ಪ್ರೋತ್ಸಾಹ ಧನಕ್ಕೆ ಅರ್ಜಿ ಹಾಕಲು ಏನೇನು ದಾಖಲೆಗಳು ಬೇಕು? ಮತ್ತು ಪ್ರೋತ್ಸಾಹ ಧನಕ್ಕೆ ಹೇಗೆ ಅರ್ಜಿ ಹಾಕೋದು? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ!

ಶಿಕ್ಷಣ ಎಂಬುದು ಕರ್ನಾಟದ ಎಲ್ಲ ಮಕ್ಕಳ ಅಜನ್ಮ ಸಿದ್ದ ಹಕ್ಕು.ಇದನ್ನು ಯಾರಿಂದಲೂ ಕಸಿಯಲು, ಮತ್ತು ಅವರನ್ನು ವಿದ್ಯಾ ಅಭ್ಯಾಸದಿಂದ ವಂಚಿತರಾಗಿ ಇರಲು ಬಿಡುವುದಿಲ್ಲ. ಆದ್ರೆ ಆದೆ ಮಕ್ಕ ಉನ್ನತ ಶಿಕ್ಷಣಕ್ಕಾಗಿ ಕರ್ನಾಟಕ ಸರ್ಕಾರ ವಿದ್ಯಾರ್ಥಿ ವೇತನ ಎಂಬ ಹೊಸ ಯೋಜನೆ ಯಾಂನು ಜಾರಿಗೆ ತಂದಿದೆ.
ವಿದ್ಯಾರ್ಥಿ ವೇತನ ಗಳಲ್ಲಿ ಎರಡು ಬಗೆಯ ವಿದ್ಯಾರ್ಥಿ ವೇತನವನ್ನು ನಾವು ನೋಡಬಹುದು.
1.ವಾರ್ಷಿಕ ವಿದ್ಯಾರ್ಥಿ ವೇತನ. (Scolership).
2. ಪ್ರೋತ್ಸಾಹಧನ ವಿದ್ಯಾರ್ಥಿ ವೇತನ (pryze money).
ಇವುಗಳನ್ನು ಕರ್ನಾಟಕ ಸರ್ಕಾರ ಏತಕ್ಕೆ ನಡೆಸುತ್ತದೆ?
ಆರ್ಥಿಕವಾಗಿ ಹಿಂದುಳಿದ ಮಕ್ಕಳು ಅವರಿಗೆ ತುಂಬಾ ಜ್ಞಾನ ಇದ್ದರೂ ಸಹ ಅವರು ಮುಂದೆ ಹೋದಳು ಹಣ ಇಲ್ಲವೆಂದು, ತಮ್ಮ ಮುಂದಿನ ವರ್ಷ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ ಬಿಡುತ್ತಾರೆ. ಇದರಿಂದಾಗಿ ಅವರ ವಿದ್ಯಾಭ್ಯಾಸವು ಅರ್ಧಕ್ಕೆ ಮುಗಿಯುತ್ತದೆ. ಮಾತು ತಮ್ಮಲ್ಲಿ ಓದಲು ಇಷ್ಟ. ಇದ್ದರೆ ಸಹ ನಿಮಗೆ ಓದಲು ಹಣ ಇಲ್ಲದೆ ಇರುವುದು ಇದಕ್ಕೆ ಕಾರಣ ಇದರಿಂದಾಗಿ ಪ್ರತಿಭಾವಂತ ಮಕ್ಕಳು ಮುಂದೆ ಹೋದಲು ಕಷ್ಟ ಆಗುತ್ತದೆ. ಇದನ್ನು ಗಮನಿಸಿ ಸರ್ಕಾರ ವಿದ್ಯಾರ್ಥಿ ಗಳಿಗೆ ಟ್ಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲ ಆಗಲಿ ಎಂದು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಕೊಟ್ಟು ಅವರಿಗೆ ಪ್ರೋತ್ಸಾಹಿಸುತ್ತದೆ.
ಪ್ರೋತ್ಸಾಹ ಧನ ಎಂದರೇನು? (What is pryze money)?
