
ನಮಸ್ತೆ ಗೆಳೆಯರೇ ಎಲ್ಲರೂ ಹೇಗಿದ್ದೀರಾ? Comment ಮಾಡಿ.
ನಮಸ್ತೆ ಗೆಳೆಯರೇ, ನಾನು ಇಂದಿನ ವಿಷಯದಲ್ಲಿ ನಿಮಗೆ ಎನು ತಿಳಿಸುತ್ತಾ ಇದ್ದೀನಿ ಅಂದ್ರೆ ಇತ್ತೀಚಿನ ತಂತ್ರಜ್ಞಾನದ ಬಗ್ಗೆ.
ಹೌದು ನಾನು ನಿಮಗೆ ಇಂದು ಈ ವಿಷಯದಲ್ಲಿ ಮೊಬೈಲ್ ಖರೀದಿಸುವಾಗ 18% GST ವಿಧಿಸುತ್ತಿದ್ದರು. ಈಗ ಅದನ್ನು 5% GST ಗೆ ಕಡಿಮೆ ಮಾಡಲು ನಿರ್ಧರಿಸಿದ್ದಾರೆ. ನಂತರ iPhone 17 Pro Max mobile ಗಳನ್ನು ಅಮೆರಿಕವು ತಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 250 ವರ್ಷಗಳನ್ನು ಪೂರೈಸಿದ್ದು, ಇದರ ನೆನಪಿಗಾಗಿ ಅಲ್ಲಿನ ಸರ್ಕಾರವು iPhone 17 Pro Max mobile mobile ಗಳನ್ನು ಸರಿಸುಮಾರು 250 ವರ್ಷಗಳ ಕಾಲ ಒಂದು ದೊಡ್ಡ ಕಂಟೇನರ್ ಒಳಗಡೆ ಹಾಕಿ ಮುಂದಿನ 250 ವರ್ಷಗಳ ನಂತರ ಅದನ್ನು ಹೊರಗಡೆ ತೆಗೆಯಲು ನಿರ್ಧರಿಸಿದೆ. ಮತ್ತು ಇನ್ನು ಇತರ ತಂತ್ರಜ್ಞಾನದ ಬಗ್ಗೆ ನೀವು ಈ ಲೇಖನದಲ್ಲಿ ತಿಳಿಯಬಹುದು.
ಇತ್ತೀಚಿನ ತಂತ್ರಜ್ಞಾನದ ಸುದ್ದಿಗಳು: ಮೊಬೈಲ್ ಜಿಎಸ್ಟಿ ಕಡಿತ, 250 ವರ್ಷ ಹೂತಿಡಲು ನಿರ್ಧರಿಸಿದ iPhone 17 Pro Max ಮತ್ತು ಇತರೆ ಪ್ರಮುಖ ತಂತ್ರಜ್ಞಾನ ವಿದ್ಯಮಾನಗಳು!
ಇಂದಿನ ತಂತ್ರಜ್ಞಾನವು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಪ್ರತಿದಿನ ಒಂದಲ್ಲ ಒಂದು ಗ್ಯಾಜೆಟ್, ಹೊಸ ಹೊಸ ಆವಿಷ್ಕಾರಗಳು ಮತ್ತು ಆಸಕ್ತಿದಾಯಕ ವಿದ್ಯಮಾನಗಳು ಮಾರುಕಟ್ಟೆಗೆ ಬರುತ್ತಿವೆ.ಇತ್ತೀಚಿನ ಪ್ರಮುಖ ತಂತ್ರಜ್ಞಾನದ ಸುದ್ದಿಗಳು (Latest Tech News In Kannada) ನಿಮಗೆ ಖಂಡಿತವಾಗಿಯೂ ರೋಮಾಂಚನ ಉಂಟುಮಾಡುತ್ತವೆ. ಇಂದಿನ ಈ ಬ್ಲಾಗ್ ಲೇಖನದಲ್ಲಿ ನಾವು ಸ್ಮಾರ್ಟ್ಫೋನ್ ಬೆಲೆ ಇಳಿಕೆಯ ಪ್ರಸ್ತಾಪ, ಭವಿಷ್ಯದ ತಂತ್ರಜ್ಞಾನದ ರಕ್ಷಣೆ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮೂಲಕ ಕೋಡಿಂಗ್ ಮಾಡಿ ಹಣ ಗಳಿಸುವುದು ಸೇರಿದಂತೆ ಹಲವು ಪ್ರಮುಖ ಟೆಕ್ ಅಪ್ಡೇಟ್ಗಳನ್ನು ವಿವರವಾಗಿ ತಿಳಿಯೋಣ.
