಿಡುಗಡೆಯಾಗಲಿರುವ ಹೊಚ್ಚ ಹೊಸ ‘ಮೊಟೊ ಎಡ್ಜ್ 70 ಮ್ಯಾಕ್ಸ್’ (Moto Edge 70 Max) ಸ್ಮಾರ್ಟ್ಫೋನ್ ಅನ್ನು ಕಂಪನಿಯು ವಿಶೇಷವಾಗಿ ‘ಗೇಮಿಂಗ್ ಥೀಮ್’ ಆಧಾರದ ಮೇಲೆ ವಿನ್ಯಾಸಗೊಳಿಸಿದೆ. ಇದು ಮೊಟೊರೊಲಾ ಇತಿಹಾಸದಲ್ಲೇ ಅತ್ಯಂತ ಶಕ್ತಿಶಾಲಿ ಗೇಮಿಂಗ್ ಫೋಕಸ್ಡ್ ಫೋನ್ ಎನ್ನಲಾಗುತ್ತಿದೇ
ತಿಳಿದು ಬಂದ ಮಾಹಿತಿಯ ಪ್ರಕಾರ, ಈ ಫೋನ್ ಅತ್ಯಂತ ಶಕ್ತಿಶಾಲಿ 8 Gen 5 ಪ್ರೊಸೆಸರ್ ಹೊಂದಿರಲಿದ್ದು, ಅತ್ಯುತ್ತಮ ಗ್ರಾಫಿಕ್ಸ್ ನೀಡಲು 2K ಕ್ವಾಡ್ ಎಚ್ಡಿ ಪ್ಲಸ್ (Quad HD+) ಡಿಸ್ಪ್ಲೇಯನ್ನು ಒಳಗೊಂಡಿರಲಿದೆ. ಈ ಫೋನ್ನ ಮತ್ತೊಂದು ಪ್ರಮುಖ ವಿಷಯ ಅಂದ್ರೆ ಇದರ ಬ್ಯಾಟರಿ ಸಾಮರ್ಥ್ಯ. ಇದು ಬರೋಬ್ಬರಿ 7000 mAh ನಿಂದ 8000 mAh ನಷ್ಟು ಬೃಹತ್ ಬ್ಯಾಟರಿಯನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಇನ್ನೂ ಕ್ಯಾಮೆರಾ ಕಡೆ ನೋಡುವುದಾದರೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇರಲಿದೆ. ಇದರ ಬೆಲೆ ಸರಿಸುಮಾರು ₹45,000 ದಿಂದ ₹60,000 ರ ಆಸುಪಾಸಿನಲ್ಲಿ ಇರುವ ಸಾಧ್ಯತೆ ಇದೆ. ಜುಲೈ mid ನಲ್ಲಿ ಇದರ ಅಧಿಕೃತ ಫೀಚರ್ಗಳು ತಿಳಿಯಲಿದೆ.
3. WhatsApp Birthdays Feature: ವಾಟ್ಸಾಪ್ನಲ್ಲಿ ಬರಲಿದೆ ಸ್ನೇಹಿತರ ಬರ್ತ್ಡೇ ನೆನಪಿಸುವ ಫೀಚರ್
ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡದಿಂದ ನಮ್ಮ ಸ್ನೇಹಿತರು ಅಥವಾ ಆಪ್ತರ ಹುಟ್ಟುಹಬ್ಬವನ್ನು ಮರೆತುಬಿಡುತ್ತೇವೆ. ಇಡಿಂದಾಗಿ Whatsapp ನಲ್ಲಿ ಒಂದು ಹೊಸ ಫೀಚರ್ ಬಂದಿದೆ. ಇದು ಹೆಗೆ ಕೆಲಸ ಮಾಡುತ್ತದೆ ಎಂದರೆ ನಿಮ್ಮ contacts ನಲ್ಲಿ ಇರುವವರ ಹುಟ್ಟು ಹಬ್ಬ ಸಮೀಪ ಬಂದಾಗ, ಇದು ನಿಮಗೆ ಒಂದು notification ಕಳುಹಿಸುತ್ತದೆ. ಇದರಿಂದ ನೀವು ಮರೆತಿದ್ದರು ಇದು ನೆನಪಿಸುತ್ತೆ.