ಪ್ರೋತ್ಸಾಹ ಧನ ಎಂದರೆ ವಿದ್ಯಾರ್ಥಿಗಳು ಶಾಲೆಯನ್ನು ಮುಗಿಸಿ ನಂತರ ಕಾಲೇಜಿಗೆ ಸೇರಿಕೊಳ್ಳುವಾಗ ಎಸ್ ಎಸ್ ಎಲ್ ಸಿ ಎಲ್ಲಿ ಪಡೆದ ಅಂಕಗಳ ಮೇಲೆ ಪ್ರೋತ್ಸಾಹ ಧನ ಸಿಗುತ್ತದೆ. ಎಸ್ ಎಸ್ ಎಲ್ ಸಿ ಯಲ್ಲಿ ವಿದ್ಯಾರ್ಥಿಗಳು ಕನಿಷ್ಠ ಅಂದರೆ ಸಿಕ್ಸ್ಟಿ ಪರ್ಸೆಂಟೇಜ್(60%) ಅನ್ನೋ ಪಡೆದುಕೊಂಡಿದ್ದರೆ ಅವರಿಗೆ ಸರ್ಕಾರದಿಂದ ಸಾಮಾನ್ಯವಾಗಿ 6500 ರಿಂದ 7000 ಸಿಗುವ ಸಾಧ್ಯತೆ ಇರುತ್ತದೆ. ಮತ್ತು ಸೆವೆಂಟಿ ಫೈವ್ ಪರ್ಸೆಂಟೇಜ್ ಅಬೌ(75%) ಗಿಂತ ಜಾಸ್ತಿ ಬಂದ್ರೆ ಅವರಿ ಗೆ ಕರ್ನಾಟಕ ಸರ್ಕಾರದಿಂದ ಸುಮಾರು 14500 ರಿಂದ 15000 ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಕರ್ನಾಟಕ ವಿದ್ಯಾರ್ಥಿಗಳು (60%) ಜಾಸ್ತಿ ಬಂದಿದ್ದರೆ ಮಾತ್ರ ಈ ಯೋಜನೆಗೆ ಅರ್ಹರಾಗಿರುತ್ತಾರೆ. ಇಲ್ಲದಿದ್ದರೆ ಅವರು ಅವಕಾಶವನ್ನು ಕಳೆದುಕೊಳ್ಳುವುದು ಪಕ್ಕ ಮತ್ತು ಕಚಿತ…60% ಅತವಾ ಅದಕ್ಕಿಂತ ಜಾಸ್ತಿ ಬಂದಿದ್ದರೂ ಸಹ ನೀವು ಇದಕ್ಕೆ ಹರ ಹಾರಾಗಿರುತ್ತೀರಿ.
ಈ ಪ್ರೋತ್ಸಾಹ ಧನಕ್ಕೆ ಅರ್ಜಿ ಹಾಕಲು ಹೇಗೆ ಅರ್ಹರಾಗಿರಬೇಕು(Eligibility)
ನೀವು ಯಾವುದೇ ವಿದ್ಯಾರ್ಥಿ ವೇತನಕ್ಕೆ ಹಾಕಲು ಮುನ್ನ ನೀವು ಆ ಯೋಜನೆಗೆ ಅರ್ಹರಾಗಿದ್ದಾರೆ ಎಂದು ನೋಡುವುದು ಅತಿ ಅಗತ್ಯ.ಇಲ್ಲದಿದ್ದರೆ ನೀವು ಪ್ರೋತ್ಸಾಹ ಧನಕ್ಕೆ ಅರ್ಜಿ ಹಾಕಲು ಆಗುವುದಿಲ್ಲ ಆದ್ದರಿಂದ ಇವು ಮುಖ್ಯ ದಾಖಲೆಗಳು ಎನಿಸಿಕೊಂಡಿವೆ. ನೀವು ಇವುಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳಿ. ಆ ಪ್ರಮುಖ ದಾಖಲೆಗಳು ಈ ಕೆಳಗಿನಂತಿವೆ.
1. ಮೊದಲು ವಿದ್ಯಾರ್ಥಿ ಕರ್ನಾಟಕ ದ ನಿವಾಸಿಯಾಗಿರಬೇಕು.
2. ಒಂದರಿಂದ ಹತ್ತನೇ ತರಗತಿಯವರೆಗೆ ಕರ್ನಾಟಕದಲ್ಲಿ ವಿದ್ಯಾಭ್ಯಾಸ ಮುಗಿಸಬೇಕು.
