Ration Card e-KYC Update: Ration card iddavarige ದೊಡ್ಡ ಅಪ್ಡೇಟ್! ಇ-ಕೆವೈಸಿ ಮಾಡಿಸುವುದು ಕಡ್ಡಾಯವೇ?

ರೇಷನ್ ಕಾರ್ಡ್ ಇದ್ದವರಿಗೆ ದೊಡ್ಡ ಅಪ್ಡೇಟ್! ಇ-ಕೆವೈಸಿ (e-KYC) ಮಾಡಿಸುವುದು ಕಡ್ಡಾಯವೇ? ಇಲ್ಲಿದೆ ಸಂಪೂರ್ಣ ಮಾಹಿತಿ…Ration Card New Update…Ration Card e-KYC Karnataka

ರೇಷನ್ ಕಾರ್ಡ್ ಹೊಸ ಅಪ್ಡೇಟ್, ಅನ್ನಭಾಗ್ಯ ಯೋಜನೆ ಹಣ, ಗೃಹಲಕ್ಷ್ಮಿ

Ration Card e-KYC Update.

ಪೀಠಿಕೆ (Introduction)

ನಮಸ್ಕಾರ ಗೆಳೆಯರೇ ಇಂದು ನಾವು ತಿಳಿದುಕೊಳ್ಳಲು ಹೊರಟಿರುವುದು ಏನೆಂದರೆ ಅದು ರೇಷನ್ ಕಾರ್ಡ್ ಬಗ್ಗೆ..

ಕರ್ನಾಟಕದಲ್ಲಿ ರೇಷನ್ ಕಾರ್ಡ್ ಕೇವಲ ಅಕ್ಕಿ ಅಂತಹ ರೇಷನ್ ಗಳನ್ನು ಪಡೆಯುವುಕ್ಕೆ ಅಲ್ಲದೆ ಇನ್ನು ಮುಂತಾದ ಗ್ಯಾರಂಟಿಗಳಿಗು ಇದು ಸಹಾಯ ಮಾಡುತ್ತದೆ.ಅದರಲ್ಲೂ ರೇಷನ್ ಕಾರ್ಡ್ ನಿಂದ ಗ್ಯಾರಂಟಿಗಳನ್ನು ಪಡೆಯಬಹುದಾದ ಗ್ಯಾರಂಟಿಗಳು ಈ ಕೆಳಗಿನಂತಿವೆ

1. ಗೃಹಲಕ್ಷ್ಮಿ ಯೋಜನೆ.

2 ಅನ್ನಭಾಗ್ಯ ಯೋಜನೆ.

ಒಂದು ವೇಳೆ ನಿಮ್ಮ ಬಳಿ ರೇಷನ್ ಕಾರ್ಡ್ ಇದ್ದರೆ ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದರಲ್ಲಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಹೊರಡಿಸಿರುವ ಹೊಸ ನಿಯಮಗಳ ಬಗ್ಗೆ ನೀವು ತಿಳಿದುಕೊಳ್ಳುವುದು ಅತ್ಯಗತ್ಯವಿದೆ.

ಇತ್ತೀಚಿನ ದಿನಗಳಲ್ಲಿ ರೇಷನ್ ಕಾರ್ಡ್ ಅಪ್ಡೇಟ್ಗೆ ಸರ್ಕಾರ ಕಡೆಯಿಂದ ರೇಷನ್ ಕಾರ್ಡ್ ಅಪ್ಡೇಟ್ ಮಾಡಲು ಬಿಟ್ಟಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಮೂಡುವ ಪ್ರಶ್ನೆಗಳು ಏನೆಂದರೆ ಇ ಕೆವೈಸಿ ಮಾಡಿಸದಿದ್ದರೆ ಎಂಬ ಪ್ರಶ್ನೆಗಳು ಮೂಡಿವೆ.

ರೇಷನ್ ಕಾರ್ಡ್ ಅಪ್ಡೇಟ್ ಎಂದರೇನು?(What is Ration Card New Update?)

ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಸರ್ಕಾರ ಜಂಟಿಯಾಗಿ ಪಡಿತರ ಚೀಟಿ ಹೊಂದಿರುವ ಗ್ರಾಹಕರಿಗೆ ಒಂದು ಮುಖ್ಯವಾದ ಸೂಚನೆ ನೀಡಿದೆ. ಅದರ ಪ್ರಕಾರ, ರೇಷನ್ ಕಾರ್ಡ್‌ನಲ್ಲಿ ಹೆಸರಿರುವ ಪ್ರತಿಯೊಬ್ಬ ಸದಸ್ಯರೂ ತಮ್ಮ ಆಧಾರ್ ಕಾರ್ಡ್ ಲಿಂಕ್ (Aadhaar Link to Ration Card) ಮಾಡುವುದರ ಜೊತೆಗೆ ಬಯೋಮೆಟ್ರಿಕ್ (Fingerprint) ನೀಡಿ ಇ-ಕೆವೈಸಿ ಅಪ್ಡೇಟ್ ಮಾಡಿಸುವುದು ಕಡ್ಡಾಯಗೊಳಿಸಲಾಗಿದೆ.

ಸರ್ಕಾರ ವಿಕ್ರಮಾನ ಕೈಗೊಳ್ಳಲು ಕಾರಣವೇನೆಂದರೆ,

ಮೊದಲು ಮರಣ ಹೊಂದಿರುವ ಸದಸ್ಯರು ಮತ್ತು ಮದುವೆಯಾಗಿ ಬೇರೆ ಮನೆಗೆ ಹೋಗಿರುವ ಸದಸ್ಯರು ಆ ಹಳೆಯ ರೇಷನ್ ಕಾರ್ಡ್ ನಲ್ಲಿ ಹಾಗೇ ಇರುತ್ತಾರೆ ಇದರಿಂದಾಗಿ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆ ಸಿಗುತ್ತಿರುವುದಿಲ್ಲ. ಇದರಿಂದಾಗಿ ಫಲಾನುಭವಿಗಳಿಗೆ ಮತ್ತು ಅನ್ನದಾತರಿಗೆ ಎಲ್ಲರಿಗೆ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ರೇಷನ್ ಸಿಗಲಿ ಎಂದು ಸರ್ಕಾರವು ಕೈಗೊಂಡಿದೆ.

ಇ-ಕೆವೈಸಿ (e-KYC) ಮಾಡಿಸುವುದು ಯಾಕೆ ಕಡ್ಡಾಯ?

ನೀವೇನಾದರೂ e kyc ಮಾಡಿಸದಿದ್ದರೆ ಈ ಕೆಳಗಿನ ತೊಂದರೆಗಳನ್ನು ಅನುಭವಿಸಬೇಕಾದದ್ದು.

1. ಸದಸ್ಯರ ಹೆಸರು ರದ್ದು:- ನಿಮ್ಮ ಬಳಿ ರೇಷನ್ ಕಾರ್ಡ್ ಇದ್ದು ಅದರಲ್ಲಿ ಇ ಕೇವೈಸಿ ಮಾಡಿಸದಿದ್ದರೆ ಅವರ ಹೆಸರನ್ನು ರೇಷನ್ ಕಾರ್ಡ್ ನಿಂದಲ ಕಡಿತಗೊಳ್ಳಿಸುತ್ತದೆ.

2. ನಿಮ್ಮ ಮನೆಯಲ್ಲಿರುವ ಸದಸ್ಯರ ಸಂಖ್ಯೆ ಕಡಿಮೆಯಾದರೆ ನಿಮಗೆ ದೊರೆಯುವ ರೇಷನ್ ಸಹ ಕಡಿಮೆಯಾಗುತ್ತದೆ.

3. ಇದರಿಂದ ಗೃಹಲಕ್ಷ್ಮಿ ಹಣಕ್ಕೆ ಕಡಿತವಾಗಬಹುದು. ನಿಮ್ಮ ಮನೆಯಲ್ಲಿರುವ ಯಜಮಾನಿ ಹೆಸರನ್ನು ಕೆವೈಸಿ ಮಾಡಿಸದಿದ್ದರೆ ಕರ್ನಾಟಕ ಸರ್ಕಾರ ನೀಡುವ ತಿಂಗಳಿಗೆ 2000 ಹಣ ಬರುವುದರಲ್ಲಿ ವ್ಯತ್ಯಾಸವಾಗಬಹುದು.