ಆದ್ರ ಈಗ ನಿಮಗೊಂದು ಪ್ರಶ್ನೆ ಬಂದಿರಬಹುದು. ನಾವು ವಾಟ್ಸಾಪ್ ಲಾಗಿನ್ ಆಗುವಾಗ ಕೇವಲ ಮೊಬೈಲ್ ನಂಬರ್ ಮತ್ತು ಓಟಿಪಿ ಮಾತ್ರ ನೀಡುತ್ತೇವೆ, ನಮ್ಮ ಡೇಟ್ ಆಫ್ ಬರ್ತ್ (DOB) ಅಲ್ಲಿ ಕೊಡೋದಿಲ್ಲ. ಹಾಗಾದರೆ ವಾಟ್ಸಾಪ್ಗೆ ಹುಟ್ಟುಹಬ್ಬ ಹೇಗೆ ಗೊತ್ತಾಗುತ್ತದೆ? UK (United Kingdom) ಮತ್ತು ಆಸ್ಟ್ರೇಲಿಯಾದಂತಹ ದೇಶಗಳಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಷೇಧ ಇರುವುದರಿಂದ ಅಲ್ಲಿನ ಬಳಕೆದಾರರು ಕಡ್ಡಾಯವಾಗಿ ಡೇಟ್ ಆಫ್ ಬರ್ತ್ ಕೊಡುತ್ತಾರೆ, ಹಾಗಾಗಿ ಅಲ್ಲಿ ಈ ಫೀಚರ್ ಸುಲಭವಾಗಿ ಕೆಲಸ ಮಾಡುತ್ತದೆ. ಭಾರತದಂತಹ ದೇಶಗಳಲ್ಲಿ ವಾಟ್ಸಾಪ್ ತನ್ನಂತೆಹೆ ಕೆಲಸ ಮಾಡುವ ಸಂಸ್ಥೆಗಳಾದ ಇನ್ಸ್ಟಾಗ್ರಾಮ್ (Instagram) ಅಥವಾ ಫೇಸ್ಬುಕ್ (Facebook) ಖಾತೆಗಳಿಂದ ಡೇಟಾವನ್ನು ಕ್ರಾಸ್-ಪ್ಲಾಟ್ಫಾರ್ಮ್ ಮೂಲಕ ಪಡೆದುಕೊಂಡರೆ ಮಾತ್ರ ಇದು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಭಾರತೀಯ ಬಳಕೆದಾರರಿಗೆ ಇದು ಬರುವುದು ಅನುಮಾನ.
4. Unitree Robot Surgeon: ವೈದ್ಯಕೀಯ ರಂಗದಲ್ಲಿ ರೋಬೋಟ್ಗಳ ಕ್ರಾಂತಿ
ಹೌದು ಮುಂದಿನ ದಿನಗಳಲ್ಲಿ ನಮಗೆ ನಾವು ಆಸ್ಪತ್ರೆಗೆ ಹೋದಾಗ, ಅಲ್ಲಿ ನಮಗೆ ವೈದ್ಯರ ಬದಲು ರೋಬೋಟ್ಗಳು Surgeon ಮಾಡಿದರು ಆಶ್ಚರ್ಯ ಪಡೆಯಬೇಕಾಗಿಲ್ಲ. ಯಾಕಂದರೆ ಈಗಾಗಲೇ ಯುನಿಟ್ರೀ’ (Unitree) ಸಂಸ್ಥೆಯ ಹ್ಯೂಮನಾಯ್ಡ್ ರೋಬೋಟ್ಗಳು ಯಶಸ್ವಿಯಾಗಿ ಸರ್ಜರಿ ಮಾಡುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿವೆ. ಇತ್ತೀಚೆಗೆ ವೈದ್ಯರು ಈ ರೋಬೋಟ್ ಬಳಸಿ ಹಂದಿಯೊಂದರ ಪಿತ್ತಾಶಯವನ್ನು (Gallbladder) ಯಶಸ್ವಿಯಾಗಿ ತೆಗೆದುಹಾಕಿದ್ದಾರೆ. ಇದರಿಂದ ನಮಗೆ ಏನು ತಿಳಿಯುತ್ತದೆ ಅಂದ್ರೆ ತಂತ್ರಜ್ಞಾನವು ಅಷ್ಟು ಬೇಗ ಬೆಳೆದು ಈಗ ವೈದ್ಯಕೀಯ ರಂಗಕ್ಕೂ ಸಹ ಎಂಟ್ರಿ ಆಗಿದೆ.