3. ವಿದ್ಯಾರ್ಥಿಯು ಕಳೆದ ತರಗತಿಯಲ್ಲಿ ಶೇಕಡ 60 ಕ್ಕಿಂತ ಜಾಸ್ತಿ ಅಂಕಗಳನ್ನು ಪಡೆದಿರಬೇಕು.
4. ಮತ್ತು ಅವನ ಬಳಿ ಹಿಂದಿನ ತರಗತಿಯಲ್ಲಿ ಓದಿದ ಪುರಾವೆಗಳಿರಬೇಕು (ಉದಾಹರಣೆಗೆ ಹಾಲ್ ಟಿಕೆಟ್ ನಂತಹ ಅಥವಾ ಮಾರ್ಕ್ಸ್ ಕಾರ್ಡ್ ಅಂತಹ ಪುರಾವೆಗಳಿರಬೇಕು).
5. ಅವರ ಕೌಟಿಂಬಿಕ ಆದಾಯ: ಬಹುತೇಕ ವಿದ್ಯಾರ್ಥಿ ವೇತನಗಳು ಬಡ ಪ್ರತಿಭಾವಂತ ಮಕ್ಕಳು ಹಾಗೂ ಮಾಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಂತಾನೆ ಇದೆ. ಆದ್ದರಿಂದ ಅವರ ವಾರ್ಷಿಕ ಆದಾಯವು ನಿಗದಿತ ಮಿತಿಗಿಂತ ಕಡಿಮೆ ಇರಬೇಕು.
6. ಜಾತಿ ಮತ್ತು ವರ್ಗ: ಕೆಲವೊಂದ ದೇಶ ಜಾತಿಗಳು ಉದಾಹರಣೆಗೆ SC,ST,OBC. ಇವುಗಳಿಗ ಅಂತಾನೆ ಮೀಸಲಾತಿ ಇರುತ್ತದೆ.ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಜಾಸ್ತಿ ಇರುತ್ತದೆ.
ವಿದ್ಯಾರ್ಥಿ ವೇತನಕ್ಕೆ ಬೇಕಾಗುವ ದಾಖಲೆಗಳು (Scholarship Documents Required).ಅತ್ಯಗತ್ಯವಾಗಿ ಬೇಕಾಗುವ ಪ್ರಮುಖ ದಾಖಲೆಗಳು (Important Documents Required)ವಿದ್ಯಾರ್ಥಿಗಳು ಪ್ರೈಸ್ ಮನಿ ಗೆ ಅರ್ಜಿ ಸಲ್ಲಿಸಬೇಕಾದರೆ ಕಡ್ಡಾಯವಾಗಿ ಅವರ ಪ್ರಮುಖ ವೈಯಕ್ತಿಕ ದಾಖಲೆಗಳು ಬೇಕೇ ಬೇಕಾಗುತ್ತವೆ. ಇದರಿಂದ ಅವರು ಸುಲಭವಾಗಿ ಅರ್ಜಿ ಆಗಬಹುದು
ಅತ್ಯಗತ್ಯವಾಗಿ ಬೇಕಾಗುವ ಪ್ರಮುಖ ದಾಖಲೆಗಳು (Important Documents Required)
ವಿದ್ಯಾರ್ಥಿಗಳು ಪ್ರೈಸ್ ಮನಿ ಗೆ ಅರ್ಜಿ ಸಲ್ಲಿಸಬೇಕಾದರೆ ಕಡ್ಡಾಯವಾಗಿ ಅವರ ಪ್ರಮುಖ ವೈಯಕ್ತಿಕ ದಾಖಲೆಗಳು ಬೇಕೇ ಬೇಕಾಗುತ್ತವೆ. ಇದರಿಂದ ಅವರು ಸುಲಭವಾಗಿ ಅರ್ಜಿ ಆಗಬಹುದುಅವುಗಳು ಈ ಕೆಳಗಿನಂತಿವೆ:-
1. ವಿದ್ಯಾರ್ಥಿಯ ಆಧಾರ್ ಕಾರ್ಡ್: ಇದು ವಿದ್ಯಾರ್ಥಿಯು ಕರ್ನಾಟಕದಲ್ಲಿ ನಿವಾಸಿ ಎಂದು ಮತ್ತು ಅವರ ಡೇಟ್ ಆಫ್ ಬರ್ತ್ ಅಂಡ್ ಹೆಸರು ಇದರಲ್ಲಿ ಇರುತ್ತದೆ ಹಾಗಾಗಿ ವಿದ್ಯಾರ್ಥಿ ಆಧಾರ್ ಕಾರ್ಡ್ ಬೇಕಾಗುತ್ತದೆ.