1. SmartPhones GST Cut: ಶೀಘ್ರದಲ್ಲೇ ಮೊಬೈಲ್ ಫೋನ್ಗಳ ಬೆಲೆ ಇಳಿಕೆ?
ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್ ಫೋನೆಗಳ ಬೆಲೆಯೂ ಬಡವರಿಗೆ ನಿಲುಕದ ಸ್ಥಿತಿಯಷ್ಟು ಗಗನಕ್ಕೇರಿದೆ. ಆ ಮೊಬೈಲ್ ನಲ್ಲಿ ಬಳಸುತ್ತಿರುವ RAM ಮತ್ತು ಇಂಟರ್ನಲ್ ಸ್ಟೋರೇಜ್ ನ ವೆಚ್ಚ ಹೆಚ್ಚುತ್ತಿರುವುದೆ ಇದಕ್ಕೆ ಪ್ರಮುಖ ಕಾರಣವಾಗಿದೆ. ಇದರಿಂದಾಗಿ ಭಾರತ ಸರ್ಕಾರದ ಮುಂದೆ ಒಂದು ಪ್ರಸ್ತಾಪ ಇಡಲಾಗಿದೆ.
ಭಾರತದಲ್ಲಿ ಇಂದಿಗೂ ಸುಮಾರು 35 ಕೋಟಿಗೂ ಹೆಚ್ಚು ಜನ ಸಾಧಾರಣ ಫೀಚರ್ ಮೊಬೈಲ್ ಫೋನ್ (Feature Phones) ಗಳು ಬಳಸುತ್ತಿದ್ದಾರೆ. ಕಾರಣ ಇಷ್ಟೇ ಸ್ಮಾರ್ಟ ಫೋನ್ ಗಳ ಬೆಲೆ ಹೆಚ್ಚಾಗುತ್ತಿದೆ. ಸ್ವಲ್ಪ ಮಟ್ಟಿಗಾದರೂ ಮೊಬೈಲ್ ಬೆಲೆ ಕಡಿಮೆ ಮಾಡಿದರೆ ಜನರು ಖರೀದಿಸುತ್ತಾರೆ ಅಂತ ಹಲವು ಮೊಬೈಲ್ ಕಂಪನಿಗಳು ಸರ್ಕಾರಕ್ಕೆ ಮನವಿ ಮಾಡಿವೆ.
ಈಗ ಭಾರತದಲ್ಲಿ 20,000 ಬೆಳೆಗಳ ಕೆಳಗಡೆ ಇರುವ ಮೊಬೈಲ್ ಗೆ ಇದ್ದ GST 18% ಈಗ ಅದನ್ನು 5% ಗೆ ಇಳಿಸಲು ಸರಕಾರಕ್ಕೆ ಆರ್ಥಿಕ ಸಂಸ್ಥೆಗಳು ಮನವಿ ಮಾಡಿಕೊಂಡಿವೆ.
- ವಿಯೆಟ್ನಾಂ
- ಸಿಂಗಾಪುರ
- ಥೈಲ್ಯಾಂಡ್
- ಮಲೇಷ್ಯಾ
ಈ ದೇಶಗಳು ಈಗಾಗಲೇ ಇಂತಹ ತೆರಿಗೆ ಕಡಿತದ ಕ್ರಮಗಳನ್ನು ಕೈಗೊಂಡಿವೆ. ಭಾರತ ಸರ್ಕಾರವೂ ಇದಕ್ಕೆ ಒಪ್ಪಿಗೆ ನೀಡಿದರೆ, ಮುಂಬರುವ ದಿನಗಳಲ್ಲಿ ಸಾಮಾನ್ಯ ಜನರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಉತ್ತಮ ಸ್ಮಾರ್ಟ್ಫೋನ್ಗಳು ಸಿಗಲಿವೆ.