4. ಅನ್ನ ಭಾಗ್ಯ ಹಣ ಸ್ಥಗಿತ: ಈಗ ಕರ್ನಾಟಕ ಸಹಕಾರ ಕೊಡುತ್ತಿರುವ ಹೆಚ್ಚುವರಿ ಐದು ಕೆಜಿ ಹಣ ಬರುವದಿಲ್ಲ. ಇ ಕೇವೈಸಿ ಮಾಡಿಸಿದರೆ ಹಣ ಬರುತ್ತದೆ.

Karnataka Ration Card e-KYC,​

ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸುವುದು ಹೇಗೆ? (How to do Ration Card e-KYC?)

ಅನೇಕ ಜನರು ಏನು ಮಾಡುತ್ತಾರೆಂದರೆ ಮೊಬೈಲ್ ಮೂಲಕ ಅಥವಾ ಯಾವುದಾದರೂ ಲಿಂಕ್ ಗಳ ಮೂಲಕ e-kyc ಮಾಡಲು ಹೋಗುತ್ತರೆ.ಆದರೆ ಅದು ಮೊಬೈಲ್ ಮತ್ತು ಲಿಂಕ್ ಗಳ ಮೂಲಕ ಈ ಕೆವೈಸಿ ಮಾಡಲು ಬರುವುದಿಲ್ಲ. ಯಾಕೆಂದ್ರೆ ಅದಕ್ಕೆ ಬಯೋಮೆಟ್ರಿಕ್ ಮತ್ತು ಫಿಂಗರ್ ಪ್ರಿಂಟ್ ಅನ್ನು ಬಳಸಬೇಕು ಇದರಿಂದ ಮೊಬೈಲಿಗೆ ಕನೆಕ್ಟ್ ಮಾಡಲು ಬರುವುದಿಲ್ಲ. ಆದ್ದರಿಂದ ನೀವು ಏನು ಮಾಡಬೇಕೆಂದರೆ ನೀವು ಗ್ರಾಮ ಓನ್ ಕೇಂದ್ರಕ್ಕೆ ಭೇಟಿ ನೀಡಬಹುದು.

1. ನ್ಯಾಯ ಬೆಲೆ ಅಂಗಡಿ (ರೇಷನ್ ಶಾಪ್): ನೀವು ನೇರವಾಗಿ ರೇಷನ್ ಶಾಪ್ ಬಳಿ ಹೋಗಿ ಈ ಕೆವೈಸಿ ಮಾಡಿಸಬಹುದು.

2. ಗ್ರಾಮ ಓನ್ ಕೇಂದ್ರ: ನೀವು ಗ್ರಾಮ ಕೇಂದ್ರಕ್ಕೆ ಭೇಟಿ ನೀಡಿ ಅವರಲ್ಲಿ ಹೋಗಿ ಈ ಕೆ ವೈ ಸಿ ಅರ್ಜಿ ಹಾಕಬಹುದು.

ಬೇಕಾಗುವ ದಾಖಲೆಗಳು (Required Documents):​

ನಿಮ್ಮ ರೇಷನ್ ಕಾರ್ಡ್ ನಂಬರ್ (Ration Card Number)​ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ (Aadhaar Card)​ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ.

ನಿಮ್ಮ ರೇಷನ್ ಕಾರ್ಡ್ ಇ-ಕೆವೈಸಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ? (How to Check e-KYC Status?)

ನಿಮ್ಮ ರೇಷನ್ ಕಾರ್ಡ್ e-kyc ಇಲ್ಲ ಎಂದು ನೀವು ಈಗ ಮೊಬೈಲಲ್ಲಿ ಚೆಕ್ ಮಾಡಿಕೊಳ್ಳಬಹುದು. ಅದು ಹೇಗೆ ಎಂದು ಈ ಕೆಳಗೆ ಏನು ಅಂಶಗಳ ಮೇಲೆ ನೀವು ಚೆಕ್ ಮಾಡಬಹುದು.​

1.ಮೊದಲು ಕರ್ನಾಟಕ ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ (ahara.kar.nic.in) ಭೇಟಿ ನೀಡಿ.