2. ವ್ಯಾಸಂಗ ಪ್ರಮಾಣ ಪತ್ರ: ಇದು ವಿದ್ಯಾರ್ಥಿಯು ಕರ್ನಾಟಕದಲ್ಲಿ ವಾಸವಾಗಿದ್ದಾರೆ ಎಂದು ತೋರಿಸುತ್ತದೆ. ಇದು ಅಗತ್ಯವಿಲ್ಲ ಆದರೂ ನಿಮ್ಮ ಜೊತೆ ಇರಬೇಕು.
3. ವಿದ್ಯಾರ್ಥಿಯ ಫೋಟೋಸ್: ವಿದ್ಯಾರ್ಥಿಯಪಾಸ್‌ಪೋರ್ಟ್ ಅಳತೆಯ ಪೋಟೋ.ಅಗತ್ಯವಿರುವುದು.ವಿದ್ಯಾರ್ಥಿಯು ತನ್ನ ಹಳೆಯ ಶಾಲೆಯಲ್ಲಿ ಓದಿದ ಅಥವಾ ತಾನು ಓದಿದ ಶಾಲೆಯಲ್ಲಿ ಇರುವ ಪುರಾಣಗಳು ಅಂದರೆ ಮಾರ್ಕ್ಸ್ ಕಾರ್ಡ್ ಅಥವಾ ಟಿಸಿ ಇನತರ ಯಾವುದೇ ದಾಖಲೆಗಳು ಬೇಕಾಗುತ್ತವೆ.
1.ಅಂಕಪಟ್ಟಿಗಳು (Marks Cards): ವಿದ್ಯಾರ್ಥಿಯು ತನ್ನ ಹಿಂದಿನ ತರಗತಿಯಲ್ಲಿ ಪರೀಕ್ಷೆ ಬರೆದಿರುವ ಮಾಸ್ ಕಾರ್ಡ್ ಅಂದರೆ ಅಂಕ ಪಟ್ಟಿ ಬೇಕಾಗುತ್ತದೆ.
2.ಪ್ರಸ್ತುತ ಸಾಲಿನ ದಾಖಲಾತಿ ರಶೀದಿ (Fee Receipt / Admission Proof): ನೀವು ಯಾವ ಶಾಲೆಯಲ್ಲಿ ಓದುತ್ತೇವೆ ಆಶಾಲೆಯ ವ್ಯಾಸಂಗ ಪ್ರಮಾಣ ಪತ್ರ ಅಥವಾ ಫೀಸ್ ಕಟ್ಟಿರುವ ಒಂದು ರಸಿದಿ ಇದ್ದರೆ ತೆಗೆದುಕೊಂಡು ಇರಿ.
ಆರ್ಥಿಕ ಮತ್ತು ಸಾಮಾಜಿಕ ದಾಖಲೆಗಳು ಇವುಗಳ ವಿದ್ಯಾರ್ಥಿಯ ಪ್ರೈಸ್ ಮನಿಗೆ ಅರ್ಜಿ ಹಾಕಲು ಬೇಕೇ ಬೇಕಾಗುವ ಅತಿ ಮುಖ್ಯ ದಾಖಲೆಗಳಾಗಿವೆ. ಇವುಗಳ ವಿದ್ಯಾರ್ಥಿಯ ವಾರ್ಷಿಕ ಕುಟುಂಬ ಆದಾಯ ಮತ್ತು ಹಿಂದುಳಿದ ವರ್ಗಗಳು ಎಂದು ಗುರುತಿಸಲು ಇವು ಬೇಕಾಗುತ್ತದೆ.
1.ಆದಾಯ ಪ್ರಮಾಣ ಪತ್ರ (Income Certificate): ಇದು ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವನ್ನು ತಿಳಿಸುತ್ತದೆ ಹಾಗಾಗಿ ಇದು ಮುಖ್ಯವಾಗುತ್ತದೆ.