2. iQOO 16 Global Launch: ಐಕೂ 16 ಭಾರತದಲ್ಲಿ 1 ಲಕ್ಷ ದಾಟಲಿದೆಯಾ?
ಐಕೂ (IQoo) ಈಗ ಒಂದು ಹೊಸ ಫ್ಲ್ಯಾಗ್ಶಿಪ್ ಸ್ಮಾರ್ಟ ಫೋನ್ ಆದ ತನ್ನ iQOO 16 ಸ್ಮಾರ್ಟ ಅನ್ನು ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆಗೆ ಪರಿಚಯಿಸುವ ಮಟ್ಟದಲ್ಲಿ ಚರ್ಚೆಗಳನ್ನು ಮಾಡುತ್ತಿವೆ. ಈ ಮೊಬೈಲ್ ಫೋನ್ ನೋಡುವುದಕ್ಕೆ ಮೇಲಿನಿಂದ ತುಂಬಾ ಸ್ಮಾರ್ಟ್ ಆಗಿ ಕಾಣಿಸುತ್ತದೆ. ಅದೇ ರೀತಿ ಒಳಗಡೆ ನಾವು ಅಂದುಕೊಳ್ಳುವ ಕ್ಕಿಂತ ಜಾಸ್ತಿನೇ ಫೀಚರ್ ಗಳು ಇವೆ. ಇವು attyuttama ಕಾರ್ಯಕ್ಷಮತೆ (performance) ಮತ್ತು ಗೇಮಿಂಗ್ ಗೆ ಹೆಸರಾಗಿರುವ ಈ iQoo ಮೊಬೈಲ್ ಗಳು ವ್ಯಾಲ್ಯೂ for ಮನಿ (Value for Money) ವರ್ಗಕ್ಕೆ ಸೇರುತ್ತದೆ. ಆದ್ರೆ ಈಗ ಈ iQoo 16 ಮೊಬೈಲ್ ನ ಬೆಲೆ ಆಕಾಶಕ್ಕೆ ಮುಟ್ಟಿದೆ. ಇದರ ಬೆಲೆ ಸುಮಾರು 1 ಲಕ್ಷ ದಾಟಬಹುದು ಎಂದು ಹೇಳುತ್ತಿದ್ದಾರೆ.
ಹಲವಾರು ವರದಿಗಳ ಪ್ರಕಾರ ನೋಡುವುದಾದರೆ ಇದರಲ್ಲಿ
- ಅತ್ಯಾಧುನಿಕ ‘886 Pro’ ಫ್ಲ್ಯಾಗ್ಶಿಪ್ ಪ್ರೊಸೆಸರ್
- ಹೊಸ ತಂತ್ರಜ್ಞಾನದ LPDDR6 RAM
- UFS 5.0 ಸ್ಟೋರೇಜ್
ಇವುಗಳನ್ನು ಬಳಸಲಾಗುತ್ತದೆ. ಇವುಗಳ ಬೆಲೆಯೂ ತುಂಬಾ ಜಾಸ್ತಿ ಇದೆ. ಹಾಗಾಗಿ ಆ ಸ್ಮಾರ್ಟ ಫೋನ್ ನಲ್ಲಿ ಬಳಸಲಾಗುತ್ತದೆ, ಇದರಿಂದಾಗಿ ಆ ಸ್ಮಾರ್ಟ ಬೆಲೆ ತುಂಬಾ ಜಾಸ್ತಿ ಇದೆ.