ಆದ್ರೆ ಈ ರೋಬೋಟ್ ಗಳು ತಮ್ಮಸ್ಟಕ್ಕೆ ತಾವೇ ಸ್ವತಂತ್ರವಾಗಿ Surgeon ಮಾಡುವುದಿಲ್ಲ. ಬದಲಾಗಿ ಪರಿಣಿತ ವೈದ್ಯರು ಇವುಗಳ ಕೈಯನ್ನು ರಿಮೋಟ್ ಮತ್ತು ಅತ್ಯಾಧುನಿಕ ವಸ್ತುಗಳಿಂದ ನಿಯಂತ್ರಿಸುತ್ತಾರೆ. ವೈದ್ಯರು ದೂರದ ದೇಶದಲ್ಲಿದ್ದರೂ ಸಹ ಈ ರೋಬೋಟ್ಗಳ ಮೂಲಕ ಸ್ಥಳೀಯ ಆಸ್ಪತ್ರೆಯಲ್ಲಿರುವ ರೋಗಿಗೆ ನಿಖರವಾದ ಆಪರೇಷನ್ ಮಾಡಬಹುದು. ಪ್ರಸ್ತುತ ಚಾಲ್ತಿಯಲ್ಲಿರುವ ‘ಡಾವಿಂಚಿ’ (Da Vinci) ಸರ್ಜರಿ ಸಿಸ್ಟಮ್ಗಳ ವೆಚ್ಚ ಬರೋಬ್ಬರಿ 15 ರಿಂದ 30 ಕೋಟಿ ರೂಪಾಯಿಗಳಾಗಿರುತ್ತವೆ. ಆದರೆ ಈ ಹೊಸ ಹ್ಯೂಮನಾಯ್ಡ್ ರೋಬೋಟ್ಗಳು ಮಾರುಕಟ್ಟೆಗೆ ಬಂದರೆ ಕೇವಲ 3 ರಿಂದ 4 ಕೋಟಿ ರೂಪಾಯಿಗಳಲ್ಲಿ ಇಂತಹ ಅತ್ಯಾಧುನಿಕ ಸರ್ಜರಿ ಯಂತ್ರಗಳನ್ನು ಅಳವಡಿಸಿಕೊಳ್ಳಬಹುದು. ಇದು ವೈದ್ಯಕೀಯ ವೆಚ್ಚವನ್ನು ಗಣನೀಯವಾಗಿ ತಗ್ಗಿಸಲಿದೆ. ಆದ್ರೆ ಸ್ವಲ್ಪ ಇವುಗಳ ಮೇಲೆ ಭಯ ಸಹ ಇರುತ್ತದೆ.
ಇದನ್ನು ಓದಿ:-Snake Bite First Aid: ಹಾವು ಅಥವಾ ಚೇಳು ಕಚ್ಚಿದ ತಕ್ಷಣ ಮಾಡಬೇಕಾದ ಕೆಲಸಗಳು | Complete Health Guide