2.ಜಾತಿ ಪ್ರಮಾಣ ಪತ್ರ (Caste Certificate): ಇದು ಜಾತಿ ಮೀಸಲಾತಿಗೆ ಬೇಕಾಗುವ ಅತಿಮುಖ್ಯದ ದಾಖಲೆಯಾಗಿದೆ.
ಬ್ಯಾಂಕ್ ಖಾತೆಯ ವಿವರಗಳು (Bank Account Details)ಪ್ರೋತ್ಸಾಹ ಧನದ ಹಣವು ನೇರವಾಗಿ ವಿದ್ಯಾರ್ಥಿಯ ಖಾತೆಗೆ ಜಮೆಯಾಗುವುದರಿಂದ (DBT – Direct Benefit Transfer), ಬ್ಯಾಂಕ್ ಖಾತೆಯ ವಿವರಗಳು ನಿಖರವಾಗಿರಬೇಕು. ಆದ್ದರಿಂದ ಈ ವಿವರಗಳನ್ನು ಮಾತ್ರ ತಪ್ಪಿಸಿಕೊಳ್ಳಬೇಡಿ.
1.ಬ್ಯಾಂಕ್ ಪಾಸ್‌ಬುಕ್‌ನ ಮೊದಲ ಪುಟದ ಪ್ರತಿ (ಖಾತೆ ಸಂಖ್ಯೆ ಮತ್ತು IFSC ಕೋಡ್ ಸ್ಪಷ್ಟವಾಗಿರಬೇಕು).
2.ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ (Aadhar Seeding) ಆಗಿರುವುದು ಕಡ್ಡಾಯ. ಇಲ್ಲದಿದ್ದರೆ ಹಣ ಜಮೆಯಾಗುವುದಿಲ್ಲ.
3.ಖಾತೆಯುಚಾಲ್ತಿಯಲ್ಲಿರಬೇಕು(ActiveAccount).
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ (How to Apply Online)
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ ವೇತನಗಳಿಗೆ ಅರ್ಜಿ ಆನ್ಲೈನಲ್ಲಿ ಅದರಲ್ಲೂ ಮೊಬೈಲ್ ನಲ್ಲಿ ಹಾಕುವುದು ತುಂಬಾ ಜಾಸ್ತಿಯಾಗಿದೆ. ನೀವು ಕೂಡ ನಿಮ್ಮ ಮೊಬೈಲ್ ನಲ್ಲಿ ಆನ್ಲೈನ್ ಮೂಲಕ ಪ್ರೋತ್ಸಾಹ ಧನಕ್ಕೆ ಅರ್ಜಿ ಹಾಕಬಹುದು ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. ನಾನು ಈ ಕೆಳಗೆ ವಿವರಿಸಿ ದಂತೆ ನೀವು ಮಾಡಿದರೆ ಸಂಪೂರ್ಣವಾಗಿ ನೀವು ಕೂಡ ಪ್ರಯೋಜನನಿಗೆ ನಿಮ್ಮ ಮೊಬೈಲ್ ನಲ್ಲಿ ಅರ್ಜಿ ಹಾಕಬಹುದು.ಆದ್ರೆ ನೀವು SSP ಅಥವಾ NSP ಮೂಲಕ ಅರ್ಜಿ ಹಾಕಬಹುದು.
1.ನೊಂದಣಿ (Registration): ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಬಳಸಿ ಖಾತೆ ತೆರೆಯಿರಿ.
2ಮಾಹಿತಿ ಭರ್ತಿ (Filling Details): ನಿಮ್ಮ ವೈಯಕ್ತಿಕ, ಶೈಕ್ಷಣಿಕ ಮತ್ತು ಬ್ಯಾಂಕ್ ವಿವರಗಳನ್ನು ಜಾಗರೂಕತೆಯಿಂದ ನಮೂದಿಸಿ.
3.ದಾಖಲೆಗಳ ಅಪ್ಲೋಡ್ (Uploading Documents): ಕೇಳಲಾದ ಎಲ್ಲಾ ದಾಖಲೆಗಳನ್ನು ನಿಗದಿತ ಸೈಜ್‌ನಲ್ಲಿ (Size) ಅಪ್ಲೋಡ್ ಮಾಡಿ.