ಈ ಬಿಡಿಭಾಗಗಳ ಉತ್ಪಾದನಾ ವೆಚ್ಚವೂ ಜಾಸ್ತಿ ಇರುವುದರಿಂದ, ಭಾರತಕ್ಕೆ ಬರುವಾಗ ಸರಿಸುಮಾರು 1 ಲಕ್ಷಕ್ಕೂ ಹೆಚ್ಚಿನ ಮಟ್ಟದ ಬೆಲೆಯಲ್ಲಿ ಬರಬಹುದು ಎಂದು ಹೇಳಲಾಗುತ್ತಿದೆ. ಆದರೂ ಭಾರತದಲ್ಲಿ ಇದನ್ನು ಕೈ ಬಿಡದೆ ಸೀಮಿತ ಬೇಳೆಗ ತರಬೇಕೆಂದು ಸರ್ಕಾರವು ಯೋಜಿಸುತ್ತಿದೆ.
3. Google Maps New Feature: ಗೂಗಲ್ ಮ್ಯಾಪ್ಸ್ನಿಂದಲೇ ಫುಡ್ ಆರ್ಡರ್ ಮಾಡಿ!
ನಾವು ಹೊಸ ಜಾಗಗಳಿಗೆ ಹೋದಾಗ ನಮಗೆ ಗೂಗಲ್ ಮ್ಯಾಪ್ಸ್ (Google Map Navigation) ಎಷ್ಟು ಸಹಾಯ ಮಾಡುತ್ತದೆ ಎಂದು ನಮಗೆ ಗೊತ್ತೇ ಇದೆ. ಈಗ ಅದೇ ರೀತಿಯಾಗಿ ಗೂಗಲ್ ಈಗ ಅದರಲ್ಲಿ ಇನ್ನೊಂದು ಹೊಸ ಫೀಚರ್ ಅನ್ನು ಸೇರಿಸಿದೆ. ಅದೇನಪ್ಪಾ ಅಂತ ಅಂದ್ರೆ Ask Maps ಎಂಬ artificial intelligence ಅನ್ನು ಅದರೊಳಗದೆಗೆ ಸೇರಿಸಿದೆ.
ಈ ಫೀಚರ್ ನಲ್ಲಿ ನಮಗೆ ಏನು ಲಾಭ ಅಂತ ಹೇಳುವುದಾದರೆ: ನೀವು ಪ್ರಯಾಣಿಸುವ ದಾರಿಯಲ್ಲಿ ನಿಮಗೆ ಹಸಿವಾದರೆ ಆಗ ಈ App ಕೆಲಸಕ್ಕೆ ಬರುತ್ತದೆ.
ಈಗ ನಿಮಗೆ ಹಸಿವಾಯ್ತು ಆಗ ನೀವು ಇದರಲ್ಲಿ ಹತ್ತಿರದ ಯಾವುದಾದರೂ ರೆಸ್ಟೋರೆಂಟ್ ಅನ್ನು ಹುಡುಕಿ 30 ನಿಮಿಷದ ಮುಂಚಿತವಾಗಿಯೇ ನಿಮ್ಮ ಊಟವನ್ನು ನೀವು ಆರ್ಡರ್ ಮಾಡಬಹುದು. ನಂತರ ನೀವು ಅಲ್ಲಿಗೆ ಹೋದರೆ ನಿಮ್ಮ ಊಟ Ready ಯಾಗಿ ಪ್ಯಾಕ್ ಆಗಿ ಇರುತ್ತದೆ ನೀವು ಅದನ್ನು ತೆಗೆದುಕೊಂಡು ನಿಮ್ಮ ಪ್ರಯಾಣವನ್ನು ಮುಂದುವರೆಸಬಹುದು. ಇದು ಈ ಫೀಚರ್ ನ ಕೆಲಸ ಆಗಿದೆ.
4. iPhone 17 Pro Max Buried: 250 ವರ್ಷಗಳ ಕಾಲ ಭೂಮಿಯಲ್ಲಿ ಹೋತಿಡಲು ನಿರ್ಧರಿಸಿದ ಐಫೋನ್!