5. RAM and Processor Price Hike: ಸ್ಮಾರ್ಟ್ಫೋನ್ಗಳ ಬೆಲೆ ಏರಿಕೆ ಮತ್ತು ಫೀಚರ್ ಕಡಿತಕ್ಕೆ ಕಾರಣವೇನು?
ಇತ್ತೀಚಿನ ದಿನಗಳಲ್ಲಿ 20,000 ದಂತಹ ಮೊಬೈಲ್ ಗಳಲ್ಲಿ ನೀವು ನೋಡಬಹುದು. ಮೊದಲಿನ ಮೊಬೈಲ್ ಗಳಲ್ಲಿ ಬರುತ್ತಿದ್ದ ಅಮೊಲೆಡ್ (AMOLED) ಡಿಸ್ಪ್ಲೇ ಅಥವಾ ಟೆಲಿಫೋಟೋ ಕ್ಯಾಮೆರಾಗಳು ಸಿಗುತ್ತಿಲ್ಲ. ಇದಕ್ಕೆ ಮುಕ್ಯ ಕಾರಣಗಳೆಂದರೆ ಆರ್ಟಿಫಿಶಿಯಲ್ ಇಂಟೆಲಿಜೆಂಟ್ (AI) ಕಾರಣ. ಮತ್ತು ಜಾಗತಿಕವಾಗಿ ರಾಮ್ (RAM), ಸ್ಟೋರೇಜ್ ಹಾಗೂ ಪ್ರೊಸೆಸರ್ಗಳ ಬೆಲೆ ವಿಪರೀತವಾಗಿ ಹೆಚ್ಚುತ್ತಿರುವುದು.
ಮೊಬೈಲ್ ಕಂಪೆನಿಗಳಿಗೆ ರಾಮ್ (RAM) ಮತ್ತು ಪ್ರೋಸೆಸ್ ಬಹುಮುಖ್ಯವಾಗಿ ಬೇಕಾದವು. ಇವುಗಳ ಬೆಲೆ ಈಗ ತುಂಬಾನೇ ಹೆಚ್ಚುತ್ತಿದೆ. ಇವುಗಳಲ್ಲದೆ ಮೊಬೈಲ್ ನ ಯೂಸ್ ಮಾಡಲು ಆಗುವುದಿಲ್ಲ. ಇವೆಲ್ಲ ಬೆಳೆಗಳನ್ನು ಮೊಬೈಲ್ ಕಂಪನಿ ಬ್ಯಾಲೆನ್ಸ್ ಮಾಡುವುದಕ್ಕೆ, ಅದರಲ್ಲಿ ಹಾಕಬೇಕಾದ quality display ನ ಹಾಕುವ ಬದಲಿಗೆ ನಾರ್ಮಲ್ ಆದ display ಹಾಕುತ್ತದೆ. ಮತ್ತು ಒಳ್ಳೆಯ ಕ್ಯಾಮೆರಾ ಸೆನ್ಸರ್ ಗಳನ್ನು ಹಾಕುವುದಿಲ್ಲ. ಹೀಗೆ ಅವುಗಳ ಬೆಲೆಯನ್ನು ಬ್ಯಾಲೆನ್ಸ್ ಮಾಡುತ್ತಾ ಹೋದರೆ ಒಲರ್ಯ ಮೊಬೈಲ್ 20,000 ಒಳಗಡೆ ಸಿಗುವುದು ಬಹಳ ಕಷ್ಟ ಆಗುತ್ತದೆ.
Apple Watch Ultra: ಜೀವ ಉಳಿಸಿದ ಆಪಲ್ ವಾಚ್ ಅಲ್ಟ್ರಾ
ಹೌದು Apple Watch ಗಳು ಕೇವಲ ದೇಹದ ಆರೋಗ್ಯವನ್ನು ಅಳೆಯಲು ಅಥವಾ Time ನೋಡಲು ಮಾತ್ರ ಅಲ್ಲ. ಈಗ ಅದೇ ಒಂದು Apple Watch ಒಬ್ಬ ಹುಡುಗನ ಜೀವ್ ಉಳಿಸಿದೆ. ಇತ್ತೀಚೆಗೆ ಕ್ಯಲಿಫೋರ್ನಿಯಾದ ಗೋಲ್ಡನ್ ಗೇಟ್ ಪಾರ್ಕ್ ಬಳಿ ಬೈಕ್ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬನಿಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಆತ ರಸ್ತೆಯ ಡಿವೈಡರ್ ಮೇಲೆ ಬಿದ್ದಿದ್ದಾನೆ.