​2.ಅಲ್ಲಿ ‘ಇ-ಸೇವೆಗಳು’ (e-Services) ಟ್ಯಾಬ್ ಮೇಲೆ ಕ್ಲಿಕ್ ಮಾಡಿ.​ನಂತರ ‘ಪಡಿತರ ಚೀಟಿ ವಿವರ’ (ಪಡೆಯಲಾದ ಪಡಿತರ ಚೀಟಿ) ಆಪ್ಷನ್ ಆರಿಸಿಕೊಳ್ಳಿ.

​3.ನಿಮ್ಮ ಜಿಲ್ಲೆಯ ಲಿಂಕ್ ಅನ್ನು ಸೆಲೆಕ್ಟ್ ಮಾಡಿ, ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ ಸಬ್ಮಿಟ್ ಮಾಡಿ.​

4.ಈಗ ನಿಮ್ಮ ಕುಟುಂಬದ ಸದಸ್ಯರ ಪಟ್ಟಿ ಕಾಣಿಸುತ್ತದೆ. ಅಲ್ಲಿ ಪ್ರತಿಯೊಬ್ಬರ ಹೆಸರಿನ ಮುಂದೆ “Active” ಮತ್ತು ಇ-ಕೆವೈಸಿ ಜಾಗದಲ್ಲಿ “Success” ಎಂದು ತೋರಿಸುತ್ತಿದ್ದರೆ, ನಿಮ್ಮ ಇ-ಕೆವೈಸಿ ಯಶಸ್ವಿಯಾಗಿದೆ ಎಂದರ್ಥ. ಯಾರ ಹೆಸರಿನ ಮುಂದೆ ಖಾಲಿ ಇರುತ್ತದೆಯೋ ಅವರು ತಕ್ಷಣ ಅಂಗಡಿಗೆ ಹೋಗಿ ಕೆವೈಸಿ ಮಾಡಿಸಬೇಕು.

ಹೊಸ ರೇಷನ್ ಕಾರ್ಡ್ (New Ration Card Application) ಮತ್ತು ತಿದ್ದುಪಡಿ ಅಪ್ಡೇಟ್ಆದರೆ ಈಗ ಸದ್ಯಕ್ಕೆ ಹೊಸ ರೇಷನ್ ಕಾರ್ಡ್ ಮಾಡಿಸಲು ಸರ್ಕಾರವು ಸ್ಥಗಿತಗೊಳಿಸಿದೆ.ಆದರೆ ಮದುವೆಯಾಗಿ ಹೊರಟಿರುವ ವದುವಿನ ಹೆಸರು, ಮಗುವಿನ ಹೆಸರು, ರೇಷನ್ ಕಾರ್ಡ್ ಏನಾದರೂ ಹೆಸರು ಅಥವಾ ಇನ್ನಿತರ ಮಾಹಿತಿ ತಪ್ಪಿದ್ದಲ್ಲಿ ತಿದ್ದುಪಡಿ ಮಾಡಲು ಅವಕಾಶವಿರುತ್ತದೆ. ಮತ್ತು ಇದನ್ನು ಕೂಡ ಸರಕಾರ ಕಾಲಕ್ಕೆ ಬದಲಾಯಿಸುತ್ತದೆ. ನೀವೇನಾದರೂ ನಿಮ್ಮ ಹೆಸರುಗಳು ಮತ್ತು ಇನ್ನಿತರ ಮಾಹಿತಿಗಳು ತಪ್ಪಿದ್ದಲ್ಲಿ ತಿದ್ದುಪಡಿ ಮಾಡಿಸಬೇಕೆಂದು ಇದ್ದರೆ ನೀವು ಬೆಂಗಳೂರು ಅಥವಾ ಗ್ರಾಮವನ್ನು ಗಳಿಗೆ ಭೇಟಿ ನೀಡಿ ತಿದ್ದುಪಡಿ ಮಾಡಿಸಬಹುದು.

FAQ – ಪದೇ ಪದೇ ಕೇಳಲಾಗುವ ಪ್ರಶ್ನೆಗಳು.