ಹೌದು ಇದು ಇಂದಿನ Breaking News ಆಗಿದೆ. ಮತ್ತು ಕೇಳಲು ಕುತೂಹಲವೂ ಮೂಡಿಸುತ್ತದೆ. ಅಮೆರಿಕ (USA) ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 250 ವರ್ಷ ಪೂರೈಸಿದ ಸವಿನೆನಪಿಗಾಗಿ ಅಲ್ಲಿನ ಸರ್ಕಾರವು ಮತ್ತು ತಜ್ಞರು ಈ ಸೇರಿ ಒಂದು ವಿಶಿಷ್ಟವಾದ ಪ್ರಯೋಗ ಮಾಡಿದ್ದಾರೆ. ಅಲ್ಲಿನ iPhone 17 Pro Max mobile ಫೋನ್ಗಳು ಮತ್ತು ಒಂದು ನೈಜ ವಜ್ರ (Diamond), ಲಿಖಿತ ಸಂವಿಧಾನದ ಪ್ರತಿ ಮತ್ತು ಕೆಲವು ಪ್ರಮುಖ ಪುಸ್ತಕಗಳನ್ನು ಒಂದು ವಿಶೇಷವಾದ ಏರ್-ಟೈಟ್ ಕಂಟೇನರ್ ಅಥವಾ ಟೈಮ್ ಕ್ಯಾಪ್ಸುಲ್ (Time Capsule) ಒಳಗೆ ಇಟ್ಟಿದ್ದಾರೆ.
ಈ ಕಂಟೇನರ್ ಗಳನ್ನು ಭೂಮಿಯ ಆಳದಲ್ಲಿ ಹೋತಿದಲಾಗಿದ್ದು, ಇಂದಿನಿಂದ ಸುಮಾರು 250 ವರ್ಷಗಳ ನಂತರ ಅಂದ್ರೆ 2276 ರ ವರ್ಷದಲ್ಲಿ ಹೊರತೆಗೆಯಲು ನಿರ್ಧರಿಸಲಾಗಿದೆ. ಇದರಿಂದ ಆಗಿನ ಪೀಳಿಗೆಗೆ ತಮ್ಮ ಹಿಂದಿನ ಪೂರ್ವಜರು ಇಂತಹ ಮೊಬೈಲ್ ಫೋನ್ ಗಳುನ್ನೂ ಬಳಸುತ್ತಿದ್ದರು ಮತ್ತು ಅವರ ಸಂವಿಧಾನ ಹೇಗಿತ್ತು , ಅವರ ತಂತ್ರಜ್ಞಾನ ಹೇಗಿತ್ತು ಎಂಬುದನ್ನು ತಿಳಿಸಲು ಈ ರೀತಿಯಾಗಿ ಮಾಡಿದ್ದಾರೆ. ಈಗಿನಿಂದ ಇದನ್ನು ರಕ್ಷಿಸಿಕೊಂಡು ಹೋಗಲು ಒಂದು ವಿಶೇಷವಾದ ತಂಡವನ್ನು ನಿಯೋಜಿಸಲಾಗಿದೆ.
5. Smart Watch and AirPods Research: ನಿಮ್ಮ ಮಾನಸಿಕ ಒತ್ತಡಕ್ಕೆ ಕಾರಣ ಹುಡುಕುವ ತಂತ್ರಜ್ಞಾನ
ಈಗ ಪ್ರಸ್ತುತ ಮಾರುಕಟ್ಟೆಯಲ್ಲಿ ನಿಮಗೆ ಲಭ್ಯವಿರುವ ಸ್ಮಾರ್ಟ್ ವಾಚ್ ಗಳು ನಿಮ್ಮ ರಕ್ತದ ಒತ್ತಡ (Blood pressure), ಹೃದಯ ಬಡಿತ, ರಕ್ತದಲ್ಲಿ ಇರುವ ಆಮ್ಲಜನಕ ಮತ್ತು ನಿಮ್ಮ ಮಾನಸಿಕ ಒತ್ತಡವನ್ನು ಅಳೆಯಬಲ್ಲವು. ಆದ್ರೆ ಕೆನಡಾದ ಯೂನಿವರ್ಸಿಟಿ ಆಫ್ ಒಟಾವಾದ ಸಂಶೋಧಕರು ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಅವರು ಆಪಲ್ ವಾಚ್ (Apple Watch) ಮತ್ತು ಆಪಲ್ ಏರ್ಪಾಡ್ಸ್ (AirPods) ಕಾಂಬಿನೇಶನ್ ಬಳಸಿ ಹೊಸ ಸಂಶೋಧನೆ ನಡೆಸುತ್ತಿದ್ದಾರೆ.