ಆ ಸಮಯದಲ್ಲಿ ಆತ ತನ್ನ ಕೈಗೆ Apple Watch ultra ಧರಿಸಿದ್ದನು. ಆತ ನೆಲಕ್ಕೆ ಬೀಳುವಾಗ ತನ್ನ ದೇಹದ ತೂಕವೇಲ್ಲ ಆತನ ಮಣಿಕಟ್ಟು ಮೇಲೆ ಬಿದ್ದಿದೆ. ಅಂದ್ರೆ Watch ಧರಿಸುವ ಭಾಗದಲ್ಲಿ ಬಿದ್ದಿದೆ. ಆ ಮನಿಕಟ್ಟಿನಲ್ಲಿ Apple Watch ಇದ್ದರಿಂದ ತೂಕವೆಲ್ಲ ಅದರ ಮೇಲೆ ಬಿದ್ದು ಅದು ಪುಡಿ ಪುಡಿ ಆಗಿದೆ. ಆದ್ರೆ doctor ಅದನ್ನು ಪರಿಶೀಲಿಸಿ ನೋಡಿ ಹೇಳಿದರಂತೆ. ಆ ವಾಚ್ ಇದ್ದರಿಂದ ನಿನ್ನ ಮಣಿಕಟ್ಟು ಉಳಿದಿದೆ. ಇಲ್ಲದಿದ್ದರೆ ಅದು ಮುರಿದು ಹೋಗುತ್ತಿತ್ತು ಅಂತ. ಇದರಿಂದಾಗಿ ಆಪಲ್ ವಾಚ್ನ ಬಿಲ್ಡ್ ಕ್ವಾಲಿಟಿಗೆ ಹಿಡಿದ ಕನ್ನಡಿಯಾಗಿದೆ.
ಇಂದಿನ ತಂತ್ರಜ್ಞಾನ ಯುಗದಲ್ಲಿ ದಿನಕ್ಕೊಂದು ವಿಸ್ಮಯಗಳು ನಡೆಯುತ್ತಲೇ ಇರುತ್ತವೆ. ಒಂದೆಡೆ ಒಪ್ಪೋ, ಮೊಟೊರೊಲಾ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಹೊಸ ತಂತ್ರಜ್ಞಾನ ರೂಪಿಸುತ್ತಿದ್ದರೆ, ಮತ್ತೊಂದೆಡೆ ರೋಬೋಟ್ಗಳು ಮಾನವನ ಜಾಗವನ್ನು ತುಂಬಲು ಸಜ್ಜಾಗುತ್ತಿವೆ. ಕೆಲವೊಂದೆಡೆ ತಂತ್ರಜ್ಞಾನದಿಂದ ಅಪಾಯವಿದ್ದರು ಇನ್ನೊಂದೆಡೆ ಆದೆ ತಂತ್ರಜ್ಞಾನದಿಂದ ಜೀವ ಸಹ ಉಳಿಯುತ್ತಿದೆ.
ಇನ್ನೂ ಇದೆ ತರಹ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ (Teligram) ಚಾನೆಲ್ ಗೆ ಜಾಯಿನ್ ಆಗಿ.
Thanks For Reading
Writer:- A UMESHA, Yarangaligi
ನನ್ನ ಹೆಸರು ಎ ಉಮೇಶ್. ನಾನು ತಂತ್ರಜ್ಞಾನ (Tech), ಹೊಸ ಉದ್ಯೋಗಗಳು(New Jobs) ಮತ್ತು ಸರ್ಕಾರಿ ಯೋಜನೆಗಳು (Government Schemes) ಇವುಗಳ ಮೇಲೆ ಹೆಚ್ಚಿನ ಲೇಖನಗಳನ್ನು ಬರೆದು ಜನರಿಗೆ ಉಪಯುಕ್ತ ಮಾಹಿತಿಯನ್ನು ನೀಡುತ್ತೇನೆ.
Thank you……

1 thought on “Robot Surgeons to WhatsApp New Features: ರೋಬೋಟ್ನಿಂದ ಸರ್ಜರಿ, ವಾಟ್ಸಾಪ್ ಹೊಸ ಫೀಚರ್: ನೀವು ಮಿಸ್ ಮಾಡಬಾರದ ಟಾಪ್ 5 ಶಾಕಿಂಗ್ ಟೆಕ್ ಅಪ್ಡೇಟ್ಗಳು!”