4.ಪರಿಶೀಲನೆ ಮತ್ತು ಸಲ್ಲಿಕೆ (Submit): ಅರ್ಜಿಯನ್ನು ಸಬ್ಮಿಟ್ ಮಾಡುವ ಮುನ್ನ ಮತ್ತೊಮ್ಮೆ ಓದಿ ನೋಡಿ ತಪ್ಪುಗಳಿಲ್ಲದಿದ್ದರೆ ‘Submit’ ಬಟನ್ ಒತ್ತಿ.
5.ಪ್ರಿಂಟ್ ಔಟ್: ಭರ್ತಿ ಮಾಡಿದ ಅರ್ಜಿಯ ಪ್ರಿಂಟ್ ಔಟ್ ತೆಗೆದುಕೊಂಡು ಕಾಲೇಜಿಗೆ ಸಲ್ಲಿಸಬೇಕಾಗಬಹುದು.
ನೀವು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗ ನೆನಪಿಡಬೇಕಾದ ಮುಖ್ಯ ಅಂಶಗಳು ಇಲ್ಲಿವೆನೀವು ಹಾಲಿನಲ್ಲಿ ಪ್ರೈಸ್ ಮನಿಗ್ ಅರ್ಜಿ ಹಾಕುವಾಗ ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ.
1. ನೀವು ತಮ್ಮ ಮಾಹಿತಿಯನ್ನು ನೀಡಬೇಡಿ: ಯಾಕೆಂದರೆ ತಪ್ಪು ಮಾಹಿತಿಯನ್ನು ನೀಡಿದರೆ ಅದು ರಿಜೆಕ್ಟ್ ಆಗುವ ಸಾಧ್ಯತೆ 100% ಇದೆ.ಹಾಗಾಗಿ ಹುಷಾರಾಗಿ ನಿಮ್ಮ ನಿಮ್ಮದೇ ಆದ ಸ್ವಂತ ಮಾಹಿತಿಯನ್ನು ಭರ್ತಿ ಮಾಡಿ ನೀಡಿ. ತಪ್ಪು ಮಾಹಿತಿ ನೀಡುವುದಕ್ಕೆ ಹೋಗಬೇಡಿ.
2. ಅರ್ಜಿ ಸಲ್ಲಿಸು ದಿನಾಂಕ: ಆತ್ಮೀಯ ವಿದ್ಯಾರ್ಥಿಗಳೇ ಅಥವಾ ಅವರ ಪೋಷಕರೇ ನೀವು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಮಾತ್ರ ಮರೆಯಬೇಡಿ ಇದರಿಂದ ಮುಂದಿನ ಸಲ್ಲಿಸಲು ಹೋದರೆ ಅದು ಬರುವುದಿಲ್ಲ ಹಾಗಾಗಿ ದಿನವನ್ನು ಮತ್ತು ದಿನಾಂಕವನ್ನು ನೆನಪಿನಲ್ಲಿಟ್ಟುಕೊಳ್ಳಿ.
3. ಮೊಬೈಲ್ ನಂಬರ್: ಸಾಮಾನ್ಯವಾಗಿ ನಿಮ್ಮ ಆಧಾರ್ ಕಾರ್ಡಿಗೆ ಯಾವ ಮೊಬೈಲ್ ನಂಬರ್ ಲಿಂಕ್ ಇರುತ್ತದೆ ಅದನ್ನೇ ಮೊಬೈಲ್ ನಂಬರ್ ಹಾಕಿ ಕೊಡಿ ಆಧಾರ್ ಕಾರ್ಡ್ ನಿಂದ ಆ ನಿಮ್ಮ ಮೊಬೈಲ್ ನಂಬರಿಗೆ OTP ಬರುತ್ತದೆ. ನೀವು ಬೇರೆ ಮೊಬೈಲ್ ನಂಬರ್ ಕೊಟ್ಟರೆ ಅದು ಓಟಿಪಿ ಹೋಗುವುದಿಲ್ಲ. ಅಥವಾ ಬೇರೆ ನಂಬರಿಗೆ ಓಟಿಪಿ ಹೋಗಬಹುದು.ವಿದ್ಯಾರ್ಥಿಗಳ ಖಾತೆಗೆ ಯಶಸ್ವಿಯಾಗಿ ಹಣ ಬಂದಿರುವುದು
ಉಪಸಂಹಾರ.(conclusion).