ಈ ತಂತ್ರಜ್ಞಾನವು ಕೇವಲ ನಿಮ್ಮ ಒತ್ತಡವನ್ನು ಅಳೆಯುವುದಷ್ಟೇ ಅಲ್ಲದೆ, ಆ ಒತ್ತಡ ನಿಮಗೆ ಯಾವ ಕಾರಣಕ್ಕಾಗಿ ಉಂಟಾಗುತ್ತಿದೆ ಎಂಬುದನ್ನೂ ಪತ್ತೆಹಚ್ಚುತ್ತದೆ. ಉದಾಹರಣೆಗೆ, ನೀವು ಯಾರದೋ ಜೊತೆ ಜೋರಾಗಿ ಜಗಳವಾಡುತ್ತಿದ್ದರೆ, ಏರ್ಪಾಡ್ಸ್ನಲ್ಲಿರುವ ಮೈಕ್ರೋಫೋನ್ ನಿಮ್ಮ ಧ್ವನಿಯ ಏರಿಳಿತವನ್ನು ಗ್ರಹಿಸುತ್ತದೆ. ಅದೇ ಸಮಯದಲ್ಲಿ ಆಪಲ್ ವಾಚ್ ನಿಮ್ಮ ಹೃದಯಬಡಿತದ ಹೆಚ್ಚಳವನ್ನು ದಾಖಲಿಸುತ್ತದೆ. ಇವೆರಡನ್ನೂ ವಿಶ್ಲೇಷಿಸಿ, “ನೀವು ಜಗಳವಾಡುತ್ತಿರುವುದರಿಂದ ಒತ್ತಡ ಹೆಚ್ಚಾಗುತ್ತಿದೆ, ದಯವಿಟ್ಟು ಶಾಂತರಾಗಿರಿ” ಎಂದು ನಿಮಗೆ ಎಚ್ಚರಿಕೆ ಮತ್ತು ಸಲಹೆಗಳನ್ನು ನೀಡುತ್ತದೆ. ಆದರೆ ನೀವು ಮನಸ್ಸಿನಲ್ಲೇ ಸದ್ದಿಲ್ಲದೆ ಕೊರಗುತ್ತಿದ್ದರೆ ಇದನ್ನು ಪತ್ತೆಹಚ್ಚುವುದು ಸದ್ಯಕ್ಕೆ ಸಾಧ್ಯವಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.
7. Vivo and iQOO Mobiles Theft: 1.5 ಕೋಟಿ ಮೌಲ್ಯದ ಮೊಬೈಲ್ ಕಳ್ಳತನ ಮತ್ತು ಪತ್ತೆ!
ನೋಡಿ ಒಂದು ದೊಡ್ಡ ದುರಂತ ನಡೆದಿದೆ. ಅಮೆಜಾನ್ ವೇರ್ಹೌಸ್ಗೆ (Amazon Warehouse) ತಲುಪಬೇಕಾಗಿದ್ದ ಒಂದು ದೊಡ್ಡ ಕಂಟೇನರ್ ಟ್ರಕ್ ಅನ್ನು ದಾರಿ ಮಧ್ಯದಲ್ಲೇ ದರೋಡೆಕೋರರು ಅಪಹರಿಸಿದ್ದರು. ಆ ಟ್ರಕ್ನಲ್ಲಿ ಬರೋಬ್ಬರಿ 1.5 ಕೋಟಿ ರೂಪಾಯಿ ಮೌಲ್ಯದ Vivo ಮತ್ತು iQOO ಕಂಪನಿಯ ಬ್ರಾಂಡ್ ನ್ಯೂ ಸ್ಮಾರ್ಟ್ಫೋನ್ಗಳಿದ್ದವು.