​ಪ್ರಶ್ನೆ 3: ಇ-ಕೆವೈಸಿ ಮಾಡಿಸಲು ಕೊನೆಯ ದಿನಾಂಕ ಯಾವುದು?ಉತ್ತರ: ಸರ್ಕಾರವು ಜನರಿಗೆ ತೊಂದರೆಯಾಗಬಾರದು ಎಂದು ದಿನಾಂಕವನ್ನು ವಿಸ್ತರಿಸುತ್ತಾ ಬಂದಿದೆ. ಆದರೆ ಯಾವುದೇ ಕ್ಷಣದಲ್ಲಿ ಲಿಂಕ್ ಕ್ಲೋಸ್ ಆಗಬಹುದು, ಆದ್ದರಿಂದ ಆದಷ್ಟು ಬೇಗ ನಿಮ್ಮ ಹತ್ತಿರದ ರೇಷನ್ ಅಂಗಡಿಗೆ ಹೋಗಿ ಇದನ್ನು ಮುಗಿಸಿಕೊಳ್ಳುವುದು ಒಳ್ಳೆಯದು.​​

ಮುಕ್ತಾಯ (Conclusion)

ಗೆಳೆಯರೇ ರೇಷನ್ ಕಾರ್ಡ್ ಎಂಬುದು ಕರ್ನಾಟಕ ಜನರಕ್ಕಾಗಿದ್ದು ಇದನ್ನು ನೀವು ತಪ್ಪದೆ ಬಳಸಿಕೊಳ್ಳಿ, ಯಾಕೆಂದರೆ ಇದರಿಂದ ತುಂಬಾನೇ ಅನುಕೂಲಗಳಿವೆ ಅದಕ್ಕೆ ಮತ್ತು ಅನ್ನ ಭಾಗ್ಯ ಯೋಜನೆಗಳನ್ನು ಪಡೆದುಕೊಳ್ಳಲು ಮತ್ತು ಮನೆ ಯಜಮಾನಿಗೆ ತಿಂಗಳು ತಿಂಗಳು ಬರುವ 2000 ಗೃಹಲಕ್ಷ್ಮಿಯನ್ನು ಬಳಸಿಕೊಳ್ಳಲು ಮತ್ತು ಇನ್ನಿತರ ಸೌಲಭ್ಯಗಳಗಾಗಿ ಈಗಲೇ ಮಾಡಿಸಿಕೊಳ್ಳಿ. ನೀವೇನಾದರೂ ರೇಷನ್ ಕಾರ್ಡ್ ಹೊಸದಾಗಿ ಮಾಡಿಸಿಕೊಳ್ಳು ಬೇಕಾದರೆ ಅಪ್ಡೇಟ್ ಬಂದಾಗ ನಾನು ನಿಮಗೆ ತಿಳಿಸುತ್ತೇನೆ.

ಮರೀಬೇಡಿ ತಪ್ಪದೆ ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸಿ.

ನನ್ನ ಈ ರೇಷನ್ ಕಾರ್ಡ್ ಅಪ್ಡೇಟ್ ಮತ್ತು e-kyc ಮಾಡಿಸಲು ತಿಳಿಸಿದ ಮಾಹಿತಿ ಉಪಯುಕ್ತವಾಗಿದೆ ಎಂದು ನಾನು ಭಾವಿಸಿಕೊಳ್ಳುತ್ತಿದ್ದೇನೆ ಇನ್ನು ಇತರ ಮಾಹಿತಿಗಾಗಿ ನಮ್ಮ ಬ್ಲಾಗನ್ನು ಫಾಲೋ ಮಾಡಿಕೊಳ್ಳಿ ನಿಮಗೇನಾದರೂ ಡೌಟ್ ಇದ್ದಲ್ಲಿ ಕಾಮೆಂಟ್ ಹಾಕಿ. ಈ ಮಾಹಿತಿಯನ್ನು ಆದಷ್ಟು ಎಲ್ಲ ಜನರಿಗೂ ಶೇರ್ ಮಾಡಲು ಮರೆಯಬೇಡಿ. ಜೈ ಹಿಂದ್ ಜೈ ಕರ್ನಾಟಕ ಮಾತೆ….

WhatsApp link👇👇 ಒತ್ತಿ ಹಿಡಿಯಿರಿ, ಓಪನ್ ಮಾಡಿ.

https://chat.whatsapp.com/HnyKonTF53V802ox5pUyDO

Thank you….

ಲೇಖಕರು: A UMESHA. Yarangaligi.

ಸಂಪರ್ಕಿಸಿ: aumesha27@gmail.com

Leave a Comment