ಆತ್ಮೀಯ ವಿದ್ಯಾರ್ಥಿಗಳೇ ನಿಮ್ಮ ಮುಂದಿನ ಭವಿಷ್ಯಕ್ಕಾಗಿ ಈಗನಿಂದಲೇ ಇಂತಹ ಅರ್ಜಿಗಳನ್ನು ಸ್ವೀಕರಿಸಿ. ಏಕೆಂದರೆ ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ ಮುಂದೆ ನಿಮ್ಮ ವಿದ್ಯಾಭ್ಯಾಸ ಹಣಯಿಲ್ಲದೆ ತೊಂದರೆ ಆಗಬಹುದು. ದಹ ಪ್ರೈಸ್ ಮನಿಗ್ ಅರ್ಜೆ ಹಾಕಿದ್ದಾರೆ ಆ ಹಣ ಬರುವುದು ಅದರಿಂದ ನಿಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ನೆರವಾಗುತ್ತದೆ.ಮತ್ತೆ ನೀವು ಮುಂದೆ ಕಾಲೇಜಿಗೆ ಸೇರುವಾಗ ಅಡ್ಮಿಶನ್ ಫೀಸ್ ನಲ್ಲಿ ಇದ್ದಾರಾ ಅನ್ನು ಬಳಸಬಹುದು. ತಮತಮ್ಮ ದಿನ ಪುಸ್ತಕಗಳನ್ನು ಕೊಂಡುಕೊಳ್ಳಲು ಸಹಾಯ ಮಾಡುತ್ತದೆ. ಹಾಗಾಗಿ ಆಜ್ಞೆ ವಿದ್ಯಾರ್ಥಿಗಳೇ ನೀವು ಇದನ್ನು ಮಾತ್ರ ಮರೆಯಬೇಡಿ ಈ ರೀತಿ ಯೋಜನೆ ಬಂದಾಗೆಲ್ಲ ಅರ್ಜಿಯನ್ನು ಸಲ್ಲಿಸಿ.ಮುಂಬರುವ ಹಣ ನಿಮ್ಮ ವಿದ್ಯಾಭ್ಯಾಸಕ್ಕೆ ನೆರವಾಗುತ್ತದೆ.
ಪ್ರೋತ್ಸಾಹ ಧನವು ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಆಸರೆಯಾಗುತ್ತದೆ. ಸರಿಯಾದ ಸಮಯಕ್ಕೆ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವುದು ನಿಮ್ಮ ಜವಾಬ್ದಾರಿಯಾಗಿದೆ. ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದರೆ, ನಿಮ್ಮ ಸ್ನೇಹಿತರೊಂದಿಗೂ ಹಂಚಿಕೊಳ್ಳಿ.
ನನ್ನ ವಾಟ್ಸಪ್ ಗ್ರೂಪ್ ಗೆ ಬಂದು ಜಾಯಿನ್ ಆಗಿ ಇಲ್ಲಿದೆ ನೋಡಿ ಲಿಂಕ್ ಇದನ್ನು ಒತ್ತಿ ಹಿಡಿದುಕೊಳ್ಳಿ ನಂತರ ಓಪನ್ ಮಾಡಿ ಅಲ್ಲಿಗೆ ಹೋಗಿ ಜಾಯಿನ್ ಆಗಿ.
https://chat.whatsapp.com/IG9RDTYwIdaFzZGK76inGX
Thank you…
ಲೇಖಕರು: A UMESHA. Yarangaligi.. ಸಂಪರ್ಕಿಸಿ:aumesha27@gmail.com
ನನ್ನ ಹೆಸರು ಎ ಉಮೇಶ್. ನಾನು ತಂತ್ರಜ್ಞಾನ (Tech), ಹೊಸ ಉದ್ಯೋಗಗಳು(New Jobs) ಮತ್ತು ಸರ್ಕಾರಿ ಯೋಜನೆಗಳು (Government Schemes) ಇವುಗಳ ಮೇಲೆ ಹೆಚ್ಚಿನ ಲೇಖನಗಳನ್ನು ಬರೆದು ಜನರಿಗೆ ಉಪಯುಕ್ತ ಮಾಹಿತಿಯನ್ನು ನೀಡುತ್ತೇನೆ.
Thank you……