ಈಘಟನೆ ನಡೆದ ಕೂಡಲೇ ಪೊಲೀಸರು ತನಿಖೆಯನ್ನು ಸ್ಟಾರ್ಟ್ ಮಾಡ್ತಾರೆ. ಅವುಗಳಲ್ಲಿ ಇರುವ GPS ಮೂಲಕ ಕಂಟೇನರ್ ಲಾರಿಯನ್ನು ಪತ್ತೆ ಹಚ್ಚಿ ಆ ದರೋಡೆ ಕೊರರನ್ನು ಪತ್ತೆ ಹಚ್ಚಿದ್ದಾರೆ. ಅದೃಷ್ಟವಶಾತ್ ಅದರಲ್ಲಿ ಇರುವ ಯಾವುದೇ ಫೋನ್ ಗಳು ಮಿಸ್ ಆಗಿಲ್ಲ ಎಂಬ ವರಿದೆ ಬಂದಿದೆ. ಆ ಲಾರಿ ಮಾತು ದರೋಡೆ ಕೊರರು ಪೊಲೀಸರಿಗೆ ಉತ್ತರ ಪ್ರದೇಶದಲ್ಲಿ ಸಿಕ್ಕಿದ್ದಾರೆ ಎಂಬ ವರದಿಯು ಲಭ್ಯವಾಗಿದೆ.
ಒಟ್ಟಿನಲ್ಲಿ ಹೇಳುವುದಾದರೆ ಇಂದು ಪ್ರಪಂಚ ತಂತ್ರಜ್ಞಾನದಲ್ಲಿ ತುಂಬಾನೇ ಮುಂದುವರೆದಿದೆ ಮತ್ತು ಮುಂದುವರೆಯುತ್ತಿದೆ. ಸ್ಮಾರ್ಟ್ ಫೋನ್ ಗಳ ಮೇಲೆ GST ಕಡಿಮೆ ಮಾಡಿರುವುದು ನಿಜಕ್ಕೂ ಬಡವರಿಗೆ ಸಂತಸ ಮೂಡಿಸುವ ವಿಷಯವಾಗಿದೆ.
(ಮಾಹಿತಿ ಕೃಪೆ: ಪ್ರಸಾದ್ ಟೆಕ್ ಇನ್ ತೆಲುಗು ಯೂಟ್ಯೂಬ್ ಚಾನೆಲ್)
ಈ ಮಾಹಿತಿಯು ನಿಮಗೆ ಉಪಯುಕ್ತ ಆಗಿದೆ ಎಂದು ಭಾವಿಸಿದ್ದೇನೆ.
ಇನ್ನೂ ಇದೆ ತರಹ ಹೆಚ್ಚಿನ ಮಾಹಿತಿಗಾಗಿ ನಮ್ಮ Whatsapp group ಗೆ join ಆಗಿ.
Thanks for Reading 🙏
ಲೇಖಕರು:- A UMESHA, Yarangaligi
ನನ್ನ ಹೆಸರು ಎ ಉಮೇಶ್. ನಾನು ತಂತ್ರಜ್ಞಾನ (Tech), ಹೊಸ ಉದ್ಯೋಗಗಳು(New Jobs) ಮತ್ತು ಸರ್ಕಾರಿ ಯೋಜನೆಗಳು (Government Schemes) ಇವುಗಳ ಮೇಲೆ ಹೆಚ್ಚಿನ ಲೇಖನಗಳನ್ನು ಬರೆದು ಜನರಿಗೆ ಉಪಯುಕ್ತ ಮಾಹಿತಿಯನ್ನು ನೀಡುತ್ತೇನೆ.
Thank you……

2 thoughts on “Latest Tech News in Kannada: 250 Years Buried iPhone 17 Pro Max & SmartPhones GST Cut!ಇತ್ತೀಚಿನ ಟೆಕ್ ಸುದ್ದಿ: 250 ವರ್ಷ ಭೂಮಿಯಲ್ಲಿ ಹೂತಿಟ್ಟ iPhone 17 Pro Max ಮತ್ತು ಶೀಘ್ರದಲ್ಲೇ ಮೊಬೈಲ್ ಬೆಲೆ ಇಳಿಕೆ?”